ಕೆಪಿಸಿಎಲ್: ಡ್ರೈವರ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

ಆಪರೇಟಿವ್ ಡ್ರೈವರ್ಸ್ ಮತ್ತು ಅಸಿಸ್ಟೆಂಟ್ ಆಪರೇಟಿವ್ ಡ್ರೈವರ್ಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು ಒಟ್ಟು 108 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಪರೇಟಿವ್ ಡ್ರೈವರ್ಸ್ ಮತ್ತು ಅಸಿಸ್ಟೆಂಟ್ ಆಪರೇಟಿವ್ ಡ್ರೈವರ್ಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು ಒಟ್ಟು 108 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಕೆಪಿಸಿಎಲ್ ನೇಮಕಾತಿ

ಹುದ್ದೆಗಳ ವಿವರ

ಆಪರೇಟಿವ್ ಡ್ರೈವರ್ಸ್-98 ಹುದ್ದೆಗಳು (ಹೈ-ಕ-28, ಉಳಿಕೆ-70)

ವೇತನ ಶ್ರೇಣಿ: ರೂ.9540-27455/-

ವಿದ್ಯಾರ್ಹತೆ

ಎಸ್ ಎಸ್ ಎಲ್ ಸಿ/ಸಮಾನಾಂತರ (ರೆಗ್ಯುಲರ್ ಕೋರ್ಸ್) ಮತ್ತು ಭಾರಿ ವಾಹನ ಚಾಲನಾ ಪರವಾನಗಿ (ಹೆಚ್ಎಂವಿ)ಮತ್ತು ಸಾರ್ವಜನಿಕ/ಖಾಸಗಿ ಕಂಪನಿ/ಸಂಸ್ಥೆಗಳಲ್ಲಿ ಭಾರಿ ವಾಹನ ಚಾಲನೆ (ಹೆಚ್ಎಂವಿ)ಯಲ್ಲಿ ಎರಡು ವರ್ಷಗಳ ಅನುಭವ.

ಅಸಿಸ್ಟೆಂಟ್ ಆಪರೇಟಿವ್ ಡ್ರೈವರ್ಸ್-10 ಹುದ್ದೆಗಳು (ಹೈ-ಕ-1, ಉಳಿಕೆ-9)

ವೇತನ ಶ್ರೇಣಿ:ರೂ.8390-22845/-

ವಿದ್ಯಾರ್ಹತೆ

ಎಸ್ ಎಸ್ ಎಲ್ ಸಿ/ಸಮಾನಾಂತರ (ರೆಗ್ಯುಲರ್ ಕೋರ್ಸ್) ಮತ್ತು ಲಘು ವಾಹನ ಚಾಲನಾ ಪರವಾನಗಿ (ಎಲ್ಎಂವಿ)ಮತ್ತು ಸಾರ್ವಜನಿಕ/ಖಾಸಗಿ ಕಂಪನಿ/ಸಂಸ್ಥೆಗಳಲ್ಲಿ ಲಘು ವಾಹನ ಚಾಲನೆ (ಎಲ್ಎಂವಿ)ಯಲ್ಲಿ ಎರಡು ವರ್ಷಗಳ ಅನುಭವ.

ಟಿಪ್ಪಣಿ

ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾನಿಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್ ಎಸ್ ಎಲ್ ಸಿ/೧೦ ನೇ ತರಗತಿ (ಬ್ರಿಡ್ಜ್ ಕೋರ್ಸ್)ಗಳು ಅರ್ಹವಲ್ಲ.

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ ಕೆಳಗಿನಂತೆ ವರ್ಗಾವಾರು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಸಾಮಾನ್ಯ ವರ್ಗ :35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ :38 ವರ್ಷಗಳು ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷಗಳು, ಮಾಜಿ ಸೈನಿಕ 45 ವರ್ಷಗಳು.

ರಾಜ್ಯ ನ್ಯಾಯಮಂಡಳಿ ಕಛೇರಿಯಲ್ಲಿ ಬೆರಳಚ್ಚುಗಾರರ ನೇಮಕಾತಿರಾಜ್ಯ ನ್ಯಾಯಮಂಡಳಿ ಕಛೇರಿಯಲ್ಲಿ ಬೆರಳಚ್ಚುಗಾರರ ನೇಮಕಾತಿ

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಕೆಪಿಸಿಎಲ್ ವೆಬ್ಸೈಟ್ ನಲ್ಲಿ ಆನ್-ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.500/- +15 ಪೋಸ್ಟಲ್ ಸರ್ವಿಸ್ ಚಾರ್ಜಸ್
  • ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.400/- +15 ಪೋಸ್ಟಲ್ ಸರ್ವಿಸ್ ಚಾರ್ಜಸ್
  • ಮಾಜಿ ಸೈನಿಕರಿಗೆ ರೂ.50/-

ಶುಲ್ಕವನ್ನು ಕಂಪ್ಯೂಟರೈಸ್ಡ್ ಪೋಸ್ಟ್ ಆಫೀಸ್ ಮೂಲಕ ಪಾವತಿಸುವುದು.

ಆಯ್ಕೆ ವಿಧಾನ

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು

ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-09-2017
ಅರ್ಜಿ ಸಲ್ಲಿಸಲು, ಚಲನ್ ಮತ್ತು ಅಕ್ನಾಲೆಡ್ಜ್ಮೆಂಟ್ ಪ್ರಿಂಟ್ ಪಡೆಯಲು ಕಡೆಯ ದಿನಾಂಕ: 21-10-2017
ಅಂಚೆ ಕಚೇರಿ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24-10-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KPCL invites applications for the operative driver and assistant operative driver posts for its Power Projects/Stations
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X