ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಶಿಕ್ಷಕರ ನೇಮಕಾತಿ

Posted By:

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ಐಟಿಐ) ನಲ್ಲಿ ಖಾಲಿ ಇರುವ 6 ಟೀಚರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಈ ಟೀಚರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಆಸಕ್ತರು ಜೂನ್ 8ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಐಟಿಐ ಸೆಂಟ್ರಲ್ ಸ್ಕೂಲ್

ವಿಷಯವಿದ್ಯಾರ್ಹತೆ
ಕಲೆ (ಆರ್ಟ್ಸ್) ಬಿ.ಎ/ಎಂ.ಎ + ಬಿ.ಇಡಿ
ವಿಜ್ಞಾನಬಿ.ಎಸ್ಸಿ (ಪಿಸಿಎಂ)/ಎಂ.ಎಸ್ಸಿ (ಗಣೀತ) + ಬಿ.ಇಡಿ
ಕಂಪ್ಯಟರ್ ಸೈನ್ಸ್ಬಿ.ಎಸ್ಸಿ (ಪಿಸಿಎಂ)/ ಎಂ.ಎಸ್ಸಿ (ಗಣೀತ) + ಬಿ.ಇಡಿ
ಸಂಸ್ಕೃತ/ ಹಿಂದಿಬಿ.ಎ (ಸಂಸ್ಕೃತ-ಹಿಂದಿ) + ಬಿ.ಇಡಿ

ಐಟಿಐ ವಿದ್ಯಾಮಂದಿರ

ವಿಷಯ ವಿದ್ಯಾರ್ಹತೆ
ಕಲೆ (ಆರ್ಟ್ಸ್)ಬಿ.ಎ/ಎಂ.ಎ + ಬಿ.ಇಡಿ
ವಿಜ್ಞಾನ (ಸೈನ್ಸ್)ಬಿ.ಎಸ್ಸಿ/ಎಂ.ಎಸ್ಸಿ + ಬಿ.ಇಡಿ

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಖಾಲಿ ಹಾಳೆಯಲ್ಲಿ ತಮ್ಮ ಸಂಪೂರ್ಣ ವಿವರವನ್ನು ಬರೆದು, ಸಿ.ವಿ ಜೊತೆಗೆ ಸೂಕ್ತ ದಾಖಲೆಗಳನ್ನು ಸ್ವಯಂ ದೃಡೀಕರಿಸಿ ಒದಗಿಸತಕ್ಕದ್ದು.

ಐಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಶಿಕ್ಷಕರ ನೇಮಕಾತಿ

ಒದಗಿಸಬೇಕಾದ ದಾಖಲೆಗಳು

  • ಅಂಕಪಟ್ಟಿಗಳ ಪ್ರತಿ
  • ಪದವಿ ಪ್ರಮಾಣ ಪತ್ರ
  • ಸೇವಾನುಭವದ ಪತ್ರ
  • ಇತರೆ ಸಾಧನೆಗಳ ಪ್ರಮಾಣ ಪತ್ರ

ಆಯ್ಕೆ ವಿಧಾನ

  • ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ಬೋಧನಾ ಕ್ಷೇತ್ರದಲ್ಲಿ ಅನುಭವವಿರುವವರಿಗೆ ಆದ್ಯತೆ ನೀಡಲಾಗುವುದು.

ವೇತನ: ಅಭ್ಯರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಸೇವಾನುಭವದ ಮೇಲೆ ವೇತನವನ್ನು ನಿರ್ಧರಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

ಕಾರ್ಯದರ್ಶಿಗಳು,
ಐಟಿಐ ಶಿಕ್ಷಣ ಸಮಿತಿ
ವಿದ್ಯಾಮಂದಿರ ಶಾಲೆ
ದೂರವಾಣಿ ನಗರ, ಬೆಂಗಳೂರು-560016

SECRETARY,
ITI EDUCATION COMMITTEE,
VIDYAMANDIR SCHOOL,
DOORVANINGAR, BAGALORE-560016

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-06-2017

ಹೆಚ್ಚಿನ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್

ಭಾರತದ ಮೊದಲ ಪಬ್ಲಿಕ್ ಸೆಕ್ಟರ್ ಯುನಿಟ್ (ಪಿಎಸ್ಯು) - ಐಟಿಐ ಲಿಮಿಟೆಡ್ ಅನ್ನು 1948 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರವರ್ತಕ ಉದ್ಯಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ದೇಶಾದ್ಯಂತ ಆರು ಸ್ಥಳಗಳಲ್ಲಿ ಸೇವಾ ಕೇಂದ್ರಗಳನ್ನು ಹೊಂದಿದ್ದು, ವಿಸ್ತಾರವಾದ  ತಯಾರಿಕಾ ಸೌಕರ್ಯಗಳನ್ನು ಹೊಂದಿದೆ.  ಕಂಪೆನಿಯು ಸಂಪೂರ್ಣವಾಗಿ ಟೆಲಿಕಾಂ ಉತ್ಪನ್ನಗಳ ಸ್ಪೆಕ್ಟ್ರಮ್ಗಳ ಸ್ವಿಚಿಂಗ್, ಟ್ರಾನ್ಸ್ಮಿಷನ್, ಪ್ರವೇಶ ಮತ್ತು ಸಬ್ಸ್ಕ್ರೈಬರ್ ಒಳಗೊಂಡಿರುವ ಸೇವೆ ಒದಗಿಸುತ್ತದೆ .

English summary
ITI Limited released new notification on their official website itiltd-india.com for the recruitment of 06 (six) vacancies for Teacher. Job seekers should register on or before 08th June 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia