ಕೊಂಕಣ ರೈಲ್ವೆ 34 ಸೀನಿಯರ್ ಇಂಜಿನಿಯರ್ ನೇಮಕಾತಿ

Posted By:

ಸೀನಿಯರ್ ಇಂಜಿನಿಯರ್ ಹುದ್ದೆಗಾಗಿ ಕೊಂಕಣ ರೈಲ್ವೆ ಅರ್ಜಿಗಳನ್ನು ಆಹ್ವಾನಿಸಿದೆ. ರೈಲ್ವೆ ಯೋಜನೆಗಾಗಿ ಭೂಮಿ ಕಳೆದುಕೊಂಡವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಟ್ಟು 34 ಸೀನಿಯರ್ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಮೇ 21 ರ ಒಳಗಾಗಿ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ

ರೈಲ್ವೆ ಯೋಜನೆಗಾಗಿ ಭೂಮಿ ಕಳೆದುಕೊಂಡವರು, ಭೂಮಿ ಕಳೆದುಕೊಂಡವರ ಮಕ್ಕಳು, ಅವಿವಾಹಿತ ಪುತ್ರಿಯರು, ಮೊಮ್ಮಕ್ಕಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದು, ಗೋವಾ, ಕಾರವಾರ, ಉಡುಪಿ, ದಕ್ಷಿಣ ಕನ್ನಡ ಕೊಂಕಣ ರೈಲ್ವೆ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಸೀನಿಯರ್ ಇಂಜಿನಿಯರ್ ನೇಮಕಾತಿ

ಹುದ್ದೆಗಳ ವಿವರ

1. ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್): 20 ಹುದ್ದೆಗಳು
    ವೇತನ ಶ್ರೇಣಿ: ರೂ.9300-34800+4600/-

2. ಸೀನಿಯರ್ ಇಂಜಿನಿಯರ್ (ಮೆಕಾನಿಕಲ್): 2 ಹುದ್ದೆಗಳು
    ವೇತನ ಶ್ರೇಣಿ: ರೂ.9300-34800+4600/-

3. ಸೀನಿಯರ್ ಇಂಜಿನಿಯರ್ (ಎಸ್ ಅಂಡ್ ಟಿ): 05 ಹುದ್ದೆಗಳು
    ವೇತನ ಶ್ರೇಣಿ: ರೂ.9300-34800+4600/-

4. ಸೀನಿಯರ್ ಇಂಜಿನಿಯರ್ (ಸಿವಿಲ್): 07 ಹುದ್ದೆಗಳು
    ವೇತನ ಶ್ರೇಣಿ: ರೂ.9300 -34800 +4600/-

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಇಂಜಿನಿಯರಿಂಗ್ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವಂತಿಲ್ಲ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ 35 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಅರ್ಜಿಯನ್ನು ಕೊಂಕಂಣ ರೈಲ್ವೆ ವೆಬ್‌ಸೈಟ್‌ ನಲ್ಲಿ ಆನ್-ಲೈನ್ ಮೂಲಕ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಗೆ ಇತ್ತೀಚಿನ ಎರಡು ಭಾವಚಿತ್ರ ಮತ್ತು ನಿಗದಿತ ಶುಲ್ಕದ ಡಿಡಿಯನ್ನು ಲಗತ್ತಿಸಿ ಕಳುಹಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಭರ್ತಿ ಮಾಡಲು ಕೊನೆಯ ದಿನಾಂಕ: 21-05-2017
ಅರ್ಜಿ ತಲುಪಿಸಲು ಕೊನೆಯ ದಿನಾಂಕ: 22-05-2017

ಪ್ರಿಂಟ್ ಅರ್ಜಿಯನ್ನು ತಲುಪಿಸಬೇಕಾದ ವಿಳಾಸ

Asstt. Chief Personnel Officer (Recruitment),
Konkan Railway Corporation Ltd,
Belapur Bhavan, Sec-11,
CBD Belapur, Navi Mumbai-400614

ಈ ವಿಳಾಸಕ್ಕೆ ದಿನಾಂಕ 22/05/2017 ರೊಳಗೆ ಸಲ್ಲಿಸಬೇಕು. ಅಂಚೆಯಲ್ಲಿ ಅರ್ಜಿ ತಲುಪುವುದು ತಡವಾದಲ್ಲಿ ಅದನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ konkanrailway.com ಗಮನಿಸಿ

English summary
An employment notification has been released by the Konkan Railway Corporation Limited calling out for applications from eligible land loser candidates whose land has been acquired for Konkan Railway Project.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia