ಬೇಜಾನ್ ಕೆಲಸ ಖಾಲಿ ಇದೆ. ನೀವು ಅಪ್ಲೈ ಮಾಡಿ ಗಿಟ್ಟಿಸಿಕೊಳ್ಳಬೇಕಷ್ಟೇ..

Posted By: Sushma Charhra

ನೀವು ಬ್ಯಾಂಕ್ ಅಧಿಕಾರಿಯಾಗಬೇಕು ಅಂತ ಕನಸು ಕಂಡಿದ್ದೀರಾ.. ಹಾಗಿದ್ರೆ ಇಲ್ಲಿದೆ ನೋಡಿ ಅವಕಾಶಗಳ ಮಹಾಪೂರ. ಒಂದಲ್ಲ ಎರಡಲ್ಲ ಬರೋಬ್ಬರಿ 760 ಹುದ್ದೆಗಳಿಗೆ ಐಡಿಬಿಐ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ನೀವು ಬಿಇ ಬಿಟೆಕ್ ಅಥವಾ ಇದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕೋರ್ಸ್ ಗಳಲ್ಲಿ ಪದವಿ ಪಡೆದಿದ್ರೆ ಅರ್ಜಿ ಸಲ್ಲಿಸಬಹುದು. ಆದ್ರೆ ಒಂದು ಕಂಡೀಷನ್... ನೀವು ಶೇಕಡಾ 65ರಷ್ಟು ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. ಈ ವರ್ಷ ಅಂದರೆ 2017-18 ರಲ್ಲಿ ಕೋರ್ಸ್

ಮುಕ್ತಾಯಗೊಳ್ಳಲಿರುವ ಅಭ್ಯರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದು. ಅಂದರೆ 31-8-2018 ರ ಒಳಗೆ ನಿಮ್ಮ ಪದವಿ ನಿಮ್ಮ ಕೈಯಲ್ಲಿರಬೇಕು. ಆದರೆ ಒಂದು ನೆನಪಿರಲಿ ನಿಮ್ಮ ವಯೋಮಿತಿ ಅಂದರೆ ವಯಸ್ಸು 35 ವರ್ಷ ಮೀರಿರಬಾರದು. 56100 ರೂ ವೇತನವನ್ನು ನಿಗದಿಪಡಿಸಲಾಗದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿದೆ. ಯಾರಿಗುಂಟು ಯಾರಿಗಿಲ್ಲ ಈ ಬಂಪರ್ ಆಫರ್.. ಈ ಕೆಲಸ ಗಿಟ್ಟಿಸಿಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ. ಅದೃಷ್ಟ ನಿಮ್ಮ ಪರ ಬ್ಯಾಟಿಂಗ್ ಮಾಡ್ತಿದ್ಯಾ ಅನ್ನೋದನ್ನು ಬೇಕಾದ್ರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷಿಸಿಕೊಳ್ಳಬಹುದು.

ಬೇಜಾನ್ ಕೆಲಸ ಖಾಲಿ ಇದೆ. ನೀವು ಅಪ್ಲೈ ಮಾಡಿ ಗಿಟ್ಟಿಸಿಕೊಳ್ಳಬೇಕಷ್ಟೇ..

ರೈಲ್ವೇ ಇಲಾಖೆಯಲ್ಲಿ ಕೆಲಸ ಖಾಲಿ ಇದೆ

ಒಟ್ಟು 26502 ಹುದ್ದೆಗಳಿಗೆ ರೈಲ್ವೇ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಫೆಬ್ರವರಿ 3 ರಿಂದ 5 ರ ತನಕ ಬಿಇಎಲ್ ವೆಬ್ ಸೈಟ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕಳಿಸಬಹುದು. 17673 ಅಸಿಸ್ಟೆಂಟ್ ಲೋಕೋ ಪೈಲೆಟ್(ಎಎಲ್ಪಿ), 8829 ಟೆಕ್ನೀಷಿಯನ್ ಹುದ್ದೆಗಳು ರೈಲ್ವೇ ಇಲಾಖೆಯಲ್ಲಿ ಖಾಲಿ ಇವೆಯಂತೆ.

ಡಿಗ್ರಿ, ಡಿಪ್ಲೋಮಾ,ಭೌತಶಾಸ್ತ್ರ, ಗಣಿತ,ವಿಷಯದಲ್ಲಿ ಪದವಿ, ಐಟಿಐ ಉತೀರ್ಣರಾದವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ನೆನಪಿರಲಿ ನಿಮ್ಮ ವಯಸ್ಸು 18 ರಿಂದ 28 ವರ್ಷ ಮೀರಿರಬಾರದು. ಸಂಬಳ ಎಷ್ಟು ಗೊತ್ತಾ..19900 ರೂಪಾಯಿ. ಇನ್ನೂ ಹೆಚ್ಚಿನ ಮಾಹಿತಿಗೆ ಬಿಇಎಲ್ ವೆಬ್ ಸೈಟ್ ಗೆ ಲಾಗಿನ್ ಆಗಿ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
ISRO issued notification on official website for the recruitment of 106 Scientist/Engineer post . Job seekers should apply before 20th February 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia