ಕೇಂದ್ರಿಯ ವಿದ್ಯಾಲಯ ಸಂಘಟನೆ: 546 ಶಿಕ್ಷಕರ ನೇಮಕಾತಿ

ಕೇಂದ್ರಿಯ ವಿದ್ಯಾಲಯ ಸಂಘಟನೆಯಲ್ಲಿ ಒಟ್ಟು 546 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 17 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರಿಯ ವಿದ್ಯಾಲಯ ಸಂಘಟನ (ಕೆವಿಎಸ್) ವಿವಿಧ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 546 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 17 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಸ್ನಾತಕೋತ್ತರ ಪದವೀಧರ ಶಿಕ್ಷಕರು: 182

ವಿದ್ಯಾರ್ಹತೆ: ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುಬೇಕು
ವೇತನ ಶ್ರೇಣಿ: ರೂ.9300-34800/- (ಗ್ರೇಡ್ ಪೇ ರೂ.4800)
ಗರಿಷ್ಠ ವಯೋಮಿತಿ: 40 ವರ್ಷಗಳು

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಕೇಂದ್ರಿಯ ವಿದ್ಯಾಲಯ ಶಿಕ್ಷಕರ ನೇಮಕಾತಿ

ಪದವೀಧರ ಶಿಕ್ಷಕರು:144

ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿಯೊಂದಿಗೆ ಬಿ.ಇಡಿ ಪೂರ್ಣಗೊಳಿಸಿರಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಹೊಂದಿರಬೇಕು
ವೇತನ ಶ್ರೇಣಿ: ರೂ.9300-34800/- (ಗ್ರೇಡ್ ಪೇ ರೂ.4600)
ಗರಿಷ್ಠ ವಯೋಮಿತಿ: 35 ವರ್ಷಗಳು

ಪ್ರಾಥಮಿಕ ಶಿಕ್ಷಕರು:220

ವಿದ್ಯಾರ್ಹತೆ: ಎರಡು ವರ್ಷಗಳ ಡಿ.ಇಡಿ ಪೂರ್ಣಗೊಳಿಸಿರಬೇಕು

ವೇತನ ಶ್ರೇಣಿ: ರೂ.9300-34800/-(ಗ್ರೇಡ್ ಪೇ ರೂ.4200)
ಗರಿಷ್ಠ ವಯೋಮಿತಿ: 30 ವರ್ಷಗಳು

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.750/-
  • ಎಸ್.ಸಿ/ಎಸ್.ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ,

ಪ್ರಮುಖ ದಿನಾಂಕಗಳು

  • ಆನ್-ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 03-10-2017
  • ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-10-2017
  • ಆನ್-ಲೈನ್ ಅರ್ಜಿ ಶುಲ್ಕ ಪಾವತಿಸುವ ದಿನಾಂಕ: 17-10-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರಿಯ ವಿದ್ಯಾಲಯ

1963ನೇ ಇಸವಿಯಲ್ಲಿ 'ಸೆಂಟ್ರಲ್ ಸ್ಕೂಲ್ಸ್' ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ ಎಂಬ ಹೆಸರು ಪಡೆಯಿತು. ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಯಿಂದ ಗುರುತಿಸಲ್ಪಟ್ಟಿವೆ.ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರಿಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು.

ಕೇಂದ್ರಿಯ ವಿದ್ಯಾಲಯ ಶಾಲೆಗಳು ಏಕರೂಪದ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು , ಎಲ್ಲ ಶಾಲೆಗಳು ಸಿ ಬಿ ಎಸ್ ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರಿಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ.ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರಿಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ MHRD ಸಚಿವರು ಕಾರ್ಯ ನಿರ್ವಹಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Kendriya Vidyalaya Sangathan (KVS) has announced the recruitment notification for the candidates who want to apply for the Post Graduate Teacher, Trained Graduate Teacher and Primary Teacher posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X