ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗರ ಹುದ್ದೆಗಳ ನೇಮಕಾತಿ

Posted By:

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗರ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 26 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

2017-18 ಸಾಲಿನಲ್ಲಿ ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಆನೆ ಕಾವಾಡಿಗರ ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ

ವಿದ್ಯಾರ್ಹತೆ

ಕನ್ನಡ ಭಾಷೆ ಓದಲು ಮತ್ತು ತಿಳಿದುಕೊಳ್ಳಲು ಶಕ್ತರಾಗಿರಬೇಕು.

ಅನುಭವ

ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವೇತನ ಶ್ರೇಣಿ

ರೂ.9600-14550/- (ತಿಂಗಳಿಗೆ)

ವಯೋಮಿತಿ

 • ಕನಿಷ್ಠ ವಯಸ್ಸು 18 ವರ್ಷ
 • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು
 • ಇತರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷಗಳು
 • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು

ನೇಮಕಾತಿ ವಿಧಾನ

 • ಅರ್ಜಿ ಸ್ವೀಕರಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಮುಂದೆ ಹಾಜರಾಗಲು ತಿಳಿಸಲಾಗುವುದು.
 • ಅಭ್ಯರ್ಥಿಗಳಿಂದ ಆನೆಯ ನಿರ್ವಹಣೆ ಸಾಮರ್ಥ್ಯ ಮತ್ತು ಕನ್ನಡ ಭಾಷೆಯನ್ನು ಮಾತನಾಡುವ ಮತ್ತು ತಿಳಿದುಕೊಳ್ಳುವ ಸಾಮರ್ಥ್ಯಕ್ಕನುಗುಣವಾಗಿ ಆಯ್ಕೆ ಸಮಿತಿಯು ನೂರು ಅಂಕಗಳಿಗೆ ಪರೀಕ್ಷೆ ನಡೆಸಿ ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿ ಸಿದ್ಧಗೊಳಿಸಲಾಗುವುದು

ಸೂಚನೆ

 • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನೆ ಕಾವಾಡಿಗ ಹುದ್ದೆಗೆ ಅರ್ಜಿ ಎಂದು ಬರೆಯಬೇಕು.
 • ಅರ್ಜಿ ನಮೂನೆ ಮಾದರಿ ಹಾಗೂ ಅಧಿಸೂಚನೆಯನ್ನು ಇಲಾಖಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ

 • ಕೊಡಗು ವಿಭಾಗಕ್ಕೆ ಅರ್ಜಿ ಸಲ್ಲಿಸುವವರು: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಡುಗು ವೃತ್ತ, ಕೊಡಗು.
 • ಚಾಮರಾಜನಗರ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಚಾಮರಾಜನಗರ ವೃತ್ತ, ಚಾಮರಾಜನಗರ.
 • ಮೈಸೂರು ವಿಭಾಗಕ್ಕೆ ಅರ್ಜಿ ಸಲ್ಲಿಸುವವರು: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ, ಮೈಸೂರು.
 • ಶಿವಮೊಗ್ಗ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವೃತ್ತ, ಸರ್ಕಾರಿ ಶ್ರೀಗಂಧ ಕೊಠಡಿ ಆವರಣ ಹೊಳೆಹೊನ್ನೂರು ರಸ್ತೆ, ವಿದ್ಯಾನಗರ ಪೋಸ್ಟ್ ಬಾಕ್ಸ್ ನಂ.3, ಶಿವಮೊಗ್ಗ-577203 ಇಲ್ಲಿಗೆ ಸಲ್ಲಿಸಬೇಕು

ಅರ್ಜಿ ತಲುಪಿಸಲು ಕೊನೆಯ ದಿನಾಂಕ: 14-06-2017
ಹೆಚ್ಚಿನ ಮಾಹಿತಿಗಾಗಿ kfdrecruitment.in ಗಮಿನಿಸಿ

English summary
Karnataka Forest Department is recruiting 26 Ane kavadigas in Mysore, Kodagu, Chamarajanagar and Shimoga district.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia