ಕೆ ಪಿ ಎಸ್ ಸಿ: ಜಲಸಂಪನ್ಮೂಲ ಇಲಾಖೆಯಲ್ಲಿ 889 ಇಂಜಿನಿಯರ್ ಗಳ ನೇಮಕಾತಿ

ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 889 ಸಹಾಯಕ ಇಂಜಿನಿಯರ್ ಮತ್ತು ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗುರುವಾರ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 889 ಸಹಾಯಕ ಇಂಜಿನಿಯರ್ ಮತ್ತು ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗುರುವಾರ ಅಧಿಸೂಚನೆ ಹೊರಡಿಸಿದೆ.

500 ಅಸಿಸ್ಟೆಂಟ್ ಇಂಜಿನಿಯರ್ ಮತ್ತು 289 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 2017, ಜುಲೈ 22 ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಅರ್ಹತೆ ರೋಸ್ಟರ್ ಪರಿಗಣಿಸಿ ಕೆಪಿಎಸ್ಸಿ ನೇರ ನೇಮಕಾತಿ ನಡೆಸಲಿದೆ.

ಕೆ ಪಿ ಎಸ್ ಸಿ: 889 ಇಂಜಿನಿಯರ್ ಗಳ ನೇಮಕಾತಿ

ಹತ್ತು ವರ್ಷಗಳ ನಂತರ ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ. ಕಥಗೆತ್ತುಕೊಂಡಿಉರವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಹುದ್ದೆಗಳ ವಿವರ

ಒಟ್ಟು 500 ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿದ್ದು ಇವುಗಳಲ್ಲಿ 429 ಸಿವಿಲ್ ಇಂಜಿನಿಯರ್, 71 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಾಗಿವೆ. ಸ್ಥಳೀಯ ವೃಂಧದಲ್ಲಿ (ಹೈದರಾಬಾದ್-ಕರ್ನಾಟಕ) 100 ಹುದ್ದೆಗಳಿದ್ದು 98 ಸಿವಿಲ್ ಇಂಜಿನಿಯರ್ ಮತ್ತು 2 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆ ಸೇರಿವೆ.

ಜೂನಿಯರ್ ಇಂಜಿನಿಯರ್ ವಿಭಾಗದಲ್ಲಿ ಒಟ್ಟು 289 ಹುದ್ದೆಗಳಿವೆ. ಅವುಗಳಲ್ಲಿ 200 ಸಿವಿಲ್ ಇಂಜಿನಿಯರ್ ಮತ್ತು 159 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆ ಸೇರಿವೆ. ಇವುಗಳಲ್ಲೇ 87 ಸಿವಿಲ್ ಮತ್ತು 2 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಿವೆ.

ವೇತನ ವೇತನ ಶ್ರೇಣಿ

ಅಸಿಸ್ಟೆಂಟ್ ಇಂಜಿನಿಯರ್ -ರೂ.22800-43200/-

ಜೂನಿಯರ್ ಇಂಜಿನಿಯರ್-ರೂ.16000-29600/-

ವಿದ್ಯಾರ್ಹತೆ

  • ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಗಳಿಸಿರಬೇಕು. ಅಥವಾ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್/ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿರಬೇಕು.
  • ಜೂನಿಯರ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್/ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿರಬೇಕು.

ಆಯ್ಕೆ ವಿಧಾನ

ಪರೀಕ್ಷಾ ವಿಧಾನ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಮೊದಲ ಪತ್ರಿಕೆಯು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಾಮಾನಗಳ ಕುರಿತಾಗಿ ಇರುತ್ತದೆ. ಎರಡನೇ ಪತ್ರಿಕೆಯು ವಿಷಯಾಧರಿತ ಪತ್ರಿಕೆಯಾಗಿರುತ್ತದೆ

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/-
  • ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ ರೂ.150/-
  • ಎಸ್ಸಿ, ಎಸ್ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತಉ ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳಿಗೆ 35, ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 38, ಮತ್ತು ಎಸ್ಸಿ, ಎಸ್ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತಉ ಅಂಗವಿಕಲ ಅಭ್ಯರ್ಥಿಗಳಿಗೆ 40 ವರ್ಷ ನಿಗದಿ ಮಾಡಲಾಗಿದೆ

ಹೆಚ್ಚಿನ ಮಾಹಿತಿಗಾಗಿ www.kpsc.kar.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Karnataka Public Service Commission invite application for total 889 assistant engineer and junior engineer posts in Karnataka Water Resources Department. Job seekers should apply before 22 July 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X