ಇಸ್ರೋ ಎನ್‍ ಆರ್‍ ಎಸ್‍ ಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‍ ಆರ್‍ ಎಸ್‍ ಸಿ) ವೈಜ್ಞಾನಿಕ ಸಹಾಯಕ (Scientific Assistant) ಮತ್ತು ತಂತ್ರಜ್ಞ (Technician) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

56 ವೈಜ್ಞಾನಿಕ ಸಹಾಯಕ (Scientific Assistant) ಮತ್ತು ತಂತ್ರಜ್ಞ (Technician) ಒಟ್ಟು 74 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಆಸಕ್ತ ಮತ್ತು ಅರ್ಹರು ನಿಗದಿತ ದಿನಾಂಕ ಜೂನ್ 10ರೊಳಗೆ NRSC ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ: 44900 ರು. ತಿಂಗಳಿಗೆ.
ವಯೋಮಿತಿ: 10/06/2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.

ಇಸ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ವೈಜ್ಞಾನಿಕ ಸಹಾಯಕ (Scientific Assistant) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಗಳಲ್ಲಿ ಬಿಎಸ್ ಸಿಯಲ್ಲಿ ಗಣಿತ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ತಂತ್ರಜ್ಞ (Technician) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಜತೆಗೆ ITI/NTC/NAC ಟ್ರೇಡ್ ಮುಗಿಸರಬೇಕು.

ಅರ್ಜಿ ಸಲ್ಲಿಕೆ

  • ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
  • ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಲಗತ್ತಿಸುವುದು.

ಸ್ಕ್ಯಾನ್ ಮಾಡಬೇಕಾದ ದಾಖಲೆಗಳು

  • ಇತ್ತೀಚಿನ ಭಾವಚಿತ್ರ
  • ಅಭ್ಯರ್ಥಿಯ ಸಹಿ
  • ಎಸ್ ಎಸ್ ಎಲ್ ಸಿ/ ಹತ್ತನೇ ತರಗತಿ ಅಂಕಪಟ್ಟಿ
  • ಪದವಿ/ಡಿಪ್ಲೊಮಾ/ಐಟಿಐ/ಎನ್ಎಸಿ ಅಂಕಪಟ್ಟಿಗಳು
  • ಜಾತಿ ಪ್ರಮಾಣ ಪತ್ರ
  • ಅಂಗವಿಕಲರ ಪ್ರಮಾಣ ಪತ್ರ
  • ಮಾಜಿ ಸೈನಿಕರು ತಮ್ಮ ಬಿಡುಗಡೆಯ ಪತ್ರ ನೀಡಬೇಕು

ಈ ಹುದ್ದೆಗಳು ಹಂಗಾಮಿಯಾಗಿದ್ದು ಅವಧಿ ಮುಗಿದ ನಂತರವೂ ಅವಶ್ಯವಿದ್ದಲ್ಲಿ ಮುಂದುವರೆಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-06-2017

ಪೂರ್ಣ ಅಧಿಸೂಚನೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳು ಗಳಿಸಿದ ಅಂಕ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 218.248.0.109:1895

English summary
National Remote Sensing Centre released new notification on their official website nrsc.gov.in for the recruitment of total 74 (seventy four) jobs

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia