ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೇಮಕಾತಿ

Posted By:

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಗೆ ಹೈದರಾಬಾದ್-ಕರ್ನಾಟಕ 371(ಜೆ) ಸ್ಥಳೀಯ ವೃಂದದವರಿಗೆ 371 ಜೆ ಅಡಿಯಲ್ಲಿ ಮೀಸಲಿಟ್ಟ ಹುದ್ದೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳನ್ನು ದಿನಾಂಕ: 19-06-2017 ರಂದು ನೇರ ಸಂದರ್ಶನ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಸೂಚಿಸಿದ ದಿನಾಂಕದಂದು ನೋಂದಾಯಿಸಿಕೊಳ್ಳತಕ್ಕದ್ದು.

ಹುದ್ದೆಗಳ ವಿವರ

ಬೋಧಕ ಸಿಬ್ಬಂದಿ
ಸಹಪ್ರಾಧ್ಯಾಪಕರು-01 ಹುದ್ದೆ
ವಿಭಾಗ: ಜನರಲ್ ಮೆಡಿಸಿನ್/ಅನೆಸ್ತೇಶಿಯಾಲಜಿ/ರೇಡಿಯೋ ಡಯಾಗ್ನಸಿಸ್/ಪೆಥಾಲಜಿ

ಕಿಮ್ಸ್ ಕೊಡುಗುನಲ್ಲಿ ನೇಮಕಾತಿ

ಸಹಾಯಕ ಪ್ರಾಧ್ಯಾಪಕರು-01 ಹುದ್ದೆ
ವಿಭಾಗ: ಜನರಲ್ ಮೆಡಿಸಿನ್/ರೇಡಿಯೋ ಡಯಾಗ್ನಸಿಸ್/ಪೆಥಾಲಜಿ

ಸೀನಿಯರ್ ರೆಸಿಡೆಂಟ್-02 ಹುದ್ದೆ
ವಿಭಾಗ: ಆಪ್ತಾಲ್ಮಾಲಜಿ/ಜನರಲ್ ಮೆಡಿಸಿನ್/ಜನರಲ್ ಸರ್ಜರಿ/ಒ.ಬಿ.ಜಿ/ರೇಡಿಯೋ ಡಯಾಗ್ನಾಸಿಸ್/ಟಿ.ಬಿ ಮತ್ತು ರೆಸ್ಪರೇಟರಿ

ಸಿ.ಎಂ.ಒ-01 ಹುದ್ದೆ
ವಿಭಾಗ: ಸಿ.ಎಂ.ಒ

ಅರ್ಜಿ ಸಲ್ಲಿಕೆ

ನಿಗದಿತ ಅರ್ಜಿ ನಮೂನೆಯನ್ನು ಸಂಸ್ಥೆಯ ಅಂತರ್ಜಾಲ www.kimskodagu.kar.nic.in ಇಲ್ಲಿಂದ ಡೌನ್ಲೋಡ್ ಮಾಡಿಕೊಂಡು ರೂ.500/- ಮೊತ್ತದ ಡಿ.ಡಿಯನ್ನು "ನಿರ್ದೇಶಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ" ಇವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ ಸ್ವಸಹಿ ಮಾಡಿದ ನಕಲು ದಾಖಲಾತಿಗಳೊಂದಿಗೆ ಮುಖ್ಯ ಆಡಳಿತಾಧಿಕಾರಿಗಳು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿರವರ ಕಚೇರಿಗೆ ದಿನಾಂಕ 17-06-2017 ಸಂಜೆ 4.00 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸತಕ್ಕದ್ದು. ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಯಾವ ಹುದ್ದೆಗೆ ಹಾಗೂ ವಿಭಾಗಕ್ಕೆ ಅರ್ಜಿ ಹಾಕಲಾಗಿದೆ ಎಂದು ನಮೂದಿಸಬೇಕು.

ಸೂಚನೆಗಳು

  • ವಯೋಮಿತಿ. ವೃಂದ ಮತ್ತು ನೇಮಕಾತಿ ನಿಯಮದಂತೆ ನಡೆಯಲಿವೆ
  • ಅಭ್ಯರ್ಥಿಗಳು ನೇರ ಸಂದರ್ಶನದ ದಿನಾಂಕ 19-06-2017, 10.00 ಗಂಟೆಯ ಒಳಗೆ ನೋಂದಣಿ ಮಾಡಿಸತಕ್ಕದ್ದು.
  • ಕನಿಷ್ಠ ವಿದ್ಯಾರ್ಹತೆ ಮತ್ತು ಬೋಧನಾ ಅನುಭವ: ಎಂಸಿಐ ನಿಯಮಾವಳಿಗಳಲ್ಲಿ ನಮೂದಿಸಿರುವಂತೆ ಹೊಂದಿರಬೇಕು.
  • ಪ್ರಕಟಿಸಿದ ನಿಯತಕಾಲಿಕೆಗಳ ಮೂಲ ಪ್ರತಿಯನ್ನು ನೇರಸಂದರ್ಶನ ಸಮಯದಲ್ಲಿ ಒದಗಿಸತಕ್ಕದ್ದು.
  • ಸರ್ಕಾರಿ ಸೇವೆಯಲ್ಲಿ/ಸರ್ಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳು ನಿರಾಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಒದಗಿಸುವುದು.
  • ಹುದ್ದೆಗಳ ಸಂಖ್ಯೆಗಳು ನೇಮಕಾತಿ ಸಮಿತಿಯ ನಿರ್ಧಾರದಂತೆ ಬದಲಾಗಬಹುದು
  • ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳಿಗೆ ಅನ್ವಯವಾಗುವ ಮೀಸಲಾತಿ ಅಳವಡಿಸಲಾಗಿದೆ.
  • ಹೆಚ್ಚಿನ ವಿವರಣೆ ಹಾಗೂ ಮಾಹಿತಿಯನ್ನು ಸಂಸ್ಥೆಯ ಅಂತರ್ಜಾಲದಲ್ಲಿ ಪಡೆಯುವುದು.
  • ವಿದ್ಯಾರ್ಹತೆ, ಬೋಧನಾ ಅನುಭವ, ಸಂಶೋಧನಾ ಪ್ರತಿ ಹಾಗೂ ಇತರೆ ಮೂಲ ದಾಖಲಾತಿಗಳನ್ನು ಸಂದರ್ಶನದ ವೇಳೆ ಹಾಜರುಪಡಿಸತಕ್ಕದ್ದು ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರವನ್ನು ಒದಗಿಸುವುದು.

English summary
Notification for Walk Interview on 19-06-2017 for filling up of various vacant Teaching posts Reserved for Hyderabad Karnataka local region under 371(J)in KIMSKODAGU
Please Wait while comments are loading...