ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಒಟ್ಟು 90 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 90 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಜಿಟಿಟಿಸಿ: ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿಜಿಟಿಟಿಸಿ: ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿ

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ನೇಮಕಾತಿ

ಹುದ್ದೆಗಳ ವಿವರ

ಸಹಾಯಕ ಗ್ರಂಥಪಾಲಕರು-01 ಹುದ್ದೆ

ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಗಣಕಯಂತ್ರದ ಜ್ಞಾನ ಹೊಂದಿರಬೇಕು.

ವರದಿಗಾರರು-05 ಹುದ್ದೆಗಳು (ಕನ್ನಡ ವರದಿಗಾರ-02, ಇಂಗ್ಲಿಷ್ ವರದಿಗಾರ-03)

ವೇತನ ಶ್ರೇಣಿ: ರೂ.20000-36300/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲದಿಂದ ಪದವಿ ಹೊಂದಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಆಂಗ್ಲ ಬೆರಳಚ್ಚು ಹಿರಿಯ ದರ್ಜೆ ಪರೀಕ್ಷೆ/ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಆಂಗ್ಲ ಶೀಘ್ರಲಿಪಿ ಪ್ರವೀಣದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಿಂದಿ ಶೀಘ್ರಲಿಪಿ ಪ್ರವೀಣ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು.

ಗ್ರಂಥಾಲಯ ಸಹಾಯಕ-03 ಹುದ್ದೆಗಳು

ವೇತನ ಶ್ರೇಣಿ: ರೂ.16000-29600/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಪದವಿ ಮತ್ತು ಗಣಕಯಂತ್ರದ ಜ್ಞಾನ ಹೊಂದಿರಬೇಕು.

ಕಂಪ್ಯೂಟರ್ ಆಪರೇಟರ್: 06 ಹುದ್ದೆಗಳು

ವೇತನ ಶ್ರೇಣಿ: ರೂ.16000-29600/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್ ಪದವಿ

ಸೂಪರ್ ವೈಸರ್ ಕಂ ಕೋಚ್-01 ಹುದ್ದೆ

ವೇತನ ಶ್ರೇಣಿ: ರೂ.16000-29600/-

ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹೆಲ್ತ್ ಕ್ಲಬ್ ನಲ್ಲಿ ಸೂಪರ್ವೈಸರ್ ಕಂ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವವಿರಬೇಕು.

ಕಿರಿಯ ಗ್ರಂಥಾಲಯ ಸಹಾಯಕ-02 ಹುದ್ದೆಗಳು

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಪದವಿ ಮತ್ತು ಗಣಕಯಂತ್ರದ ಜ್ಞಾನ ಹೊಂದಿರಬೇಕು.

ಕಿರಿಯ ಸಹಾಯಕರು-10 ಹುದ್ದೆಗಳು

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ, ಗಣಕಯಂತ್ರದ ಜ್ಞಾನ ಹೊಂದಿರಬೇಕು.

ವಾಹನ ಚಾಲಕರು-08 ಹುದ್ದೆಗಳು

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ: ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇತ್ತೀಚಿನ ವಾಹನ ಚಾಲನಾ ಪರವಾನಗಿ ಹೊಂದಿರಬೇಕು ವಾಹನ ಚಾಲನಾ ಪರಿಣಿತಿಯ ಬಗ್ಗೆ ಕನಿಷ್ಠ ಪಕ್ಷ 03 ವರ್ಷಗಳ ಅನುಭವ ಹೊಂದಿರಬೇಕು.

ದಲಾಯತ್-16 ಹುದ್ದೆಗಳು

ವೇತನ ಶ್ರೇಣಿ: ರೂ.9600-14550/-
ವಿದ್ಯಾರ್ಹತೆ: ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ಸ್ವೀಪರ್-38 ಹುದ್ದೆಗಳು

ವೇತನ ಶ್ರೇಣಿ: ರೂ.9600-14550/-
ವಿದ್ಯಾರ್ಹತೆ: ನಾಲ್ಕನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ವಯೋಮಿತಿ

ಕನಿಷ್ಠ ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಗರಿಷ್ಟ ವಯೋಮಿತಿ: ಸಾಮಾನ್ಯ ವರ್ಗ :35ವರ್ಷ, ಪ್ರವರ್ಗ-2 ಎ, 2 ಬಿ, 3 ಎ, 3 ಬಿ: 38 ವರ್ಷ ಪ.ಜಾ/ಪ.ಪಂ/ ಪ್ರವರ್ಗ-1: 40 ವರ್ಷ.

ಅರ್ಜಿಗಳನ್ನು ಸರ್ಕಾರಿ ಪುಸ್ತಕ ಮಳಿಗೆಗಳಲ್ಲಿ/ಸರ್ಕಾರಿ ಮುದ್ರಣಾಲಯದಲ್ಲಿ ದೊರೆಯುವ ಅರ್ಜಿ ನಮೂನೆ-1 ರ ದ್ವಿಪ್ರತಿಗಳಲ್ಲಿ ಸಲ್ಲಿಸುವುದು.

ಅರ್ಜಿ ಶುಲ್ಕ

  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.
  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ.100/- ಡಿ.ಡಿ. ಅಥವಾ ಪೇ ಆರ್ಡರ್ ಅನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 15 ದಿನಾಂಕದೊಳಗಿರುವಂತೆ ಖರೀದಿಸಿ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಅಂಚೆ ಪೆಟ್ಟಿಗೆ ಸಂಖ್ಯೆ :5074, ವಿಧಾನ ಸೌಧ, ಬೆಂಗಳೂರು-560233. ಈ ವಿಳಾಸಕ್ಕೆ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 30-12-2017

ಅರ್ಜಿ ಸಲ್ಲಿಸಬೇಕಾದ ವಿಳಾಸ

ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ
ಅಂಚೆ ಪೆಟ್ಟಿಗೆ ಸಂಖ್ಯೆ: 5074, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು-560233

For Quick Alerts
ALLOW NOTIFICATIONS  
For Daily Alerts

English summary
Applications have been invited for direct recruitment of various posts in the Karnataka Legislative Assembly.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X