ಸಿ.ಐ.ಎಸ್.ಎಫ್ 79 ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು

Posted By:

ಕೇಂದ್ರಿಯ ಔದ್ಯೋಗಿಕ ಭದ್ರತಾ ಪಡೆಯಲ್ಲಿ ಈ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎ.ಎಸ್.ಐ) ಸ್ಟೆನೋ ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನಿಸಲಾಗಿದೆ. ಭಾರತೀಯ ಪರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಎ.ಎಸ್.ಐ ಸ್ಟೆನೋ ಹುದ್ದೆಗಳ ಭರ್ತಿ

ಬ್ಯಾಕ್ಲಾಗ್ ಯು.ಆರ್ಒ.ಬಿ.ಸಿಎಸ್.ಸಿಎಸ್.ಟಿಒಟ್ಟು

ಒಟ್ಟು (ಎ)

ಪ್ರಸಕ್ತ

ಒಟ್ಟು (ಬಿ)

-

-

ಪುರುಷ

ಮಹಿಳಾ

ವಿಭಾಗೀಯ

-

0

0

28

04

07

39

0

0

13

01

02

16

0

0

07

0

01

08

13

13

03

0

0

03

13

13

51

05

10

66

ಒಟ್ಟು (ಎ+ಬಿ)
 391608
1679

ಪ್ರತಿಶತ 10 ರಷ್ಟು ಹುದ್ದೆಗಳನ್ನು ಆದ್ಯತೆ ಮೇರೆಗೆ  ಮಹಿಳಾ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಸಾಧ್ಯವಾಗದಿದ್ದರೆ ಪುರುಷ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಪುರುಷ ಅಭ್ಯರ್ಥಿಗಳ ಶೇ.10 ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದೆ. ಮಾಜಿ ಸೈನಿಕರು ಮತ್ತು ವಿಭಾಗೀಯ ಅಭ್ಯರ್ಥಿಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಸಾಕಷ್ಟು ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಇತರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ಈ ಹುದ್ದೆಗಳ ವೇತನ ಶ್ರೇಣಿಯು ಪೇ ಬ್ಯಾಂಡ್ ರೂ.5200-20200+ ಗ್ರೇಡ್ ವೇತನ ರೂ.2800/- ಆಗಿದೆ. ಇದರೊಂದಿಗೆ ಕಾಲಕಾಲಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಭತ್ಯೆಗಳು ದೊರಕುತ್ತವೆ.

ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ

ವಯೋಮಿತಿ

18 ರಿಂದ 25 ವರ್ಷಗಳು  (ದಿನಾಂಕ 28-02-2017ಕ್ಕೆ ಅನ್ವಯವಾಗುವಂತೆ).

ವಯೋಮಿತಿ ಸಡಿಲಿಕೆ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷ

ಸಿ.ಐ.ಎಸ್.ಎಫ್ ಸಿಬ್ಬಂದಿ ಒಳಗೊಂಡು ಸರ್ಕಾರಿ ನೌಕರರಿಗೆ ಗರಿಷ್ಠ ವಯೋಮಿತಿ

ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ  40 ವರ್ಷ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ45 ವರ್ಷ

ಸೀಮಿತ ವಿಭಾಗೀಯ ಅಭ್ಯರ್ಥಿಗಳ ಪರೀಕ್ಷೆಗೆ ಮಾತ್ರ ಸ್ಪರ್ಧಿಸುವ ಸಿ.ಐ.ಎಸ್.ಎಫ್ ಸಿಬ್ಬಂದಿಗೆ:-ಕಾನ್ಸ್ಟೇಬಲ್ (GD). ಹೆಡ್ ಕಾನ್ಸ್ಟೇಬಲ್ (GD). ಹೆಡ್ ಕಾನ್ಸ್ಟೇಬಲ್ (ಸಚಿಚಾಲಯ) ಮತ್ತು ಕಾನ್ಸ್ಟೇಬಲ್ (ವೃತ್ತಿದಾರ)ಗಳು ತಮ್ಮ ತಮ್ಮ ಗ್ರೇಡ್ನಲ್ಲಿ 28-02-2017 ರಂದು ಇದ್ದಂತೆ ನಿಯಮಿತ ಐದು ವರ್ಷ ಸೇವೆ ಸಲ್ಲಿಸುತ್ತಿರುವವರೆಗೆ ಗರಿಷ್ಠ ವಯೋಮಿತಿ-35 ವರ್ಷಗಳು (ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ)

ಶೈಕ್ಷಣಿಕ ಮತ್ತು ಇತರ ಅರ್ಹತೆಗಳು

1. ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ಇಂಟರ್ಮೀಡಿಯಟ್ ಆಥವಾ 10+2 ತರಗತಿ ಪಾಸ್ ಅಗಿರಬೇಕು.

2. ಕಂಪ್ಯೂಟರ್ ಮೇಲೆ ಕೌಶಲ್ಯ ಪರೀಕ್ಷೆ-10 ನಿಮಿಷ ಸಮಯ. ಪ್ರತಿ ನಿಮಿಷಕ್ಕೆ 80 ಶಬ್ದಗಳು. ಪ್ರತಿ ಲೇಖನ ಸಮಯ-ಕಂಪ್ಯೂಟರ್ ಮೇಲೆ 50 ನಿಮಿಷ ಇಂಗ್ಲಿಷ್ನಲ್ಲಿ ಅಥವಾ ಹಿಂದಿಯಲ್ಲಿ 65 ನಿಮಿಷ.

ದೈಹಿಕ ಅರ್ಹತೆಗಳು

ಪುರುಷ ಅಭ್ಯರ್ಥಿಗಳಿಗೆ

1. ಎಸ್.ಟಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರ ಅಭ್ಯರ್ಥಿಗಳಿಗೆ ಎತ್ತರ-165 ಸೆಂ.ಮೀ, ಎದೆ ಸುತ್ತಳತೆ-77.82 ಸೆಂ.ಮೀ

2. ಘರವಾಲಿ, ಕುಮೌನಿ, ಗೋರ್ಖಾ, ಢೋಗ್ರಾ ಮತ್ತು ಮರಾಠಾ ಸಮುದಾಯಕ್ಕೆ ಸೇರಿದ ಹಾಗೂ ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರಾ, ಮಿಜೋರಾಮ, ಮೇಘಾಲಯ, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಡಿಲಿಕೆ ಈ ರೀತಿ ಇದೆ: ಎತ್ತರ-162.5 ಸೆಂ.ಮೀ ಮತ್ತು ಎದೆ ಸುತ್ತಳತೆ-77.82 ಸೆಂ.ಮೀ

3. ಎಸ್.ಟಿ ಅಭ್ಯರ್ಥಿಗಳಿಗೆ ಎತ್ತರ: 162.5 ಸೆಂ.ಮೀ ಮತ್ತು ಎದೆ ಸುತ್ತಳತೆ-76.81 ಸೆಂ.ಮೀ

ಮಹಿಳಾ ಅಭ್ಯರ್ಥಿಗಳಿಗೆ

1. ಎಸ್.ಟಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಇತರ ಅಭ್ಯರ್ಥಿಗಳಿಗೆ  ಎತ್ತರ-155 ಸೆಂ.ಮೀ

2. ಘರವಾಲಿ, ಕುಮೌನಿ, ಗೋರ್ಖಾ, ಢೋಗ್ರಾ ಮತ್ತು ಮರಾಠಾ ಸಮುದಾಯಕ್ಕೆ ಸೇರಿದ ಹಾಗೂ ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರಾ, ಮಿಜೋರಾಮ, ಮೇಘಾಲಯ, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಡಿಲಿಕೆ ಈ ರೀತಿ ಇದೆ: ಎತ್ತರ-150 ಸೆಂ.ಮೀ

3. ಎಲ್ಲಾ ಎಸ್.ಟಿ ಅಭ್ಯರ್ಥಿಗಳಿಗೆ ಎತ್ತರ - 150 ಸೆಂ.ಮೀ

ಅರ್ಜಿ ಸಲ್ಲಿಸುವ ವಿಧಾನ

ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ರೂ.100/- ಶುಲ್ಕದೊಂದಿಗೆ ಸಲ್ಲಿಸಬೇಕು. ಅರ್ಜಿ ಶುಲ್ಕವು ಅಧಿಸೂಚನೆಯಲ್ಲಿ ನಮೂದಿಸಿದ ಅಧಿಕಾರಿಯ ಹೆಸರಿಗೆ ತೆಗೆಯಲಾದ ಪೋಸ್ಟಲ್ ಆರ್ಡರ್ ರೂಪದಲ್ಲಿ ಇರಬೇಕು. ಹಾಗೂ ಅಧಿಸೂಚನೆಯಲ್ಲಿ ನಮೂದಿಸಿದ ಅಂಚೆ ಕಚೇರಿಯಲ್ಲಿ ಸಂದಾಯವಾಗಬೇಕು. 

ಎಸ್.ಸಿ/ಎಸ್.ಟಿ/ಮಹಿಳಾ ಮತ್ತು ಮಾಜಿ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-02-2017

ಹೆಚ್ಚಿನ ಮಾಹಿತಿಗಾಗಿ http://www.cisf.gov.in

English summary
79 Assistant Sub Inspector (ASI) jobs at central industry security force.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia