ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ: 10,611 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆ ಹೈದರಾಬಾದ್-ಕರ್ನಾಟಕ ಪ್ರದೇಶದ 6 ಜಿಲ್ಲೆಗಳೂ ಸೇರಿದಂತೆ 34 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ' ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ತರಗತಿಗಳ) ವೃಂದ'ದ ಒಟ್ಟು 10,611 ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪದವೀಧರ ಪ್ರಾಥಮಿ ಶಿಕ್ಷಕ (6 ರಿಂದ 8 ತರಗತಿಗಳ) ವೃಂದ'ದ ಹುದ್ದೆಗಳಿಗೆ ಅನ್ವಯವಾಗುವ ವೃಂದ ಮತ್ತು ನೇಮಕಾತಿ ನಿಯಮಗಳಿಗನುಸಾರವಾಗಿ ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಡೆಯ ದಿನಾಂಕ ಏಪ್ರಿಲ್ 10,2019. ನಿಗದಿತ ಅರ್ಜಿ ನಮೂನೆಯಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು ಇತರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

 ಸಾರ್ವಜನಿಕ ಶಿಕ್ಷಣ ಇಲಾಖೆ ಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ
Organisation ಸಾರ್ವಜನಿಕ ಶಿಕ್ಷಣ ಇಲಾಖೆ
Educational Qualification ಪದವಿ
Job Location ಕರ್ನಾಟಕ
Salary Scale ತಿಂಗಳಿಗೆ 27,650/- ರಿಂದ 52,650/-ರೂ
Application End Date April 10, 2019

ವಿದ್ಯಾರ್ಹತೆ:

ಪದವಿಯಲ್ಲಿ ಕನಿಷ್ಟ ಶೇ.50ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮ ಉತ್ತೀರ್ಣರಾಗಿರಬೇಕು ಅಥವಾ ಪದವಿಯಲ್ಲಿ ಕನಿಷ್ಟ ಶೇ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಅಥವಾ ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು.
ಅಥವಾ
ಪಿಯುಸಿಯಲ್ಲಿ ಕನಿಷ್ಟ ಶೇ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ನಾಲ್ಕು ವರ್ಷದ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು. ಪರಿಂತು ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ / ಇತರೆ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ-1 ವಿಕಲಚೇತನರು ಕನಿಷ್ಟ ಶೇಕಡಾ 45 ಅಂಕಗಳನ್ನು ಪದವಿ ಅಥವಾ ಪಿಯುಸಿಯಲ್ಲಿ ಪಡೆದಿರಬೇಕು ಮತ್ತು ಕಾಲ ಕಾಲಕ್ಕೆ ಎನ್‌.ಸಿ.ಟಿ.ಇ.ಯು ನಿಗದಿಪಡಿಸಿದ ಯಾವುದಾದರೂ ಉನ್ನತ ಅಥವಾ ಹೆಚ್ಚುವರಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು ಮೇಲ್ಕಾಣಿಸಿದ ವಿದ್ಯಾರ್ಹತೆಯೊಂದಿಗೆ ಅಭ್ಯರ್ಥಿಗಳು ಕರ್ನಾಟಕ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೇಪರ್-2ರಲ್ಲಿ ಅರ್ಹತೆಗಳಿಸಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಟ 21 ವಯಸ್ಸನ್ನು ಪೂರೈಸಿರತಕ್ಕದ್ದು.

ಗರಿಷ್ಟ ವಯೋಮಿತಿ:

ಸಾಮಾನ್ಯ ವರ್ಗ40 ವರ್ಷಗಳು
2A,2B,3A,3B43 ವರ್ಷಗಳು
ಪ.ಜಾ / ಪ.ಪಂ / ಪ್ರವರ್ಗ-1 / ವಿಕಲಚೇತನ ಅಭ್ಯರ್ಥಿಗಳಿಗೆ45 ವರ್ಷಗಳು


ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,650/- ರಿಂದ 52,650/-ರೂ ವೇತನವನ್ನು ನೀಡಲಾಗುವುದು.

ಪಾವತಿಸಬೇಕಾದ ಶುಲ್ಕದ ವಿವರ:

ವಿವರಒಂದು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿಎರಡು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ
ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ / ಪ್ರವರ್ಗ - 1 /ಅಂಗವಿಕಲ ಅಭ್ಯರ್ಥಿಗಳಿಗೆ5001000
ಇತರೆ ಎಲ್ಲಾ ಅಭ್ಯರ್ಥಿಗಳಿಗೆ10002000
ಅರ್ಜಿ ಒಂದೇ ಆದರೂ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪರೀಕ್ಷಾ ಶುಲ್ಕವನ್ನು ಮೇಲ್ಕಾಣಿಸಿದ ತಃಖ್ತೆಯಲ್ಲಿರುವಂತೆ ಕಟ್ಟಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.schooleducation.kar.nic.in/ ಗೆ ಹೋಗಿ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಏಪ್ರಿಲ್ 10,2019 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ಈ ಹುದ್ದೆಗಳಿಗೆ ನಡೆಸಲಾಗುವ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕಗಳ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Teachers TET aka School Education Department Invites Online Applications for 10611 Graduate Primary Teachers posts which mainly for 6th to 8th Class in Karnataka State.Karnataka State Primary School Teachers News, Department of Public Instruction Government of Karnataka Released notification. Aspirants who want to apply for Teacher Job in Karnataka Vacancy 2019 must qualify Graduate or equivalent to this qualification from any recognized university/Board. Other eligibility and how to apply details for school education in Karnataka Teachers service information are mentioned below. Official Website is http://www.schooleducation.kar.nic.in/
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X