ಐಒಸಿಎಲ್ :ಜೂನಿಯರ್‌ ಎಂಜಿನಿಯರಿಂಗ್ ಅಸಿಸ್ಟೆಂಟ್ ಗಳ ನೇಮಕಾತಿ

ಐಒಸಿಎಲ್ ನಲ್ಲಿ ವಿವಿಧ ವಿಭಾಗಗಳಲ್ಲಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 45 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್‌ 31 ಕೊನೆಯ ದಿನವಾಗಿದೆ.

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್ ) ನಲ್ಲಿ ವಿವಿಧ ವಿಭಾಗಗಳಲ್ಲಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 45 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್‌ 31 ಕೊನೆಯ ದಿನವಾಗಿದೆ.

ಕೆ ಆರ್ ಐ ಡಿ ಎಲ್ ವಿವಿಧ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಅರ್ಜಿ ಆಹ್ವಾನಕೆ ಆರ್ ಐ ಡಿ ಎಲ್ ವಿವಿಧ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಅರ್ಜಿ ಆಹ್ವಾನ

ಐಒಸಿಎಲ್ ನೇಮಕಾತಿ

ಹುದ್ದೆಗಳ ವಿವರ

ಪ್ರೊಡಕ್ಷನ್‌ 15, ಎಲೆಕ್ಟ್ರಿಕಲ್‌-7, ಮೆಕ್ಯಾನಿಕಲ್‌-13, ಇನ್‌ಸ್ಟ್ರುಮೆಂಟೇಶನ್‌-9 ಮತ್ತು ಫೈರ್‌ ಆ್ಯಂಡ್‌ ಸೇಫ್ಟಿ ವಿಭಾಗದಲ್ಲಿ ಒಂದು ಹುದ್ದೆ ಖಾಲಿ ಇದೆ.

ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 22, ಎಸ್‌ಸಿ ಅಭ್ಯರ್ಥಿಗಳಿಗೆ 9, ಎಸ್‌ಟಿ ವರ್ಗದವರಿಗೆ 1 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 13 ಹುದ್ದೆಗಳನ್ನು ಮೀಸಲಿಡಲಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ನವೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಬೆಂಗಳೂರಿನಲ್ಲಿ ಜಾಬ್ ಮೇಳ: 40ಕ್ಕೂ ಹೆಚ್ಚು ಕಂಪನಿಗಳ ಭಾಗಿ ಸಾಧ್ಯತೆ ಬೆಂಗಳೂರಿನಲ್ಲಿ ಜಾಬ್ ಮೇಳ: 40ಕ್ಕೂ ಹೆಚ್ಚು ಕಂಪನಿಗಳ ಭಾಗಿ ಸಾಧ್ಯತೆ

ವಿದ್ಯಾರ್ಹತೆ

ಕೆಮಿಕಲ್‌, ರಿಫೈನರಿ, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌, ಇನ್‌ಸ್ಟ್ರುಮೆಂಟೇಶನ್‌, ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಕಂಟ್ರೋಲ್‌ ಅಥವಾ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 26 ವರ್ಷ ಮೀರಿರಬಾರದು. ಮೀಸಲಾತಿ ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 150 ರೂ. ಶುಲ್ಕ ಪಾವತಿಸಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆಗೆ ಕೊನೆ ದಿನ: ಅಕ್ಟೋಬರ್‌ 31, 2017
  • ಲಿಖಿತ ಪರೀಕ್ಷೆ: ನವೆಂಬರ್‌ 2017
  • ಪರೀಕ್ಷಾ ಫಲಿತಾಂಶ: ಡಿಸೆಂಬರ್‌ 15, 2017
  • ಅಂತಿಮ ಆಯ್ಕೆ ಪಟ್ಟಿ: ಜನವರಿ 15, 2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
IOCL invites online applications from eligible engineering candidates to fill junior engineer assistants.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X