ಬೆಂಗಳೂರು ಮತ್ತು ಹಾಸನ ಇಸ್ರೋದಲ್ಲಿ ಟೈಪಿಸ್ಟ್, ಟೆಕ್ನಿಷಿಯನ್ ನೇಮಕಾತಿ

Posted By:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೆಂಗಳೂರು ಮತ್ತು ಹಾಸನದ ಕೇಂದ್ರಗಳಲ್ಲಿ ಖಾಲಿ ಇರುವ ಟೈಪಿಸ್ಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

4 ಹಿಂದಿ ಟೈಪಿಸ್ಟ್ ಹಾಗೂ ಒಂದು ಟೆಕ್ನಿಷಿಯನ್ (ಎಲೆಕ್ಟ್ರಿಕಲ್) ಸೇರಿ ಒಟ್ಟು 05 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 28 ಜುಲೈ, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಕರ್ನಾಟಕದ ಇಸ್ರೋದಲ್ಲಿ ನೇಮಕಾತಿ

ಹುದ್ದೆ ವಿವರ

ಹಿಂದಿ ಟೈಪಿಸ್ಟ್-04 ಹುದ್ದೆಗಳು (ಬೆಂಗಳೂರು ಮಾತ್ರ ಹಾಸನ ಕೇಂದ್ರದಲ್ಲಿ)
ವಿದ್ಯಾರ್ಹತೆ: ಹಿಂದಿ ಟೈಪಿಸ್ಟ್ ಹುದ್ದೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಫಸ್ಟ್ ಕ್ಲಾಸ್ ನೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ವೇಗವಾಗಿ ಕಂಪ್ಯೂಟರ್ ನಲ್ಲಿ ಹಿಂದಿ ಟೈಪಿಂಗ್ ಮಾಡಲು ಬರಬೇಕು.

ಟೆಕ್ನಿಷಿಯನ್-01 ಹುದ್ದೆ (ಬೆಂಗಳೂರಿನಲ್ಲಿ)
ವಿದ್ಯಾರ್ಹತೆ: ಎಲೆಕ್ಟ್ರಿಕಲ್ ವಿಭಾಗದಲ್ಲಿ SSLC/SSC pass and ITI/ NTC/NAC ಉತ್ತೀರ್ಣರಾಗಿರಬೇಕು.

ವಯೋಮಿತಿ: 21/07/2017ರ ಅನ್ವಯಕ್ಕೆ ಹಿಂದಿ ಟೈಪಿಸ್ಟ್ ಹುದ್ದೆಗೆ 26 ವರ್ಷ. ಇನ್ನು ಟೆಕ್ನಿಷಿಯನ್ ಹುದ್ದೆಗೆ 35 ವರ್ಷ ನಿಗದಿ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಭಾವಚಿತ್ರದೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸತಕ್ಕದ್ದು.

ಅರ್ಜಿಯಲ್ಲಿನ ಎಲ್ಲಾ ದಾಖಲೆಗಳಿಗೂ ಅಭ್ಯರ್ಥಿಯು ಸ್ವಯಂ ದೃಢೀಕರಿಸಿ, ಅರ್ಜಿಯ ಲಕೋಟೆ ಮೇಲೆ ಯಾವ ಹುದ್ದೆಗೆ ಎಂದು ಸ್ಪಷ್ಟವಾಗಿ ದಪ್ಪಾಕ್ಷರದಲ್ಲಿ ನಮೂದಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-07-2017

ಅರ್ಜಿ ಸಲ್ಲಿಸಬೇಕಾದ ವಿಳಾಸ

AdministrativeOfficer (Recruitment),
ISRO Headquarters,
Antariksh Bhavan,
New BEL Road, Bangalore- 560094

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Indian Space Research Organization released new notification on their official website for the recruitment of total 05 (five) jobs out of which 04 (four) vacancies for Hindi Typist, 01 (one) for Technician B (Electrical) vacancy. Job seekers should apply on or before 28th July 2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia