ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಜಂಟಿ ನಿರ್ದೇಶಕರ ಹುದ್ದೆ ನೇಮಕಾತಿ

Posted By:

ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಜಂಟಿ ನಿರ್ದೇಶಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಟಿಟಿಸಿ: ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿ

ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

CIPET-APDDRL ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ನೇಮಕಾತಿ

ಹುದ್ದೆಗಳ ವಿವರ

ಹುದ್ದೆಯ ಹೆಸರು: ಜಂಟಿ ನಿರ್ದೇಶಕರು
ಹುದ್ದೆ ಸಂಖ್ಯೆ: 02

ವಿದ್ಯಾರ್ಹತೆ

ಭೌತಶಾಸ್ತ್ರ/ರಸಾಯನಶಾಸ್ತ್ರ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಗಣಕವಿಜ್ಞಾನ/ಔಷಧಶಾಸ್ತ್ರ/ಇಂಜಿನಿಯರಿಂಗ್/ಡಿಜಿಟಲ್ ಫೊರೆನ್ಸಿಕ್/ ಫೊರೆನ್ಸಿಕ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿರಬೇಕು ಅಥವಾ ತತ್ಸಮಾನ ಪದವಿಯನ್ನು/ ಡಿಸಿಪ್ಲೆನ್ಸ್ ಅಥವಾ ಫೊರೆನ್ಸಿಕ್ ಮೆಡಿಸಿನ್ ನಲ್ಲಿ ಎಂ.ಡಿ ಯನ್ನು ಹೊಂದಿರಬೇಕು.

ಅಸೋಸಿಯೇಟ್ ಪ್ರೊಫೆಸರ್/ರಿಡರ್ ಅಥವಾ ತತ್ಸಮಾನವಾದ ಕೇಡರ್ ಅಧಿಕಾರಿ ಆಗಿರಬೇಕು. ಜಂಟಿ ನಿರ್ದೇಶಕರು ನಿರ್ದಿಷ್ಟವಾದ ಇಲಾಖೆಯಲ್ಲಿ ರಾಜ್ಯ/ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರಬೇಕು.

ಈ ನಿಯೋಜನೆಯು ಪ್ರಾರಂಭಿಕವಾಗಿ ಒಂದು ವರ್ಷದ ಅವಧಿಯದಾಗಿದ್ದು, ಬಳಿಕ ಅಗತ್ಯವಿದ್ದಲ್ಲಿ ಮುಂದುವರೆಸುವ ಬಗ್ಗೆ ಪರಿಶೀಲಿಸಲಾಗುವುದು. ಸದರಿ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಲು ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಸದಸ್ಯ ಕಾರ್ಯದರ್ಶಿ, ಜಂಟಿ ನಿರ್ದೇಶಕರು ಹುದ್ದೆಗಳ ನೇಮಕಾತಿ ಸಮಿತಿ, ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ) ಕೊಠಡಿ ಸಂಖ್ಯೆ: 222, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-560001 ಇಲ್ಲಿಗೆ ತಮ್ಮ ಸೇವಾ ವಿವರಗಳೊಂದಿಗೆ ಅರ್ಜಿಯನ್ನು ಸಲ್ಲಿಸುವಂತೆ ಕೋರಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-12-2017

English summary
Applications are invited from eligible candidates for posts of Joint Directors at Bangalore Forensic Laboratory.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia