ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಉದ್ಯೋಗಾವಕಾಶ

Posted By:

ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕ್ಯುರೇಟರ್ ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ದಿನಾಂಕ 26 ರೊಳಗೆ ಪ್ರಧಾನ ಕಾರ್ಯದರ್ಶಿ, ಚಿತ್ರಕಲಾ ಪರಿಷತ್ತು ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ

ಕರ್ನಾಟಕ ಚಿತ್ರಕಲಾ ಪರಿಷತ್ತು

ಹುದ್ದೆಕ್ಯುರೇಟರ್
ವೇತನಸಂಚಿತ ವೇತನ ರೂ.35,000/-
ವಿದ್ಯಾರ್ಹತೆಮ್ಯೂಸಿಯಾಲಜಿ/ಕಲಾಇತಿಹಾಸದಲ್ಲಿ ಉನ್ನತ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿ25 ರಿಂದ 35 ವರ್ಷದೊಳಗೆ
ಅನುಭವಗ್ಯಾಲರಿಗಳಲ್ಲಿ ಐದು ವರ್ಷ ಕ್ಯುರೇಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು
ಭಾಷೆಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತಿ ಹೊಂದಿರಬೇಕು
ಕರ್ತವ್ಯಶಾಶ್ವತ ಗ್ಯಾಲರಿಗಳಲ್ಲಿರುವ ಅಮೂಲ್ಯ ಕಲಾಕೃತಿಗಳ ಸಂರಕ್ಷಣೆ ಮತ್ತು ವೀಕ್ಷಕ ವಿವರಣೆ

ಚಿತ್ರಕಲಾ ಮಹಾವಿದ್ಯಾಲಯ

ಹುದ್ದೆತಾಂತ್ರಿಕ ಸಹಾಯಕರು
ವೇತನಸಂಚಿತ ವೇತನ ರೂ.25,000/-
ವಿದ್ಯಾರ್ಹತೆಬಿಸಿಎ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ಕೋರ್ಸ್
ವಯೋಮಿತಿ21 ರಿಂದ 35 ವರ್ಷ
ಅನುಭವಮೂರು ವರ್ಷಗಳ ಅನುಭವವುಳ್ಳವರಿಗೆ ಆದ್ಯತೆ
ಕರ್ತವ್ಯ ನಿರ್ವಹಣೆಚಿತ್ರಕಲಾ ಮಹಾವಿದ್ಯಾಲಯ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿರುವ ಕಂಪ್ಯೂಟರ್, ದೂರವಾಣಿ, ಇಂಟರ್ನೆಟ್, ಸಿಸಿಟಿವಿ ಹಾಗೂ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ನಿರ್ವಹಣೆ

ಚಿತ್ರಕಲಾ ಪರಿಷತ್ತಿನಲ್ಲಿ ಉದ್ಯೋಗ

ಕರ್ನಾಟಕ ಚಿತ್ರಕಲಾ ಪರಿಷತ್ತು

ಬೆಂಗಳೂರಿನ ಪ್ರತಿಷ್ಠಿತ ಕಲಾ ಶಾಲೆ. ಚಿತ್ರಕಲಾ ಪ್ರದರ್ಶನ, ಪ್ರಚಾರ, ಶಿಕ್ಷಣ, ಕಲಾವಿದರ ಸಂಘಟನೆಯಲ್ಲಿ ತೊಡಗಿರುವ ಈ ಸಂಸ್ಥೆ 1964ರಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ಆರಂಭವಾಯಿತು. ಇದರ ಫಲವಾಗಿ ಎಂ.ಎಸ್. ನಂಜುಂಡರಾವ್ ಅವರು ಕರ್ನಾಟಕದ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಒಂದು ಸಂಘಟನೆಯ ಆವಶ್ಯಕತೆಯನ್ನು ಅರಿತು ಮಾಜಿ ಮುಖ್ಯಮಂತ್ರಿ ಕೆ. ಹನುಮಂತಯ್ಯ ಅವರ ಪ್ರೇರಣೆ ಪ್ರೋತ್ಸಾಹದಿಂದ ಎಂ.ಆರ್ಯಮೂರ್ತಿ, ಎಸ್.ಎಸ್.ಕುಕ್ಕೆ ಯವರೊಂದಿಗೆ ಸೇರಿ 1960ರಲ್ಲಿ ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ತು ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.

ಈ ಸಂಸ್ಥೆಯ ಪ್ರಮುಖ ಉದ್ದೇಶಗಳು ಇಂತಿವೆ

  • ಭಾರತೀಯ ಚಿತ್ರಕಲೆಯ ರಕ್ಷಣೆ, ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಕಲ್ಪಿಸುವುದು
  • ಭಾರತೀಯ ಚಿತ್ರಕಲೆಯ ರಕ್ಷಣೆಗಾಗಿ ಕಲಾಸಂಸ್ಥೆಗಳು, ಕಲಾಕೃತಿ ಸಂಗ್ರಹಾಲಯ, ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಗಳ ಸಹಕಾರದಿಂದ ಭಾರತ ಮತ್ತು ವಿದೇಶಗಳಲ್ಲಿ ಉಪನ್ಯಾಸ, ಪ್ರಾತ್ಯಕ್ಷಿಕೆ, ವಿಚಾರಸಂಕಿರಣ, ಸಮೂಹಚರ್ಚೆ ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು, ಕಲಾಕ್ಷೇತ್ರದ ನಾಮಾಂಕಿತ ಹಿರಿಯರನ್ನು ಗೌರವಿಸುವುದು.
  • ಕಲೆಗೆ ಸಂಬಂಧಿಸಿದಂತೆ ಶಾಲೆ, ಕಾಲೇಜುಗಳನ್ನು ಬೆಂಗಳೂರು ಮತ್ತು ಕರ್ನಾಟಕದ ಇತರೆಡೆಗಳಲ್ಲಿ ತೆರೆಯುವುದು. 4 ಪುಸ್ತಕ, ನಿಯತಕಾಲಿಕೆ, ಪತ್ರಿಕೆ, ವಿಶ್ವಕೋಶ, ಡೈರೆಕ್ಟರಿ ಮುಂತಾದವುಗಳ ಪ್ರಕಟಣೆ.
  • ಬೆಂಗಳೂರು ಮತ್ತು ಕರ್ನಾಟಕದ ಇತರ ಸ್ಥಳಗಳಲ್ಲಿ ಇಂದಿನ ಮತ್ತು ಹಿಂದಿನ ಹೆಸರಾಂತ ಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ಶಾಶ್ವತ ಕಲಾಗ್ಯಾಲರಿಗಳನ್ನು ತೆರೆಯಲು ಪ್ರೋತ್ಸಾಹಿಸುವುದು.
  • ಕರ್ನಾಟಕದಲ್ಲಿರುವ ಕಲಾವಿದರು ಮತ್ತು ಕಲಾವಿದರ ಗುಂಪುಗಳನ್ನು ಪ್ರೋತ್ಸಾಹಿಸುವುದು. ಕಲಾವಿದರ ಕಾಲೋನಿ ನಿರ್ಮಿಸಲು, ಮನೆ ಕಟ್ಟಲು ಸರ್ಕಾರ ಮತ್ತು ಗೃಹಮಂಡಳಿಯವರು ನೀಡುವ ಸವಲತ್ತುಗಳನ್ನೂ ಸಹಾಯವನ್ನೂ ಉಪಯೋಗಿಸಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9611835597 ಸಂಪರ್ಕಿಸಿ

English summary
Karnataka Chitrakala Parishath invites application to fill the curator and technical assistant posts. Eligible candidates can apply before June 26

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia