ಕಾರ್ಮಿಕ ಇಲಾಖೆ: ಕರ್ನಾಟಕ ಕಾರ್ಮಿಕ ಆಧ್ಯಯನ ಸಂಸ್ಥೆ ನಿರ್ದೇಶಕರ ನೇಮಕಾತಿ

Posted By:

ಕಾರ್ಮಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಐಟಿಬಿಪಿ: ಹೆಡ್ ಕಾನ್ಸ್ ಟೇಬಲ್ ಮತ್ತು ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿರುತ್ತದೆ.

ಅಡ್ವೊಕೇಟ್ ಜನರಲ್‍ರವರ ಕಛೇರಿಯಲ್ಲಿ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರ ನೇಮಕಾತಿ

ಕಾರ್ಮಿಕ ಇಲಾಖೆ ನೇಮಕಾತಿ

ವಿದ್ಯಾರ್ಹತೆ

ಸಮಾಜ ವಿಜ್ಞಾನ, ಕಾನೂನು ಅಥವಾ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು.

ಕನಿಷ್ಠ 10 ವರ್ಷಗಳು ಪೂರ್ಣಕಾಲಿಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು ಹಾಗೂ ಸಮಾಜ ವಿಜ್ಞಾನ/ಕಾನೂನು ವಿಷಯಕ್ಕೆ ಸಂಬಂಧಿಸಿದ ಪರಿಣಾಮಕಾರಿಯಾದ ಬರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿರಬೇಕು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದ ಮೋನೋಗ್ರಾಫ್ಸ್ ಅನ್ನು ಪ್ರಕಟಿಸಿರಬೇಕು. ಯಾವುದಾದರು ಖ್ಯಾತ ರಾಷ್ಟ್ರ ಮಟ್ಟದ ಸಂಸ್ಥೆಯಲ್ಲಿ ಡೀನ್ ಅಥವಾ ನಿರ್ಧೇಶಕರಾಗಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು.

ವಯೋಮಿತಿ: ಗರಿಷ್ಠ 67 ವರ್ಷಗಳು

ಅವಧಿ: ಐದು ವರ್ಷ

ವೇತನ: ಯುಜಿಸಿ ವೇತನ ಶ್ರೇಣಿ ಅನುಗುಣವಾಗಿ ರೂ.37400-67000/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-01-2018

ಅರ್ಜಿ ಸಲ್ಲಿಸಬೇಕಾದ ವಿಳಾಸ

ಕಾರ್ಮಿಕ ಇಲಾಖೆ ಕರ್ನಾಟಕ ಕಾರ್ಮಿಕ ಆಧ್ಯಯನ ಸಂಸ್ಥೆ
ಕಾರ್ಮಿಕ ಭವನ, 1ನೇ ಮಹಡಿ, ಐಟಿಐ ಆವರಣ, ಬನ್ನೇರುಘಟ್ಟ ರಸ್ತೆ
ಬೆಂಗಳೂರು-560029

ಹೆಚ್ಚಿನ ಮಾಹಿತಿಗೆ

ದೂರವಾಣಿ ಸಂಖ್ಯೆ: 080-26531258
ಇ-ಮೇಲ್ ವಿಳಾಸ: dlcbangalore@gmail.com

English summary
Karnataka Labour Department recruiting director post. Eligible candidate can apply through prescribed application format on before Jan 15, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia