ಕೆಪಿಎಸ್ಸಿ ಗ್ರೂಪ್ 'ಸಿ' 135 ಹುದ್ದೆ ಸೇರ್ಪಡೆ

Posted By:

ಕರ್ನಾಟಕ ಲೋಕ ಸೇವಾ ಆಯೋಗ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2006 ಹಾಗೂ ತಿದ್ದುಪಡಿನಿಯಮಗಳು 2015 ರನ್ವಯ ನೇಮಕಾತಿ ಮಾಡಲು ಅಧಿಸೂಚಿಸಲಾಗಿದ್ದು, ಸದರಿ ಅಧಿಸೂಚನೆಯ ಹುದ್ದೆಗಳೊಂದಿಗೆ ಈ ಕೆಳಕಂಡ ಹುದ್ದೆಗಳನ್ನು ಸೇರ್ಪಡೆ ಮಾಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 135 ಹುದ್ದೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಅಭ್ಯರ್ಥಿಗಳು ಏಪ್ರಿಲ್ 27 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೆಪಿಎಸ್ಸಿ ಗ್ರೂಪ್ ಸಿ ಹುದ್ದೆ

ಹುದ್ದೆಯ ವಿವರ

 1. ಹುದ್ದೆಯ ಹೆಸರು: ವಾರ್ಡನ್ (ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವಿದ್ಯಾರ್ಥಿನಿಲಯ) ಒಟ್ಟು ಹುದ್ದೆ:117
 2. ಹುದ್ದೆಯ ಹೆಸರು: ದೈಹಿಕ ಶಿಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦6
 3. ಹುದ್ದೆಯ ಹೆಸರು: ಕಲಾ ಶಿಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦4
 4. ಹುದ್ದೆಯ ಹೆಸರು: ಕಛೇರಿ ಅಧೀಕ್ಷಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦2
 5. ಹುದ್ದೆಯ ಹೆಸರು: ಪ್ರಥಮ ದರ್ಜೆ ಗಣಕ ಯಂತ್ರ ಸಹಾಯಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦2
 6. ಹುದ್ದೆಯ ಹೆಸರು: ಉಗ್ರಾಣ ನಿಯಂತ್ರಕರು/ವಾರ್ಡನ್ (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦2
 7. ಹುದ್ದೆಯ ಹೆಸರು: ಕ್ಯಾಟರಿಂಗ್ ಸೂಪರ್ವೈಸರ್/ನಿಲಯಪಾಲಕರು (ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ, ನವೋದಯ) ಒಟ್ಟು ಹುದ್ದೆ: ೦2

ಇದನ್ನು ಗಮನಿಸಿ: ಕೆಪಿಎಸ್‌ಸಿ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಹಾಗೂ ಪದವಿ ಸೇರಿದಂತೆ ಹುದ್ದೆಗಳ ಅನುಸಾರ ವಿದ್ಯಾರ್ಹತೆ ನಿಗದಿಯಾಗಿದೆ.

ವಯೋಮಿತಿ

ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆಯಿದೆ.

ಪರೀಕ್ಷಾ ವಿಧಾನ

ಪರೀಕ್ಷೆಯು ಸಾಮಾನ್ಯ ಜ್ಞಾನ ಮತ್ತು ಸಂವಹನ ವಿಷಯಗಳ ಎರಡು ಪತ್ರಿಕೆಗಳನ್ನು ಹೊಂದಿದ್ದು 200 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಮುಂದಿನ ಹಂತದ ಪ್ರಕ್ರಿಯೆ ನಡೆಸಲಾಗುತ್ತದೆ.

ಅರ್ಜಿ ಶುಲ್ಕ

 • ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹300
 • ಒಬಿಸಿ ಅಭ್ಯರ್ಥಿಗಳು ₹150
 • ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 -04 -2017
 • ಶುಲ್ಕ ಪಾವತಿಸಲು ಕೊನೆಯ ದಿನಾಂಕ:28 -04 -2017
 • ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಪೂರ್ವಿಕ ದಿನಾಂಕ: 04-06-2017, 10-06-2017 ಮತ್ತು 11-06-2017 ರಂದು ನಡೆಸಲು ಉದ್ದೇಶಿಸಲಾಗಿದೆ.
 • ಶುಲ್ಕವನ್ನು ಯಾವುದೇ ಇ-ಪಾವತಿ ಅಂಚೆ ಕಚೇರಿಯಲ್ಲಿ ಪಾವತಿಸಬೇಕು.

ಪರೀಕ್ಷಾ ವೇಳಾಪಟ್ಟಿಯನ್ನು ಆಯೋಗದ ಅಂತರ್ಜಾಲ kpsc.kar.nic.in ದಲ್ಲಿ ಮುಂದೆ ಪ್ರಕಟಿಸಲಾಗುವುದು.

English summary
KPSC 135 ADDENDUM NOTIFICATION FOR GROUP C NON TECHNICAL POSTS IN VARIOUS DEPARTMENTS

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia