ಕೇಂದ್ರಿಯ ವಿದ್ಯಾಲಯ ಸಂಘಟನೆ (ಕೆವಿಎಸ್): 1107 ಹುದ್ದೆಗಳ ನೇಮಕಾತಿ

Posted By:

ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆವಿಎಸ್ ದೇಶಾದ್ಯಂತ ಖಾಲಿ ಇರುವ ವಿವಿಧ 1107 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 127 ಹುದ್ದೆಗಳ ನೇಮಕಾತಿ

ಆಫೀಸ್ ಕೇಡರ್, ಲೈಬ್ರರಿಯನ್ ಸೇರಿದಂತೆ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸೌತ್ ಇಂಡಿಯನ್ ಬ್ಯಾಂಕ್: ಪ್ರೊಬೇಷನರಿ ಕ್ಲರ್ಕ್ ಹುದ್ದೆಗಳ ನೇಮಕಾತಿ

ಕೆವಿಎಸ್ 1107 ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

ಡೆಪ್ಯುಟಿ ಕಮಿಷನರ್-04 ಹುದ್ದೆಗಳು

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪೂರೈಸಿರಬೇಕು. ಅಸಿಸ್ಟೆಂಟ್ ಕಮಿಷನರ್ ಹುದ್ದೆಯಲ್ಲಿ ಸೇವೆ ಮಾಡಿದ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ.78800-209200/-

ಅಸಿಸ್ಟೆಂಟ್ ಕಮಿಷನರ್-13 ಹುದ್ದೆಗಳು

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪೂರೈಸಿರಬೇಕು.
ವೇತನ ಶ್ರೇಣಿ: ರೂ.78800-209200/-

ಅಡ್ಮಿನಿಸ್ಟ್ರೇಟಿವ್ ಆಫೀಸರ್-07 ಹುದ್ದೆಗಳು

ವಿದ್ಯಾರ್ಹತೆ: ಪದವಿ ಜೊತೆಗೆ ಕನಿಷ್ಠ ಮೂರು ವರ್ಷ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸಿರಬೇಕು.
ವೇತನ ಶ್ರೇಣಿ: ರೂ.56100-177500/-

ಫೈನಾನ್ಸ್ ಆಫೀಸರ್-02 ಹುದ್ದೆಗಳು

ವಿದ್ಯಾರ್ಹತೆ: ಬಿ.ಕಾಂ ಪದವಿ ಜೊತೆಗೆ ಆಡಿಟ್ ಮತ್ತು ಅಕೌಂಟ್ ಗೆ ಸಂಬಂಧಿಸಿದಂತೆ ನಾಲ್ಕು ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು.
ವೇತನ ಶ್ರೇಣಿ: ರೂ.44900-142400/-

ಅಸಿಸ್ಟೆಂಟ್ ಇಂಜಿನಿಯರ್-01 ಹುದ್ದೆ

ವಿದ್ಯಾರ್ಹತೆ: ಎಲೆಕ್ಟ್ರಿಕಲ್ ವಿಭಾಗದಲ್ಲಿ ಬಿ.ಇ ಪೂರೈಸಿರಬೇಕು
ವೇತನ ಶ್ರೇಣಿ: ರೂ.44900-142400/-

ಅಸಿಸ್ಟೆಂಟ್-27 ಹುದ್ದೆಗಳು

ವಿದ್ಯಾರ್ಹತೆ: ಪದವಿ ಜೊತೆಗೆ ಮೂರು ವರ್ಷ ಸೇವಾನುಭವ
ವೇತನ ಶ್ರೇಣಿ: ರೂ.35400-112400/-

ಹಿಂದಿ ಟ್ರಾನ್ಸ್ಲೇಟರ್-4 ಹುದ್ದೆಗಳು

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜೊತೆಗೆ ಬೆರಳಚ್ಚು ತರಬೇತಿ ಪಡೆದಿರಬೇಕು.
ವೇತನ ಶ್ರೇಣಿ: ರೂ.35400-112400/-

ಅಪ್ಪರ್ ಡಿವಿಷನ್ ಕ್ಲರ್ಕ್-146 ಹುದ್ದೆಗಳು

ವಿದ್ಯಾರ್ಹತೆ: ಪದವಿ ಜೊತೆಗೆ ಮೂರು ವರ್ಷ ಸೇವಾನುಭವ
ವೇತನ ಶ್ರೇಣಿ: ರೂ.25500-81100/-

ಸ್ಟೆನೋಗ್ರಾಫರ್-38 ಹುದ್ದೆಗಳು

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜೊತೆಗೆ ಬೆರಳಚ್ಚು ತರಬೇತಿ ಪಡೆದಿರಬೇಕು.
ವೇತನ ಶ್ರೇಣಿ: ರೂ.25500-81100/-

ಲೋಯರ್ ಡಿವಿಷನ್ ಕ್ಲರ್ಕ್-561 ಹುದ್ದೆಗಳು

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜೊತೆಗೆ ಬೆರಳಚ್ಚು ತರಬೇತಿ ಪಡೆದಿರಬೇಕು.
ವೇತನ ಶ್ರೇಣಿ: ರೂ.19900-63200/-

ಲೈಬ್ರರಿಯನ್-214 ಹುದ್ದೆಗಳು

ವಿದ್ಯಾರ್ಹತೆ: ಲೈಬ್ರರಿ ಸೈನ್ಸ್ ನಲ್ಲಿ ಪದವಿ ಹೊಂದಿರಬೇಕು.
ವೇತನ ಶ್ರೇಣಿ: ರೂ.44900-142400/-

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ: ರೂ.750/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-01-2018

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರ

ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರುದ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Kendriya Vidyalaya Sangathan invites online applications to fill up the posts of Officer's Cadre, Librarian and Non Teaching posts by direct recruitment.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia