ಐಆರ್‌ಡಿಎಐನಲ್ಲಿ ವಿವಿಧ ಮ್ಯಾನೇಜರ್‌ ಹುದ್ದೆಗಳ ನೇಮಕಾತಿ

Posted By:

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಖಾಲಿ ಇರುವ ವಿವಿಧ ಮ್ಯಾನೇಜರ್‌ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 29 ಹುದ್ದೆಗಳು ಖಾಲಿ ಇದ್ದು, ಅನುಭವೀ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್‌ 20 ಕೊನೆಯ ದಿನವಾಗಿದೆ.

ಮ್ಯಾನೇಜರ್‌ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಮ್ಯಾನೇಜರ್‌ ಗ್ರೇಡ್‌ ಬಿ: 12 ಹುದ್ದೆಗಳು
ವಿದ್ಯಾರ್ಹತೆ: ಐಟಿ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಇ/ಬಿಟೆಕ್‌ (ಐಟಿ/ಸಿಎಸ್‌) ಓದಿರಬೇಕು. ಕನಿಷ್ಠ 10 ವರ್ಷಗಳ ಸೇವಾನುಭವ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವೇತನ ಶ್ರೇಣಿ: 110132/-

ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌: 10 ಹುದ್ದೆಗಳು
ವಿದ್ಯಾರ್ಹತೆ: ಎಲ್‌ಎಲ್‌ಬಿ ಮತ್ತು ಎಸಿಎ/ಎಸಿಎಸ್‌/ಸಿಎಂಎ ಅಥವಾ ಸಿಎಫ್‌ಎ ಓದಿರುವವರು ತಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ 15 ವರ್ಷಗಳ ಸೇವಾನುಭವ ಹೊಂದಿರಬೇಕಾದದು ಕಡ್ಡಾಯ.
ವೇತನ ಶ್ರೇಣಿ: 143530/-

ಡೆಪ್ಯುಟಿ ಜನರಲ್‌ ಮ್ಯಾನೇಜರ್‌: 5 ಹುದ್ದೆಗಳು
ವಿದ್ಯಾರ್ಹತೆ: ಬಿಇ/ಬಿಟೆಕ್‌ (ಐಟಿ/ಸಿಎಸ್‌) ಅಥವಾ ಎಂಸಿಎ ಅಥವಾ ಐಟಿ/ಸಿಎಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಭ್ಯರ್ಥಿಗಳಿಗೆ 20 ವರ್ಷಗಳ ಸೇವಾನುಭವ ಕಡ್ಡಾಯ.
ವೇತನ ಶ್ರೇಣಿ: 189152/-

ಜನರಲ್‌ ಮ್ಯಾನೇಜರ್‌: 2 ಹುದ್ದೆಗಳು
ವಿದ್ಯಾರ್ಹತೆ: ಬಿಇ/ಬಿಟೆಕ್‌ (ಐಟಿ/ಸಿಎಸ್‌) ಅಥವಾ ಎಂಸಿಎ ಅಥವಾ ಐಟಿ/ಸಿಎಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವೇತನ ಶ್ರೇಣಿ:217794/-

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 200 ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಕೆ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಅಕ್ಟೋಬರ್‌ 27ರೊಳಗೆ ಈ ವಿಳಾಸಕ್ಕೆ ಕಳುಹಿಸಿ:

The Executive Director (Gen),
Insurance Regulatory and Development Authority of India
3rd Floor, Parishrama Bhavan, Bashirbagh, Hyderabad - 500004.

ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್‌ 20, 2017

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
IRDAI invites applications through on-line mode from eligible Indian citizens with experience of working with Insurers, etc. for filling up the posts in the Grades of Manager, Assistant General Manager, Deputy General Manager and General Manager.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia