ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ 60 ಹುದ್ದೆಗಳ ನೇಮಕಾತಿ

Posted By:

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಉದ್ಯೋಗಾವಕಾಶ: ಜನವರಿ 17ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ

ಒಟ್ಟು 60 ಹುದ್ದೆಗಳಿಗೆ ನೇಮಕಾತಿ ನಡೆಯತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ.2 ಲಕ್ಷ ವಿದ್ಯಾರ್ಥಿವೇತನ

ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ನೇಮಕಾತಿ

ಹುದ್ದೆಗಳ ವಿವರ

1.ಉಪ ಪ್ರಧಾನ ವ್ಯವಸ್ಥಾಪಕರು-02 ಹುದ್ದೆಗಳು

ವೇತನ ಶ್ರೇಣಿ: ರೂ.26000-47700 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷ ಅನುಭವ ಹೊಂದಿರಬೇಕು

2.ಸಹ ಪ್ರಧಾನ ವ್ಯವಸ್ಥಾಪಕರು-02 ಹುದ್ದೆಗಳು

ವೇತನ ಶ್ರೇಣಿ: ರೂ.19000-36300 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು

3.ಅಧಿಕಾರಿ-05 ಹುದ್ದೆಗಳು

ವೇತನ ಶ್ರೇಣಿ: ರೂ.16800-29600 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು

4.ತಾಂತ್ರಿಕ ಅಧಿಕಾರಿ (ಅಧಿಕಾರಿ ಶ್ರೇಣಿ)-02 ಹುದ್ದೆಗಳು

ವೇತನ ಶ್ರೇಣಿ: ರೂ.16800-29600 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ/ಬಿಟೆಕ್ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಬ್ಯಾಂಕಿಂಗ್ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು

5.ಸೌಹಾರ್ದ ಅಭಿವೃದ್ದಿ ಅಧಿಕಾರಿ (ಕಿರಿಯ ಅಧಿಕಾರಿ)-12 ಹುದ್ದೆಗಳು

ವೇತನ ಶ್ರೇಣಿ: ರೂ.14550-26700 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು

6.ವಿನ್ಯಾಸಗಾರರು (ಡಿಸೈನರ್) (ಕಿರಿಯ ಅಧಿಕಾರಿ-01 ಹುದ್ದೆ

ವೇತನ ಶ್ರೇಣಿ: ರೂ.14550-26700 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಮುದ್ರಣಕ್ಕೆ ಸಂಬಂಧಿಸಿದಂತೆ ಡಿಸೈನಿಂಗ್ ತರಬೇತಿ ಮತ್ತು ಅನುಭವ ಹೊಂದಿರಬೇಕು

7.ಸಹಾಯಕರು-22 ಹುದ್ದೆಗಳು

ವೇತನ ಶ್ರೇಣಿ: ರೂ.11600-21000 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.

8.ಶೀಘ್ರಲಿಪಿಗಾರರು -(ಸ್ಟೆನೋ)-06 ಹುದ್ದೆಗಳು

ವೇತನ ಶ್ರೇಣಿ: ರೂ.11600-21000 /-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಕನ್ನಡ/ಇಂಗ್ಲಿಷ್ ಶೀಘ್ರಲಿಪಿಯಲ್ಲಿ ಪ್ರೌಢದರ್ಜೆ ತೇರ್ಗಡೆಯಾಗಿರಬೇಕು ಮತ್ತು ಬೆರಳಚ್ಚಿನಲ್ಲಿ ಸೀನಿಯರ್ ಆಗಿರಬೇಕು.

9.ಉಪಸಿಬ್ಬಂದಿ-04 ಹುದ್ದೆಗಳು

ವೇತನ ಶ್ರೇಣಿ: ರೂ.9600-14550 /-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ತಿಳುವಳಿಕೆ ಕಡ್ಡಾಯ.

10.ಉಪಸಿಬ್ಬಂದಿ ಕಮ್ ವಾಹನ ಚಾಲಕ-03 ಹುದ್ದೆಗಳು

ವೇತನ ಶ್ರೇಣಿ: ರೂ.9600-14550 /-
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಮೋಟಾರ್ ವಾಹನ ಚಾಲನಾ ಪರವಾನಿಗೆ ಪಡೆದಿರಬೇಕು.

11.ಸ್ವಚ್ಛತಾ ಸಿಬ್ಬಂದಿ (ಸ್ವೀಪರ್)-01ಹುದ್ದೆ

ವೇತನ ಶ್ರೇಣಿ: ರೂ.6500-13000 /-
ವಿದ್ಯಾರ್ಹತೆ: ಏಳನೇ ತರಗತಿ ಉತ್ತೀರ್ಣರಾಗಿರಬೇಕು, ಕನ್ನಡ ಓದಲು ಮತ್ತು ಬರೆಯಲು ಬರಬೇಕು.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅಥವಾ ಆನ್-ಲೈನ್ ನಲ್ಲಿ ನೇರವಾಗಿ ಭರ್ತಿ ಮಾಡಿ ನಂತರದಲ್ಲಿ ಮುದ್ರಿತ ಅರ್ಜಿಯನ್ನು ವೆಬ್ಸೈಟ್ ನಲ್ಲಿ ನೀಡಿರುವ ವಿವರದಂತೆ ಅಗತ್ಯ ದಾಖಲೆಯೊಂದಿಗೆ ಕಚೇರಿ ವಿಳಾಸಕ್ಕೆ ಕಳುಹಿಸುವುದು.

ಕಚೇರಿ ವಿಳಾಸ

ವ್ಯವಸಾಪಾಕ ನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿ,
ಸಿಬ್ಬಂದಿ ನೇಮಕಾತಿ ಸಮಿತಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.,
ನಿರ್ಮಾಣ ಭವನ ,ಡಾ. ರಾಜಕುಮಾರ್ ರಸ್ತೆ,
1ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು - 560010

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 12-01-2018
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2018

ಅರ್ಜಿ ಶುಲ್ಕ

  • ಕ್ರಮ ಸಂಖ್ಯೆ 1 ರಿಂದ 6 ರವರೆಗೆ ಹುದ್ದೆಗಳಿಗೆ ರೂ.2000/-
  • ಶೀಘ್ರಲಿಪಿಗಾರರು/ಸಹಾಯಕ ಹುದ್ದೆಗಳಿಗೆ ರೂ.1000/-
  • ವಾಹನ ಚಾಲಕ/ಉಪಸಿಬ್ಬಂದಿ/ಸ್ವಚ್ಛತಾ ಸಿಬ್ಬಂದಿ ಹುದ್ದೆಗಳಿಗೆ ರೂ.500/-

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka State Souharda Federal Cooperative Ltd invites application to fill 60 various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia