ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ., ಕೋಲಾರ ದಲ್ಲಿ ಖಾಲಿ ಇರುವ 179 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಒಂದು ತಿಂಗಳುಗಳ ಕಾಲಾವಕಾಶ ನೀಡಲಾಗಿದೆ.

ಹುದ್ದೆಗಳ ವಿವರ
| ಹುದ್ದೆಯ ಹೆಸರು | ವೇತನ ಶ್ರೇಣಿ | ಹುದ್ದೆ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರು (ಎಎಚ್&ಎಐ) | 28100-50100 | 43 |
| ಸಹಾಯಕ ವ್ಯವಸ್ಥಾಪಕರು (ಕೃಷಿ) | 28100-50100 | 01 |
| ವೈದ್ಯಾಧಿಕಾರಿ | 28100-50100 | 01 |
| ತಾಂತ್ರಿಕ ಅಧಿಕಾರಿ (ಡಿ.ಟಿ) | 22800-43200 | 16 |
| ತಾಂತ್ರಿಕ ಅಧಿಕಾರಿ (ಇಂಜಿ) | 22800-43200 | 06 |
| ಮಾರುಕಟ್ಟೆ ಅಧಿಕಾರಿ | 22800-43200 | 06 |
| ಸಿಸ್ಟಮ್ ಅಧಿಕಾರಿ | 22800-43200 | 01 |
| ಆಡಳಿತಾಧಿಕಾರಿ | 22800-43200 | 01 |
| ಕೆಮಿಸ್ಟ್ ದರ್ಜೆ-2 | 14550-26700 | 10 |
| ಆಡಳಿತ ಸಹಾಯಕ ದರ್ಜೆ-2 | 14550-26700 | 11 |
| ಜೂನಿಯರ್ ಸಿಸ್ಟಮ್ ಅಪರೇಟರ್ | 14550-26700 | 07 |
| ಮಾರುಕಟ್ಟೆ ಸಹಾಯಕರು | 14550-26700 | 09 |
| ಲೆಕ್ಕ ಸಹಾಯಕ ದರ್ಜೆ-2 | 14550-26700 | 05 |
| ಟೆಲಿಫೋನ್ ಆಪರೇಟರ್/ಸ್ವೀಕೃತಿಗಾರರು | 14550-26700 | 01 |
| ಕ್ಯಾಷಿಯರ್ | 14550-26700 | 01 |
| ಜೂನಿಯರ್ ಟೆಕ್ನಿಷಿಯನ್ | 11600-21000 | 12 |
| ಮಾರುಕಟ್ಟೆ ಡಿಸ್ಪ್ಯಾಚರ್ | 11600-21000 | 03 |
| ವಿಸ್ತರಣಾಧಿಕಾರಿ ದರ್ಜೆ-3 | 17650-32000 | 30 |
| ಸೂಪರ್ವೈಸರ್ (ಪ್ರೊಟಕ್ಷನ್) | 17650-32000 | 03 |
| ಡೇರಿ ಸೂಪರ್ವೈಸರ್ ದರ್ಜೆ-2 | 17650-32000 | 03 |
| ಫೀಲ್ಡ್ ಅಸಿಸ್ಟೆಂಟ್ (ಎಫ್ & ಎಫ್) | 9600-14550 | 04 |
| ದ್ರವಸಾರಜನ ವಿತರಣೆಗಾರರು | 9600-14550 | 05 |
| ಒಟ್ಟು | 179 |
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06-09-2017
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-10-2017
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07-10-2017
ಅರ್ಜಿ ಸಲ್ಲಿಕೆ
- ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
- ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸತಕ್ಕದ್ದು.
ಅರ್ಜಿಗಳ ಸಂಪೂರ್ಣ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
- ಪ.ಜಾ/ಪ.ಪಂ/ಪ್ರ-೧ ಅಭ್ಯರ್ಥಿಗಳಿಗೆ ರೂ.250/-
ವಯೋಮಿತಿ
ಕನಿಷ್ಠ 18 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35, ಒಬಿಸಿ ಅಭ್ಯರ್ಥಿಗಳಿಗೆ 38 ಮತ್ತು ಪ.ಜಾ/ಪ.ಪಂ/ಪ್ರ-೧ ಅಭ್ಯರ್ಥಿಗಳಿಗೆ ೪೦ ವರ್ಷ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಆಧಾರದ ಮೇಲೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
Kolar-chikkaballapura district co-operative milk producers union ltd., (komul) invites online applications to fill 179 various posts.
Story first published: Wednesday, September 6, 2017, 11:30 [IST]


Click it and Unblock the Notifications











