ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಬೇಕಾ ?...ಹಾಗಿದ್ರೆ ಇಲ್ಲಿದೆ ಅದ್ಭುತ ಅವಕಾಶ..ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ

ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಬಯಸುವ ಅಭ್ಯರ್ಥಿಗಳಿಗಾಗಿ ಸುವರ್ಣಾವಕಾಶ ಅದೇನೆಂದರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 36 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.

ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಬಯಸುವ ಅಭ್ಯರ್ಥಿಗಳಿಗಾಗಿ ಸುವರ್ಣಾವಕಾಶ ಅದೇನೆಂದರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 36 ವ್ಯವಸ್ಥಾಪಕರು, ಸಾರ್ವಜನಿಕ ಸಂಪರ್ಕಾಧಿಕಾರಿ,ಸಹಾಯಕ ವ್ಯವಸ್ಥಾಪಕರು,ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 15,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಬೇಕೆ ? ಹಾಗಿದ್ರೆ ಇಂದೇ ಅರ್ಜಿ ಹಾಕಿ

CRITERIA DETAILS
Name Of The Posts ವ್ಯವಸ್ಥಾಪಕ,ಸಾರ್ವಜನಿಕ ಸಂಪರ್ಕಾಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ,ಪ್ರವಾಸಿ ಮಾರ್ಗದರ್ಶಿ,ಡಾಟಾ ಎಂಟ್ರಿ ಆಪರೇಟರ್
Organisation ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
Educational Qualification ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ,ಎಂ.ಕಾಂ / ಎಂ.ಬಿ.ಎ / ಚಾರ್ಟೆಡ್ ಅಕೌಟೆಂಟ್ (ಸಿ.ಎ), ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೋಮಾ ಪದವಿ (ಪಿಯುಸಿ +೩ ವ‍ರ್ಷ) (ಬಿಹೆಚ್‌ಎಂ / ಬಿಎಸ್‌ಸಿ - ಹೋಟೆಲ್ ಮ್ಯಾನೇಜ್ಮೆಂಟ್), ಎಂಬಿಎ ಅಥವಾ ಪ್ರವಾಸೋದ್ಯಮ ಆಡಳಿತದಲ್ಲಿ ಸ್ನಾತಕೋತ್ತರ ಪದವಿ (ಎಂಟಿಎ) , ಐಹೆಚ್‌ಎಂ / ಎಫ್‌ಸಿಐ ಅಥವಾ ತತ್ಸಮಾನ ಪದವಿ, ಬಿ.ಕಾಂ / ಬಿ.ಬಿ.ಎಂ / ಎಂ.ಕಾಂ / ಎಂ.ಬಿ.ಎ (ಹಣಕಾಸು), ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೋಮಾ ಪದವಿ (ಬಿಹೆಚ್‌ಎಂ / ಬಿಎಸ್‌ಸಿ -ಹೋಟೆಲ್ ಮ್ಯಾನೇಜ್ಮೆಂಟ್), ಎಂಟಿಎ / ಎಂಬಿಎ ಪಿಜಿಡಿಬಿಎಂ- ಆಪರೇಷನ್ಸ್, ಬಿ.ಕಾಂ. ಪಿಯುಸಿ + ಪರವಾನಿಗೆ
Job Location ಬೆಂಗಳೂರು (ಕರ್ನಾಟಕ)
Salary Scale ಪ್ರಧಾನ ವ್ಯವಸ್ಥಾಪಕ (ಹೋಟೆಲ್ಸ್)- ತಿಂಗಳಿಗೆ 55,000/-ರೂ,ವ್ಯವಸ್ಥಾಪಕರು -ತಿಂಗಳಿಗೆ 30,000/-ರೂ,ಸಹಾಯಕ ವ್ಯವಸ್ಥಾಪಕರು - ತಿಂಗಳಿಗೆ 24,000/-ರೂ,ದ್ವಿತೀಯ ದರ್ಜೆ ಲೆಕ್ಕ ಸಹಾಯಕರು,ಪ್ರವಾಸಿ ಮಾರ್ಗದರ್ಶಿ ಮತ್ತು ಡಾಟಾ ಎಂಟ್ರಿ ಆಪರೇಟರ್ -ತಿಂಗಳಿಗೆ 13,000/-ರೂ
Application Start Date August 31, 2019
Application End Date September 15, 2019

ವಿದ್ಯಾರ್ಹತೆ:

ಪ್ರಧಾನ ವ್ಯವಸ್ಥಾಪಕ (ಹೋಟೆಲ್ಸ್) ಹುದ್ದೆಗಳಿಗೆ ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ,ವ್ಯವಸ್ಥಾಪಕರು (ಹಣಕಾಸು) ಹುದ್ದೆಗಳಿಗೆ ಎಂ.ಕಾಂ / ಎಂ.ಬಿ.ಎ / ಚಾರ್ಟೆಡ್ ಅಕೌಟೆಂಟ್ (ಸಿ.ಎ) ವಿದ್ಯಾರ್ಹತೆ, ವ್ಯವಸ್ಥಾಪಕರು (ಹೋಟೆಲ್ಸ್) ಹುದ್ದೆಗಳಿಗೆ ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೋಮಾ ಪದವಿ (ಪಿಯುಸಿ +3 ವ‍ರ್ಷ) (ಬಿಹೆಚ್‌ಎಂ / ಬಿಎಸ್‌ಸಿ - ಹೋಟೆಲ್ ಮ್ಯಾನೇಜ್ಮೆಂಟ್) ವಿದ್ಯಾರ್ಹತೆ, ವ್ಯವಸ್ಥಾಪಕರು (ಮಾರುಕಟ್ಟೆ ಮತ್ತು ಮಾರಾಟ) ಹುದ್ದೆಗಳಿಗೆ ಎಂಬಿಎ ಅಥವಾ ಪ್ರವಾಸೋದ್ಯಮ ಆಡಳಿತದಲ್ಲಿ ಸ್ನಾತಕೋತ್ತರ ಪದವಿ (ಎಂಟಿಎ) ವಿದ್ಯಾರ್ಹತೆ. ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ / ಯು.ಜಿ.ಸಿ ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಹತೆ. ಸೌಸ್ ಶೇಫ್ ಹುದ್ದೆಗಳಿಗೆ ಹೋಟೆಲ್ ಮ್ಯಾನೇಜ್ಮೆಂಟ್- ಐಹೆಚ್‌ಎಂ / ಎಫ್‌ಸಿಐ ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ತತ್ಸಮಾನ ಪದವಿ ವಿದ್ಯಾರ್ಹತೆ. ಸಹಾಯಕ ವ್ಯವಸ್ಥಾಪಕರು (ಹಣಕಾಸು) ಹುದ್ದೆಗಳಿಗೆ ಬಿ.ಕಾಂ / ಬಿ.ಬಿ.ಎಂ / ಎಂ.ಕಾಂ / ಎಂ.ಬಿ.ಎ (ಹಣಕಾಸು) ವಿದ್ಯಾರ್ಹತೆ. ಸಹಾಯಕ ವ್ಯವಸ್ಥಾಪಕರು (ಹೋಟೆಲ್ಸ್) ಹುದ್ದೆಗಳಿಗೆ ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೋಮಾ ಪದವಿ ಹೊಂದಿರಬೇಕು (ಬಿಹೆಚ್‌ಎಂ / ಬಿಎಸ್‌ಸಿ -ಹೋಟೆಲ್ ಮ್ಯಾನೇಜ್ಮೆಂಟ್). ಸಹಾಯಕ ವ್ಯವಸ್ಥಾಪಕರು (ಏರ್‌ಪೋರ್ಟ್ ಟ್ಯಾಕ್ಸಿ) ಹುದ್ದೆಗಳಿಗೆ ಎಂಟಿಎ / ಎಂಬಿಎ ಪಿಜಿಡಿಬಿಎಂ- ಆಪರೇಷನ್ಸ್ ವಿದ್ಯಾರ್ಹತೆ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹುದ್ದೆಗಳಿಗೆ ಬಿ.ಕಾಂ. ವಿದ್ಯಾರ್ಹತೆ, ಪ್ರವಾಸಿ ಮಾರ್ಗದರ್ಶಿ ಹುದ್ದೆಗಳಿಗೆ ಪಿಯುಸಿ + ಪರವಾನಿಗೆ ಹೊಂದಿರಬೇಕು ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ಮತ್ತು ವಯೋಮಿತಿಯ ವಿವರ:

ಹುದ್ದೆಯ ಹೆಸರುವೇತನವಯೋಮಿತಿ
ಪ್ರಧಾನ ವ್ಯವಸ್ಥಾಪಕ (ಹೋಟೆಲ್ಸ್)ತಿಂಗಳಿಗೆ 55,000/-ರೂ35 ರಿಂದ 55
ವ್ಯವಸ್ಥಾಪಕರು (ಹಣಕಾಸು)ತಿಂಗಳಿಗೆ 30,000/-ರೂ35 ರಿಂದ 65
ವ್ಯವಸ್ಥಾಪಕರು (ಹೋಟೆಲ್ಸ್)ತಿಂಗಳಿಗೆ 30,000/-ರೂ30 ರಿಂದ 50
ವ್ಯವಸ್ಥಾಪಕರು (ಮಾರುಕಟ್ಟೆ ಮತ್ತು ಮಾರಾಟ)ತಿಂಗಳಿಗೆ 30,000/-ರೂ25 ರಿಂದ 50
ಸಾರ್ವಜನಿಕ ಸಂಪರ್ಕಾಧಿಕಾರಿತಿಂಗಳಿಗೆ 30,000/-ರೂ25 ರಿಂದ 50
ಸೌಸ್ ಶೇಫ್ತಿಂಗಳಿಗೆ 30,000/-ರೂ30 ರಿಂದ 50
ಸಹಾಯಕ ವ್ಯವಸ್ಥಾಪಕರು (ಹಣಕಾಸು)ತಿಂಗಳಿಗೆ 24,000/-ರೂ25 ರಿಂದ 50
ಸಹಾಯಕ ವ್ಯವಸ್ಥಾಪಕರು (ಹೋಟೆಲ್ಸ್)ತಿಂಗಳಿಗೆ 24,000/-ರೂ22 ರಿಂದ 50
ಸಹಾಯಕ ವ್ಯವಸ್ಥಾಪಕರು (ಏರ್‌ಪೋರ್ಟ್ ಟ್ಯಾಕ್ಸಿ)ತಿಂಗಳಿಗೆ 24,000/-ರೂ30 ರಿಂದ 50
ದ್ವಿತೀಯ ದರ್ಜೆ ಲೆಕ್ಕ ಸಹಾಯಕರುತಿಂಗಳಿಗೆ 13,000/-ರೂ25 ರಿಂದ 40
ಪ್ರವಾಸಿ ಮಾರ್ಗದರ್ಶಿತಿಂಗಳಿಗೆ 13,000/-ರೂ20 ರಿಂದ 30
ಡಾಟಾ ಎಂಟ್ರಿ ಆಪರೇಟರ್ತಿಂಗಳಿಗೆ 13,000/-ರೂ18 ರಿಂದ 30


* ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ :

ಅರ್ಹ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸೆಪ್ಟೆಂಬರ್ 15,2019ರೊಳಗೆ ಕಚೇರಿಗೆ ಸ್ಟೀಡ್ ಪೋಸ್ಟ್ / ರಿಜಿಸ್ಟರ್ ಪೋಸ್ಟ್ / ಕೊರಿಯರ್ ಅಥವಾ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಯು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ / ಪೋಸ್ಟ್ ಕವರ್‌ನ ಮೇಲೆ ನಮೂದಿಸತಕ್ಕದ್ದು.

ಕಚೇರಿಯ ವಿಳಾಸ :

ವ್ಯವಸ್ಥಾಪಕರು (ಆಡಳಿತ)
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ.
ಕಾರ್ಯನಿರ್ವಾಹಕ ಕಛೇರಿ,
ನೆಲಮಹಡಿ, ಯಶವಂತಪುರ ಟಿಟಿಎಂಸಿ,
ಬಿ.ಎಂ.ಟಿ.ಸಿ ಬಸ್ ನಿಲ್ದಾಣ,
ಯಶವಂತಪುರ ವೃತ್ತ,
ಬೆಂಗಳೂರು-560022.

ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
KSTDC Recruitment 2019-20:Apply for 36 Tourist Guide, Data Entry Operator vacancies. Karnataka State Tourism Development Corporation (KSTDC) invited applications from eligible and interested candidates to fill up Tourist Guide, Data Entry Operator Posts through KSTDC official notification September 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X