ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ಐಟಿಐ ಲಿಮಿಟೆಡ್) 31 ಜನರಲ್ ಮ್ಯಾನೇಜರ್, ಡಿಜಿಎಂ, ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಡೈರೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಆನ್‌ಲೈನ್‌ನಲ್ಲಿ ಆಗಸ್ಟ್ 5,2020 ರಿಂದ ಆಗಸ್ಟ್ 26,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
ಹುದ್ದೆಗಳ ವಿವರ:
ಎಕ್ಸಿಕ್ಯುಟಿವ್ ಡೈರೆಕ್ಟರ್ - 2 ಹುದ್ದೆಗಳು
ಜನರಲ್ ಮ್ಯಾನೇಜರ್ - 4 ಹುದ್ದೆಗಳು
ಡಿಜಿಎಂ - 8 ಹುದ್ದೆಗಳು
ಮ್ಯಾನೇಜರ್ - 12 ಹುದ್ದೆಗಳು
ಡೆಪ್ಯುಟಿ ಮ್ಯಾನೇಜರ್ - 4 ಹುದ್ದೆಗಳು
ಜನರಲ್ ಮ್ಯಾನೇಜರ್ - 1 ಹುದ್ದೆ
ಒಟ್ಟು - 31 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಬಿ.ಇ/ಬಿ.ಟೆಕ್/ಎಂ.ಇ/ಎಂ.ಟೆಕ್ ಇನ್ ಇ ಅಂಡ್ ಸಿ/ಇಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ಕಂಪ್ಯೂಟರ್ ಸೈನ್ಸ್/ಐಟಿ ಇಂಜಿನಿಯರಿಂಗ್; ಎಂಬಿಬಿಎಸ್+ಪೋಸ್ಟ್ ಗ್ರಾಜುಯೇಟ್ ಪದವಿ; ಎಂಬಿಎ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ /ಸಂಸ್ಥೆ /ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಐಟಿಐ ಲಿಮಿಟೆಡ್ ನೇಮಕಾತಿಗೆ ಕನಿಷ್ಟ 38 ರಿಂದ ಗರಿಷ್ಟ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
ವೇತನದ ವಿವರ:
ಐಟಿಐ ಲಿಮಿಟೆಡ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 61,126/- ರಿಂದ 1,11,673/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ, ಲಿಖಿತ ಪರೀಕ್ಷೆ / ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಐಟಿಐ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ https://www.itiltd.in/index ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆಗಸ್ಟ್ 26,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರಿಂಟೌಟ್ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸೆಪ್ಟೆಂಬರ್ 2,2020ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ.
ಕಚೇರಿಯ ವಿಳಾಸ:
ADDL. General Manager-HR,
ITI Limited, Regd & Corporatie office,
ITI bhavan, Dooravani Nagar,
Bengaluru-560016
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ