ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹಾಗು ಬೋಧಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ 08 ಸೆಟ್ ಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. (ವಿಶ್ವವಿದ್ಯಾಲಯ/ ಅಂತರ್ಜಾಲದಿಂದ ಒಂದು ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪ್ರತಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಲ್ಲಿಸುವುದು) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25 -02 -2017.
ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
ಯೋಜನಾ ಸಹಾಯಕರು | 08 |
ಉಪ ನಿರ್ದೇಶಕರು | 01 |
ಸಿಸ್ಟಂ ಅನಲಿಸ್ಟ್ | 01 |
ಸಹಾಯಕ ನಿರ್ದೇಶಕರು | 01 |
ಕಂಪ್ಯೂಟರ್ ಪ್ರೋಗ್ರಾಮರ್ | 01 |
ಸಹಾಯಕರು | 01 |
ಶೀಘ್ರ ಲಿಪಿಕಾರರು | 01 |
ಗ್ರಂಥಾಲಯ ಸಹಾಯಕರು | 01 |
ಡಾಟಾ ಎಂಟ್ರಿ ಆಪರೇಟರ್ | 02 |
ಕಿರಿಯ ಸಹಾಯಕರು | 01 |
ಟೆಲಿಫೋನ್ ಆಪರೇಟರ್ | 02 |
ಸಾಮಾನ್ಯ ಮಾಹಿತಿಗಳು ಮತ್ತು ಸೂಚನೆಗಳು:
ನಿಗದಿತ ಅರ್ಜಿ ನಮೂನೆಗಳನ್ನು ಕುಲಸಚಿವರು, ಕರ್ನಾಟಕ ಸಂಸ್ಕೃತ ವಿಹ್ವಾವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇವರಿಂದ ಶುಲ್ಕವನ್ನು ಡಿ.ಡಿ. ಮೂಲಕ " ಹಣಕಾಸು ಅಧಿಕಾರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು" ಇವರ ಹೆಸರಿಗೆ ಪಾವತಿಸಿ ಪಡೆಯಬಹುದಾಗಿದೆ ಹಾಗೂ ಈ ಅಧಿಸೂಚನೆಯ ಪ್ರತಿ ಮತ್ತು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಅಂತರ್ಜಾಲ (www.ksu.ac.in) ದಿಂದಲೂ ಪಡೆಯಬಹುದು, ಅಂತಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಡಿ.ಡಿ.ಯನ್ನು ಕಡ್ಡಾಯವಾಗಿ ಸಲ್ಲಿಸುವುದು.
ಶುಲ್ಕದ ವಿವರ:
ಅಭ್ಯರ್ಥಿಗಳು ಅರ್ಜಿ ಪಡೆಯಲು ಪಾವತಿಸಬೇಕಾದ ಶುಲ್ಕ
ಎಲ್ಲಾ ಹುದ್ದೆಗಳಿಗೆ ರೂ.200 /- , ಎಲ್ಲಾ ವರ್ಗಗಳ ಅಭ್ಯರ್ಥಿಗಳು ಅಂಚೆಯ ಮೂಲಕ ಪಡೆಯಲು ಪಾವತಿಸಬೇಕಾದ ಹೆಚ್ಚಿನ ಶುಲ್ಕ ರೂ.50 /-
ಭರ್ತಿ ಮಾಡಿದ ಅರ್ಜಿಯ ಜೊತೆ ಸಲ್ಲಿಸಬೇಕಾದ ಶುಲ್ಕ ರೂ.400 /- (ಪ.ಜಾ/ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳು ರೂ.200 /- ).
ನಿಗದಿತ ಅರ್ಜಿ ಶುಲ್ಕ ಪಾವತಿಸಿದ ಡಿ.ಡಿ.ಯನ್ನು ತೋರಿಸಿದಲ್ಲಿ/ಹಾಜರುಪಡಿಸಿದ ಅರ್ಜಿಗಳನ್ನು ನೇರವಾಗಿ/ ಅಂಚೆಯ ಮೂಲಕ ಕಳುಹಿಸಲಾಗುವುದು.
ಸೂಚನೆ:
1. ಅರ್ಜಿಗಳನ್ನು ಅಂಚೆಯ ಮೂಲಕ ಪಡೆಯ ಬಯಸುವವರು "6 *12 " ಅಳತೆಯ ಸ್ವ-ವಿಳಾಸ ಹೊಂದಿದ ಲಕೋಟೆಯೊಂದಿಗೆ " ಹಣಕಾಸು ಅಧಿಕಾರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು" ಇವರ ಹೆಸರಿಗೆ ಪಡೆದುಕೊಂಡ ಡಿ.ಡಿ.ಯನ್ನು 'ಕುಲಸಚಿವರು, ಕರ್ನಾಟಕ ಸಂಸ್ಕೃತ ವಿಹ್ವಾವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ' ಇವರಿಗೆ ಕಳುಹಿಸಬೇಕು.
2. ಎಂಟು ಸೆಟ್ ಗಳಲ್ಲಿ ಸಲ್ಲಿಸಿದ ಅರ್ಜಿಗಳು ಹಾಗೂ ಅವುಗಳಿಗೆ ಲಗತ್ತಿಸಿದ ವಿದ್ಯಾರ್ಹತೆ ಹಾಗು ಇತರೆ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.
3. ಪ್ರತ್ಯೇಕ ಹುದ್ದೆಗಳಿಗೆ ಬೇರೆ ಬೇರೆ ಅರ್ಜಿಗಳನ್ನು ಸಲ್ಲಿಸಬೇಕು.
4. ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸೇವೆಗೆ ಸೇರಿಕೊಳ್ಳುವ ಸಮಯ ಅಥವಾ ಇನ್ಯಾವುದೇ ಸಂದರ್ಭದಲ್ಲಾದರೂ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ರೀತಿಯ ಟಿ.ಎ/ಡಿ.ಎ / ಅಥವಾ ಇನ್ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.
5. ಅಭ್ಯರ್ಥಿಗಳು 08 (ಎಂಟು) ಸೆಟ್ ಗಳಲ್ಲಿ ಅರ್ಜಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿಗಳು ಅಪೂರ್ಣವಾಗಿದ್ದರೆ ಅವುಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು.
6. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 25 -02 -2017 ರಂದು ಸಂಜೆ 04 :00 ಗಂಟೆಯ ಒಳಗೆ 'ಕುಲಸಚಿವರು, ಕರ್ನಾಟಕ ಸಂಸ್ಕೃತ ವಿಹ್ವಾವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮' ಇವರಿಗೆ ತಲುಪುವಂತೆ ಕಳುಹಿಸಬೇಕು.
7. ಲಕೋಟೆಯ ಮೇಲೆ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು. ಅಂತರ್ಜಾಲದ ಮೂಲಕ ಅರ್ಜಿ ಪಡೆದು ಸಲ್ಲಿಸುವ ಅಭ್ಯರ್ಥಿಗಳು ಲಕೋಟೆಯ ಮೇಲೆ ಅಂತರ್ಜಾಲದಿಂದ ಪಡೆದ ಅರ್ಜಿ ಎಂದು ನಮೂದಿಸುವುದು.
ಹೆಚ್ಚಿನ ಮಾಹಿತಿಗಾಗಿ www.ksu.ac.in