ಐಆರ್‌ಸಿಟಿಸಿ ನೇಮಕಾತಿ 2019: ಮೇಲ್ವಿಚಾರಕ ಹುದ್ದೆಗಳಿಗೆ ವಾಕ್‌-ಇನ್‌ ಇಂಟರ್‌ವ್ಯೂ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ 74 ಮೇಲ್ವಿಚಾರಕ (ಹಾಸ್ಪಿಟಾಲಿಟಿ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಹುದ್ದೆಗಳಿಗೆ ಸೇರಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 9,10 ಮತ್ತು 12 ರಂದು ವಿವಿದೆಡೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಂದರ್ಶನಕ್ಕೆ ಒಯ್ಯತಕ್ಕದ್ದು.

 ಐಆರ್‌ಸಿಟಿಸಿ ಯಲ್ಲಿ  74 ಮೇಲ್ವಿಚಾರಕ ಹುದ್ದೆಗಳು ಖಾಲಿ ಇವೆ

 

CRITERIA DETAILS
Name Of The Posts ಮೇಲ್ವಿಚಾರಕ (ಹಾಸ್ಪಿಟಾಲಿಟಿ)
Organisation ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ
Educational Qualification ಬಿಎಸ್ಸಿ
Job Location ತಮಿಳು ನಾಡು, ಕೇರಳ, ಕರ್ನಾಟಕ, ಭಾರತದೆಲ್ಲೆಡೆ
Salary Scale ತಿಂಗಳಿಗೆ 25,000/-ರೂ
Application Start Date March 14, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಯೋಮಿತಿ:

ಮಾರ್ಚ್ 1,2019 ರ ಅನ್ವಯ ಗರಿಷ್ಟ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ , ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಮತ್ತು ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 13 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಮೇಲ್ವಿಚಾರಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 9,10 ಮತ್ತು 12 ರಂದು ನಡೆಯಲಿರುವ ವಾಕ್‌-ಇನ್‌ ಇಂಟರ್‌ವ್ಯೂ ನಲ್ಲಿ ಭಾಗವಹಿಸಬಹುದು.

 

ಸಂದರ್ಶನ ನಡೆಯುವ ಸ್ಥಳದ ವಿವರ:

ಏಪ್ರಿಲ್ 9,2019 ರಂದು ಸಂದರ್ಶನ ನಡೆಯುವ ಸ್ಥಳ:

ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್ (ಕ್ಯಾಟರಿಂಗ್ ಕಾಲೇಜು), ಜಿ.ವಿ.ರಾಜ ರೋಡ್, ಕೊವಲಂ, ತಿರುವನಂತಪುರಂ,ಕೇರಳ-695527

ಏಪ್ರಿಲ್ 10,2019 ರಂದು ಸಂದರ್ಶನ ನಡೆಯುವ ಸ್ಥಳ:

ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, ಎಂ.ಎಸ್‌ ಬ್ಯುಲ್ಡಿಂಗ್ ಮತ್ತು ಎಸ್‌ಕೆಎಸ್‌ಜೆಟಿಐ ಹಾಸ್ಟೆಲ್ ಹತ್ತಿರ, ಎಸ್‌.ಜೆ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು- 560001

ಏಪ್ರಿಲ್ 12,2019 ರಂದು ಸಂದರ್ಶನ ನಡೆಯುವ ಸ್ಥಳ:

ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, 4ನೇ ಕ್ರಾಸ್, ಸಿ.ಐ.ಟಿ ಕ್ಯಾಂಪಸ್, ತಾರಾಮಣಿ (ಪೋ), ಚೆನ್ನೈ -600113

ಅಭ್ಯರ್ಥಿಗಳು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
indian Railway Catering and Tourism Corporation Limited (IRCTC) is going to recruit 74 candidates to fill their Supervisor (Hospitality) in Tamilnadu, Kerala, Karnataka, All India. Job Aspirants are requested to go through official website of IRCTC job notification 2019 before apply. Eligible and interested candidates can attend direct walk-in-interview on 09th, 10th & 12th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X