ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ಉಪನ್ಯಾಸಕರ ನೇಮಕಾತಿ

Posted By:

ಜೆಎಸ್ಎಸ್ ಪದವಿ ಕಾಲೇಜುಗಳಲ್ಲಿ ಈ ಕೆಳಕಂಡ ಬೋಧಕ ಪ.ಜಾ/ಪ.ಪಂ ಮೀಸಲಾಗಿರುವ ಬ್ಯಾಕ್-ಲಾಗ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಹುದ್ದೆಗಳ ವಿಷಯಮೀಸಲಾತಿಹುದ್ದೆಗಳ ಸಂಖ್ಯೆ
ಅರ್ಥಶಾಸ್ತ್ರಎಸ್.ಸಿ-101
ರಾಜ್ಯಶಾಸ್ತ್ರಎಸ್.ಟಿ-101
ಭೂಗೋಳ ಶಾಸ್ತ್ರಎಸ್.ಟಿ-101
ಭೌತಶಾಸ್ತ್ರಎಸ್.ಸಿ-1, ಎಸ್.ಟಿ-102

ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ನೇಮಕಾತಿ

ವಯೋಮಿತಿ

ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 40 ವರ್ಷಗಳಿಗೆ ಮೀರಿರಬಾರದು.

ಅರ್ಜಿ ಶುಲ್ಕ

  • ಅರ್ಜಿಗಳನ್ನು ರೂ.500/- ಗಳ ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿಯನ್ನು ಪಾವತಿಸಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದಿಂದ ಪಡೆಯಬಹುದಾಗಿದೆ.
  • ಡಿ.ಡಿಯನ್ನು ಜೆಎಸ್ಎಸ್ ಮಹಾವಿದ್ಯಾಪೀಠ ಮೈಸೂರು ಇವರ ಹೆಸರಿನಲ್ಲಿ ಪಡೆಯತಕ್ಕದ್ದು. ಈ ಹುದ್ದೆಗಳು ಅನುದಾನ ಸಹಿತವಾಗಿದ್ದು, ಪಿಂಚಣೆ ರಹಿತವಾಗಿರುತ್ತದೆ.

ಭರ್ತಿ ಮಾಡಿದ ಅರ್ಜಿಯನ್ನ ದೃಢೀಕರಿಸಿದ ಅಂಕಪಟ್ಟಿಗಳು, ಪದವಿ ಮತ್ತು ಸ್ನಾತಕ ಪದವಿ, ಪ್ರಮಾಣ ಪತ್ರ ಹಾಗೂ ಇತರ ಪ್ರಮಾಣ ಪತ್ರಗಳ ಪ್ರತಿಗಳನ್ನು ಲಗತ್ತಿಸಿ ದಿನಾಂಕ 17-07-2017 ರ ಒಳಗಾಗಿ ಕಾರ್ಯನಿರ್ವಾಹಕ ಕಾರ್ಯದರ್ಶಿ, ಜೆಎಸ್ಎಸ್ ಮಹಾವಿದ್ಯಾಪೀಠ, ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು-570004 ಇವರಿಗೆ ಕಳುಹಿಸುವುದು.

ಅಪೂರ್ಣವಾದ ಹಾಗೂ ಕಡೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ

ಆಯ್ಕೆ ವಿಧಾನ

ಅಭ್ಯರ್ಥಿಗಳು ಡಿಪಿಎಆರ್/13/ಎಸ್ ಬಿ ಸಿ/2001. ದಿನಾಂಕ 21.1.2001 ಮತ್ತು 1.6.2002 ನಿಯಮ 06 ಅಡಿಯಲ್ಲಿ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಮತ್ತು ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ವೈಯಕ್ತಿಕ ಸಂದರ್ಶನ ಇರುವುದಿಲ್ಲ.

ಅರ್ಜಿಯ ನಕಲು ಪ್ರತಿಯನ್ನು ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ, ಮೈಸೂರು ಇವರಿಗೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ವೆಬ್ಸೈಟ್ jssonline.org ಗಮನಿಸಿ

English summary
The JSS Mahavidyapeetha has invited applications from eligible candidates for the posts of lecturers in its various degree colleges. These posts are backlog vacancies reserved for SC/STs.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia