ವಿಜ್ಞಾನಿಗಳು ಹಾಗು ಇಂಜಿನಿಯರ್‌ಗಳಿಗಿದೆ ಇಸ್ರೋದಲ್ಲಿ ಉದ್ಯೋಗಾವಕಾಶ

Written By: Rajatha

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೇಂದ್ರೀಕೃತ 2018ನೇ ಸಾಲಿನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಇಸ್ರೋದ ಬೆಂಗಳೂರು ವಿಭಾಗಕ್ಕೆ ವಿಜ್ಞಾನಿ/ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮಾರ್ಚ್ 12, 2018ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ, ವೇತನ ಶ್ರೇಣಿ, ವಯೋಮಿತಿ ಇವುಗಳನ್ನೆಲ್ಲಾ ಅಧೀಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

2018 ನೇ ಸಾಲಿನ ಇಸ್ರೋ ನೇಮಕಾತಿಯ ಮಾಹಿತಿ

ಹುದ್ದೆ ವಿಜ್ಞಾನಿ/ಇಂಜಿನಿಯರ್
 ವೇತನ ಶ್ರೇಣಿ 56,000ರೂ.ಜೊತೆಗೆ ಇತರ ಸೌಕರ್ಯಗಳು
 ವಿಭಾಗ ಸಿವಿಲ್, ಎಲಕ್ಟ್ರಿಕಲ್, ಆರ್ಕಿಟೆಕ್ಟರ್ ಆಂಡ್ ರೆಪ್ರಿಜರೇಶನ್ ಆಂಡ್ ಏರ್ ಕಂಡೀಶನಿಂಗ್
 ವಿದ್ಯಾರ್ಹತೆ ಬಿಇ/ಬಿಟೆಕ್ ಪದವಿ
 ವಯೋಮಿತಿ ಗರಿಷ್ಠ 35 ವರ್ಷ
 ಅರ್ಜಿ ಶುಲ್ಕ 100

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಇಸ್ರೋದಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನವನ್ನು ಅನುಸರಿಸಿ

ಸ್ಟೆಪ್ 1

ಮೊದಲಿಗೆ ಇಸ್ರೋ ಅಧೀಕೃತ ವೆಬ್‌ಸೈಟ್‌ನ್ನು ಲಾಗಿನ್ ಆಗಿ

ಸ್ಟೆಪ್ 2

ಪೇಜ್‌ನ ಕೆಳಗೆ ಸ್ಕ್ರಾಲ್ ಮಾಡುತ್ತಾ ಹೋದಾಗ ಕೆರಿಯರ್ ಎನ್ನುವ ಆಪ್ಷನ್ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಜಾಹೀರಾತುಗಳ ಪಟ್ಟಿ ತೆರೆ ಮೇಲೆ ಕಾಣಿಸುತ್ತದೆ.

ಸ್ಟೆಪ್ 4

ಸೆಂಟ್ರಲೈಸ್ಡ್ ರಿಕ್ರೂಟ್‌ಮೆಂಟ್ (ICRB) ಬೆಂಗಳೂರು ಎನ್ನುವ ಆಪ್ಷನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

ಸ್ಟೆಪ್ 5

ಅರ್ಜಿ ಸಲ್ಲಿಸಲು ಕೆಲವು ಸೂಚನೆಗಳನ್ನು ನೀಡಲಾಗಿದೆ ಅವುಗಳನ್ನು ಓದಿ.

ಸ್ಟೆಪ್ 6

ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿದ್ದಿರೋ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 7

ಅಪ್ಲಿಕೇಶನ್ ಫಾರ್ಮ್ ಕಾಣಿಸುತ್ತದೆ. ಅದರಲ್ಲಿ ಕೇಳಲಾಗಿರುವುದನ್ನೆಲ್ಲಾ ಭರ್ತಿ ಮಾಡಿ. ಅರ್ಜಿಯ ಕೊನೆಗೆ ಫೋಟೋ ಹಾಗೂ ಸಿಗ್ನೇಚರ್‌ನ್ನು ತುಂಬಿ.

 

 

ಸ್ಟೆಪ್ 8

ಅಪ್ಲೀಕೇಶನ್‌ನ್ನು ಪೂರ್ತಿಯಾಗಿ ತುಂಬಿದ ನಂತರ ನೆಕ್ಸ್ಟ್‌ ಸ್ಟೆಪ್ ಎಂದು ಇರುವ ಆಪ್ಷನ್‌ನ್ನು ಕ್ಲಿಕ್ ಮಾಡಿ. ಅದರ ನಂತರ ಕೊಟ್ಟಿರುವ ಅರ್ಜಿಯಲ್ಲಿರುವ ಸೂಚನೆಯನ್ನು ಸರಿಯಾಗಿ ಓದಿ. ಅದರಂತೆ ಅರ್ಜಿ ಶುಲ್ಕವನ್ನು ತುಂಬಿ.

English summary
The Indian Space Research Organisation has announced fresh vacancies in the Centralised Recruitment, Bengaluru (ICRB) division for Scientist/Engineer posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia