ಕರ್ನಾಟಕ ಬ್ಯಾಂಕ್‌ನಲ್ಲಿ ಪ್ರೊಬಷನರಿ ಆಫೀಸರ್ಸ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಕರ್ನಾಟಕ ಬ್ಯಾಂಕ್ ಪ್ರೊಬಷನರಿ ಆಫೀಸರ್ಸ್ ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಸಲ್ಲಿಸಬಹುದಾಗಿದೆ. ಹುದ್ದೆಗೆ ಬೇಕಾಗಿರುವ ಅರ್ಹತೆ, ವೇತನ ಶ್ರೇಣಿ, ವಯೋಮಿತಿ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20, 2018 ಆಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಕರ್ನಾಟಕ ಬ್ಯಾಂಕ್ ನೇಮಕಾತಿ 2018 ಹುದ್ದೆಗಳ ವಿವರ ಹೀಗಿದೆ

ಹುದ್ದೆಯ ಹೆಸರು ಪ್ರೊಬಷನರಿ ಅಧಿಕಾರಿ ( ಅಗ್ರಿಕಲ್ಚರ್ ಫೀಲ್ಡ್ ಆಫೀಸರ್, ಚಾರ್ಟೆಡ್ ಅಕೌಂಟ್ಸ್, ಲಾ ಆಫೀಸರ್ಸ್, ಮತ್ತು ರಿಲೇಶನ್‌ಶಿಪ್ ಮ್ಯಾನೇಜರ್ಸ್
 ವಿಭಾಗ ಸ್ಕೇಲ್ 1
 ಸಂಸ್ಥೆ ಕರ್ನಾಟಕ ಬ್ಯಾಂಕ್
 ವಿದ್ಯಾರ್ಹತೆ
  •  ಅಗ್ರಿಕಲ್ಚರ್ ಫೀಲ್ಡ್ ಆಫೀಸರ್ ಹುದ್ದಗೆ - UGC ಯಿಂದ ಗುರುತಿಸಲ್ಪಟ್ಟಿರುವ ಕೃಷಿ ವಿಜ್ಞಾನ, ತೋಟಗಾರಿಕೆ ಮತ್ತು ಕೃಷಿ ಮಾರ್ಕೆಟಿಂಗ್ ವಿಭಾಗದಲ್ಲಿ ಪದವಿ, ಇಲ್ಲ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಚಾರ್ಟೆಡ್ ಅಕೌಂಟ್ಸ್ ಹುದ್ದೆಗೆ ಫಸ್ಟ್‌ ಕ್ಲಾಸ್ ಸಿಎ ಪದವಿ ಪಡೆದಿರಬೇಕು
  • ಕಾನೂನು ಅಧಿಕಾರಿ ಹುದ್ದೆಗೆ ಫಸ್ಟ್ ಕ್ಲಾಸ್ ಕಾನೂನು ಪದವಿ ಪಡೆದಿರಬೇಕು
  • ರಿಲೇಶನ್‌ಶಿಪ್ ಮ್ಯಾನೇಜರ್ಸ್ ಹುದ್ದೆಗೆ ಫಸ್ಟ್‌ ಕ್ಲಾಸ್ ಎಂಬಿಎ ಪದವಿ ಪಡೆದಿರಬೇಕು
 ಗರಿಷ್ಟ ವಯಸ್ಸು  28 ವರ್ಷ
 ಕೌಶಲ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಡಿಯುವ ಕೌಶಲ್ಯವಿರಬೇಕು
 ವೇತನ  ವರ್ಷಕ್ಕೆ7.75 ಲಕ್ಷ
 ಅನುಭವ ಮೂರು ವರ್ಷ ಕಾನೂನು ಅಧಿಕಾರಿಯಾಗಿ ದುಡಿದಿರುವ ಅನುಭವವಿರಬೇಕು. ಫ್ರೆಶರ್ಸ್ ಕೂಡಾ ಅರ್ಜಿ ಸಲ್ಲಿಸಬಹುದು
 ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ  ಮಾರ್ಚ್ 8, 2018
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20, 2018

ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಬ್ಯಾಂಕ್‌ನಲ್ಲಿ ಮೇಲೆ ಹೇಳಿರುವ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಕರ್ನಾಟಕ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ

ಸ್ಟೆಪ್ 2

ಪೇಜ್‌ನ ಕೆಳ ಭಾಗದಲ್ಲಿರುವ ಕೆರಿಯರ್ ಸೆಕ್ಷನ್ ಕ್ಲಿಕ್ ಮಾಡಿ

ಸ್ಟೆಪ್ 3

ಹುದ್ದೆಯ ಲಿಸ್ಟ್‌ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಪ್ರೊಬಷನರಿ ಪೋಸ್ಟ್‌ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಪರದೆ ಮೇಲೆ ಅರ್ಜಿ ತೆರೆದುಕೊಳ್ಳುತ್ತದೆ

ಸ್ಟೆಪ್ 6

ಈ ಅರ್ಜಿಯ ಪ್ರಿಂಟ್‌ ತೆಗೆದುಕೊಳ್ಳಿ

ಸ್ಟೆಪ್ 7

ಅರ್ಜಿ ಭರ್ತಿ ಮಾಡಿದ ಬಳಿಕ ಕರ್ನಾಟಕ ಬ್ಯಾಂಕ್ ಕಚೇರಿಗೆ ಪೋಸ್ಟ್ ಮಾಡಿ

ಅರ್ಜಿ ಸಲ್ಲಿಸ ಬೇಕಾದ ವಿಳಾಸ
ದಿ ಡೆಪ್ಯುಟಿ ಜೆನರಲ್ ಮ್ಯಾನೇಜರ್ ( ಹೆಚ್ ಆರ್ ಹಾಗೂ ಐಆರ್)
ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಹೆಡ್ ಆಫೀಸ್, ಮಹಾವೀರ ಸರ್ಕಲ್, ಕಂಕನಾಡಿ
ಮಂಗಳೂರು

English summary
Karnataka Bank has released an employment notification calling out for aspirants to apply for the post of Probationary Officers

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia