ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗಳ ನೇಮಕಾತಿ

ಅಭ್ಯರ್ಥಿಗಳು ಅಧಿಕೃತ ದಾಕಲಾತಿಗಳ ನಕಲುಪ್ರತಿಗಳೊಂದಿಗೆ ಸ್ವಂತ ಕೈಬರಹದಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿಗಳನ್ನು ಮೇ 27 ರ ಒಳಗೆ ಸಲ್ಲಿಸತಕ್ಕದ್ದು.

ಕರ್ನಾಟಕ ವಿಶ್ವವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠದ ಸಂಯೋಜಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲು ತಾತ್ಕಾಲಿಕ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅಧಿಕೃತ ದಾಕಲಾತಿಗಳ ನಕಲುಪ್ರತಿಗಳೊಂದಿಗೆ ಸ್ವಂತ ಕೈಬರಹದಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿಗಳನ್ನು ಮೇ 27 ರ ಒಳಗೆ ಸಲ್ಲಿಸತಕ್ಕದ್ದು.

ಹುದ್ದೆಗಳ ವಿವರ

ಯೋಜನಾ ಸಹಾಯಕ: 1 ಹುದ್ದೆ
ವಿದ್ಯಾರ್ಹತೆ: ಕನ್ನಡ ಎಂ.ಎ., ಪಿಎಚ್.ಡಿ.
ಮಾಸಿಕ ವೇತನ: ರೂ.12,000/-

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೇಮಕಾತಿ

ಕ್ಷೇತ್ರಕಾರ್ಯ ಸಹಾಯಕ: 1 ಹುದ್ದೆ
ವಿದ್ಯಾರ್ಹತೆ: ಕನ್ನಡ ಎಂ.ಎ
ಮಾಸಿಕ ವೇತನ: ರೂ.10000/-

ಕಂಪ್ಯೂಟರ್ ಆಪರೇಟರ್/ಕ್ಲರ್ಕ್: 1 ಹುದ್ದೆ
ವಿದ್ಯಾರ್ಹತೆ: ಸ್ನಾತಕ ಪದವಿ, ಕಂಪ್ಯೂಟರ್ ಜ್ಞಾನ (ಕನ್ನಡ ಮತ್ತು ಇಂಗ್ಲಿಷ್), ಕಛೇರಿ ಕೆಲಸದ ಅನುಭವ
ಮಾಸಿಕ ವೇತನ: ರೂ.9000/-

ಅರ್ಹತೆ

ಯೋಜನಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನ್ನಡ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಎಂ.ಎ ಪದವಿ ಪಡೆದಿರಬೇಕು. ಕನ್ನಡ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿರಬೇಕು. ಹಳಗನ್ನಡ ಸಾಹಿತ್ಯ, ಶಾಸ್ತ್ರ ಸಾಹಿತ್ಯದ ಬಗ್ಗೆ ಪಿಎಚ್.ಡಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಈ ಮೊದಲು ಯಾವುದಾದರೂ ಸಂಶೋಧನ ಯೋಜನೆಯಲ್ಲಿ ಕೆಲಸ ಮಾಡಿದ ಅನುಭವವಿದ್ದರೆ, ಕಂಪ್ಯೂಟರ್ ಜ್ಞಾನವಿದ್ದರೆ ಒಳ್ಳೆಯದು. ಸಾಹಿತ್ಯಿಕ/ಸಂಶೋಧನಾತ್ಮಕ ಲೇಖನ/ಪುಸ್ತಕ ಪ್ರಕಟಿಸಿದ್ದರೆ ಉತ್ತಮ.

ಕ್ಷೇತ್ರಕಾರ್ಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಕನಿಷ್ಠ 55% ಅಂಕಗಳೊಂದಿಗೆ ಎಂ.ಎ ಪದವಿ ಪಡೆದಿರಬೇಕು. ಕ್ಷೇತ್ರಕಾರ್ಯದ ಜೊತೆಗೆ ಇತರ ಕಛೇರಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು. (ಕನ್ನಡ ಮತ್ತು ಇಂಗ್ಲಿಷ್) ಜ್ವಾನವಿದ್ದವರಿಗೆ ಆದ್ಯತೆ ನೀಡಲಾಗುವುದು.

ಕಂಪ್ಯೂಟರ್ ಆಪರೇಟರ್ /ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದಾದರೂ ಸ್ನಾತಕ ಪದವಿ (ಕನ್ನಡ ಪದವಿಯಿದ್ದರೆ ಅನುಕೂಲ) ಜೊತೆಗೆ ಕಂಪ್ಯೂಟರ್ (ಕನ್ನಡ ಮತ್ತು ಇಂಗ್ಲಿಷ್) ಜ್ಞಾನವನ್ನು ಕಡ್ಡಾಯವಾಗಿ ಪಡೆದಿರಬೇಕು. ಪತ್ರ ಲೇಖನ, ಡಿ.ಟಿ.ಪಿ., ಹಣಕಾಸಿನ ಕಡತಗಳ ಸಿದ್ಧತೆ ಮತ್ತು ಲೆಕ್ಕಪತ್ರ ಇಡುವ ಕೆಲಸದಲ್ಲಿ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.

ಸಾಮಾನ್ಯ ನಿಯಮಗಳು

ಈ ಹುದ್ದೆಗಳು ನೇಮಕವಾದ ದಿನದಿಂದ ಕೇವಲ ಆರು ತಿಂಗಳ ಅವಧಿಯವರೆಗೆ ಮಾತ್ರ ಇರುತ್ತವೆ. ಈ ನೇಮಕಾತಿಯು ವಿಶ್ವವಿದ್ಯಾಲಯದ ಯಾವುದೇ ಖಾಯಂ ಹುದ್ದೆಗೆ ಅರ್ಹತೆಯನ್ನು ಅಥವಾ ಹಕ್ಕನ್ನು ನೀಡುವುದಿಲ್ಲ.

ನೇಮಕಾತಿ ವಿಷಯದಲ್ಲಿ ಪಂಪ ಅಧ್ಯಯನ ಪೀಠದ ಬೇಡಿಕೆಗಳಿಗೆ ಅನುಸಾರವಾಗಿ ನೇಮಕಾತಿ ನಿಯಮಗಳನ್ನು ಬದಲಿಸುವ ಮತ್ತು ಸಡಿಲಿಸುವ ಅಧಿಕಾರವು ನೇಮಕಾತಿ ಸಮಿತಿಗೆ ಇರುತ್ತದೆ.

ಅಭ್ಯರ್ಥಿಗಳು ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಸಂದರ್ಶನಕ್ಕೆ ಬರುವಾಗ ಎಲ್ಲಾ ಮೂಲದಾಖಲಾತಿಗಳನ್ನು ತಪ್ಪದೆ ತರತಕ್ಕದ್ದು.
ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ವಿಳಾಸ, ದೂರವಾಣಿ ಸಂಖ್ಯೆಯನ್ನು ತಪ್ಪದೆ ತಿಳಿಸಬೇಕು.

ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳು ಅಧಿಕೃತ ದಾಕಲಾತಿಗಳ ನಕಲುಪ್ರತಿಗಳೊಂದಿಗೆ ಸ್ವಂತ ಕೈಬರಹದಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
  • ಅರ್ಜಿಗಳನ್ನು ಸಂಯೋಜಕರು, ಆದಿಕವಿ ಪಂಪ ಅಧ್ಯಯನ ಪೀಠ ಕನ್ನಡ ವಿಭಾಗ, ಎರಡನೇ ಮಹಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-05-2017 (ಸಂಜೆ 5:30 ರೊಳಗೆ)

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್ ವಿಳಾಸ www.kud.ac.in ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Karnataka University Dharawad invited for temporary basis post in Adikavi Pampa Adhyayana Peeta.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+