ಕರ್ನಾಟಕ ಅರಣ್ಯ ಇಲಾಖೆ: 54 ಹುದ್ದೆಗಳ ನೇಮಕಾತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಿವಿಧ 54 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ವಿವಿಧ 54 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಉತ್ತಮ ಭವಿಷ್ಯ ರೂಪಿಸುವ ಟಾಪ್ 6 ಉದ್ಯೋಗಗಳುಉತ್ತಮ ಭವಿಷ್ಯ ರೂಪಿಸುವ ಟಾಪ್ 6 ಉದ್ಯೋಗಗಳು

10 ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ, 30 ಅರಣ್ಯ ರಕ್ಷಕ ಹಾಗೂ 14 ವೀಕ್ಷಕ ಹುದ್ದೆಗಳನ್ನು ಸ್ಪೋರ್ಟ್ಸ್ ಕೋಟಾದಡಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ: ಶೀಘ್ರಲಿಪಿಗಾರರ ನೇಮಕಾತಿ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ: ಶೀಘ್ರಲಿಪಿಗಾರರ ನೇಮಕಾತಿ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ

ಹುದ್ದೆಯ ವಿವರ

ಹುದ್ದೆಯ ಹೆಸರು: ಉಪ ವಲಯ ಅರಣ್ಯಾಧಿಕಾರಿ
ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ.

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ

ಹುದ್ದೆಯ ಹೆಸರು: ಅರಣ್ಯ ರಕ್ಷಕ
ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ

ಹುದ್ದೆಯ ಹೆಸರು: ಅರಣ್ಯ ವೀಕ್ಷಕ
ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಥತೆ: ಎಸ್ ಎಸ್ ಎಲ್ ಸಿ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸತಕ್ಕದ್ದು. ಆನ್-ಲೈನ್ ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಳು, ಜಾತಿ/ಪ್ರವರ್ಗ ದೃಢೀಕರಿಸುವ ಪ್ರಮಾಣ ಪತ್ರಗಳು, ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತ , ವೈದ್ಯಕೀಯ ಪ್ರಮಾಣ ಪತ್ರ, ಸೈನಿಕ ಸೇವೆ ದೃಢೀಕರಣ ಮತ್ತು ಇತರೆ ಅವಶ್ಯವಿರುವ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಇಲಾಖಾ ವೆಬ್ಸೈಟ್ ಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅಪ್ಲೋಡ್ ಮಾಡತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100 + ಸೇವಾ ಶುಲ್ಕ ರೂ.15 /-
  • ಪ.ಜಾ/ಪ.ಪಂ/ಪ್ರ-1 /ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50+ ಸೇವಾ ಶುಲ್ಕ ರೂ.15 /-

ಅರ್ಜಿ ಶುಲ್ಕವನ್ನು ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕ ಅಭ್ಯರ್ಥಿಗಳು ಪಾವತಿಸತಕ್ಕದ್ದು.

ಪ್ರಮುಖ ದಿನಾಂಕಗಳು

ಆನ್-ಲೈನ್ ಮೂಲಕ ಅರ್ಜಿಯನ್ನು ದಿನಾಂಕ 29-01-2018 ರಿಂದ 17-02-2018 ರ ಅಪರಾಹ್ನ 4-00 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ

ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಡ್ಯತೆ , ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ ವಿಳಾಸ www.aranya.gov.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Karnataka Forest Department Recruiting 10 DFRO cum Surveyor, 30 Forest Guards, 14 Forest Watchers through Sports Quota.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X