ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಹಲವು ಹುದ್ದೆಗಳ ನೇಮಕಾತಿ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಡಿಜಿಎಂ, ಮೆಡಿಕಲ್ ಆಫೀಸರ್, ಅಕೌಂಟ್ಸ್ ಆಫೀಸರ್, ವೆಲ್ಫೇರ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಒಟ್ಟು 18 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅವಶ್ಯವಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಡಿಜಿಎಂ, ಮೆಡಿಕಲ್ ಆಫೀಸರ್, ಅಕೌಂಟ್ಸ್ ಆಫೀಸರ್, ವೆಲ್ಫೇರ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಒಟ್ಟು 18 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ನೇಮಕಾತಿ

ಹುದ್ದೆಗಳ ವಿವರ

ಡೆಪ್ಯುಟಿ ಜನರಲ್ ಮ್ಯಾನೇಜರ್ (ಸಿಎ & ಸಿಎಸ್)-01 ಹುದ್ದೆ

ವೇತನ ಶ್ರೇಣಿ: ರೂ.32725-57575/-
ವಿದ್ಯಾರ್ಹತೆ

  • ಕರ್ನಾಟಕದಲ್ಲಿನ ಅಂಗೀಕೃತ ವಿಶ್ವವಿದ್ಯಾಲಯದಿಂದ ಮೊದಲನೇ ದರ್ಜೆಯಲ್ಲಿ ಪದವಿ (ರೆಗ್ಯುಲರ್) ಹೊಂದಿರಬೇಕು.
  • ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರಿಸ್ ಆಫ್ ಇಂಡಿಯಾ ಸಂಸ್ಥೆಯಿಂದ ಅಸೋಸಿಯೇಟ್ ಮೆಂಬರ್ಷಿಪ್ ಸರ್ಟಿಫಿಕೇಟ್ ಹೊಂದಿರಬೇಕು.
  • ಸಾರ್ವಜನಿಕ ವಲಯದ ಸಂಸ್ಥೆಯ ಸೆಕ್ರೆಟರಿಯಲ್ ವಿಭಾಗದಲ್ಲಿ ಕಾರ್ಯನಿರ್ವಾಹಕರಾಗಿ 5 ವರ್ಷಗಳ ಅನುಭವ ಹೊಂದಿರಬೇಕು.

ಫ್ಯಾಕ್ಟರಿ ಮೆಡಿಕಲ್ ಆಫೀಸರ್-06 ಹುದ್ದೆಗಳು

ವೇತನ ಶ್ರೇಣಿ: ರೂ.20895-49895/-
ವಿದ್ಯಾರ್ಹತೆ

  • ಕರ್ನಾಟಕದಲ್ಲಿನ ಅಂಗೀಕೃತ ವೈದ್ಯಕೀಯ ಸಂಸ್ಥೆ / ಕಾಲೇಜಿನಲ್ಲಿ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕ ಪದವಿ (ಎಂಬಿಬಿಎಸ್) ಹೊಂದಿರಬೇಕು.
  • ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡಿರುವ ಕೈಗಾರಿಕಾ ಸ್ವಾಸ್ಥ್ಯದಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಹೊಂದಿರಬೇಕು.
  • ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ/ಆರೋಗ್ಯ ಕೇಂದ್ರ ಗಳಲ್ಲಿ ಎರಡು ವರ್ಷಗಳ ಅನುಭವ (ಇಂಟರ್ನಶಿಪ್ ತರಬೇತಿ ಪಡೆದಿರಬೇಕು)

ಅಕೌಂಟ್ಸ್ ಆಫೀಸರ್-02 ಹುದ್ದೆಗಳು

ವೇತನ ಶ್ರೇಣಿ: ರೂ.20895-49895/-
ವಿದ್ಯಾರ್ಹತೆ

  • ಪ್ರಥಮ ದರ್ಜೆಯಲ್ಲಿ ಪದವಿಯ ಜೊತೆಗೆ ಮೆಂಬರ್ಶಿಪ್ ಆಫ್ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಡಬ್ಲ್ಯುಎ) ಅಥವಾ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ನಲ್ಲಿ ತೇರ್ಗಡೆ ಹೊಂದಿರಬೇಕು.

ವೆಲ್ಫೇರ್ ಆಫೀಸರ್-09 ಹುದ್ದೆಗಳು

ವೇತನ ಶ್ರೇಣಿ: ರೂ.19055-43995/-
ವಿದ್ಯಾರ್ಹತೆ

  • ಕರ್ನಾಟಕ ಅಂಗೀಕೃತ ವಿಶ್ವವಿದ್ಯಾಲಯದಿಂದ ಸೋಷಿಯಲ್ ವರ್ಕ್ (ಎಂಎಸ್ ಡಬ್ಲ್ಯು) ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಹೆಸರಾಂತ ಉದ್ದಿಮೆಗಳಲ್ಲಿ ವೆಲ್ಫೇರ್ ಆಫೀಸರ್ ಹುದ್ದೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ರೂ.250/-

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 30-08-2017
ಅರ್ಜಿ ಸಲ್ಲಿಸಲು ಮತ್ತು ಚಲನ್ ಪಡೆಯಲು ಕೊನೆಯ ದಿನಾಂಕ: 23-09-2017
ಅಂಚೆ ಕಛೇರಿ ಮೂಲಕ ಹಣ ಪಾವತಿಸಲು ಕೊನೆಯ ದಿನಾಂಕ: 26-09-2017

ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ಮೀಸಲಾತಿಗೆ ತಕ್ಕಂತೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Power Corporation Limited invited online applications to fill various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X