ಕೆಪಿಎಸ್‌ಸಿ 3376 ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿ

Posted By:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಗ್ರೂಪ್ ಬಿ ಹಾಗೂ ಸಿ ವೃಂದದ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 3376 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ಮೂಲಕ ಜುಲೈ 24 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-07-2017 (ರಾತ್ರಿ 11:45 ಘಂಟೆಯೊಳಗೆ)
 • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 25-07-2017 (ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ)

ಹುದ್ದೆಗಳ ವಿವರ

ಹುದ್ದೆಯ ಹೆಸರುಉಳಿದ ಮೂಲ ವೃಂದದ ಹುದ್ದೆಗಳುಹೈ-ಕ ಹುದ್ದೆಗಳುಒಟ್ಟು ಹುದ್ದೆಗಳು
ಗ್ರೂಪ್ ಬಿ ಹುದ್ದೆಗಳು   
ಪ್ರಾಂಶುಪಾಲರು23871309
ಗ್ರೂಪ್ ಸಿ ಹುದ್ದೆಗಳು   
ಕನ್ನಡ ಭಾಷಾ ಶಿಕ್ಷಕರು22132253
ಆಂಗ್ಲ ಭಾಷಾ ಶಿಕ್ಷಕರು19692288
ಹಿಂದಿ ಭಾಷಾ ಶಿಕ್ಷಕರು16328191
ಗಣಿತ ಶಿಕ್ಷಕರು10065165
ವಿಜ್ಞಾನ ಶಿಕ್ಷಕರು19180271
ಸಮಾಜ ವಿಜ್ಞಾನ ಶಿಕ್ಷಕರು15485239
ದೈಹಿಕ ಶಿಕ್ಷಣ ಶಿಕ್ಷಕರು14544189
ಗಣಕಯಂತ್ರ ಶಿಕ್ಷಕರು19729226
ಪ್ರ.ದ.ಸ. ಕಂ ಕಂಪ್ಯೂಟರ್ ಆಪರೇಟರ್37590465
ನಿಲಯ ಪಾಲಕರು407110517
ಶುಶ್ರೂಷಕರು (ಸ್ಟಾಫ್ ನರ್ಸ್)17984263
ಒಟ್ಟು3376

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಯೋಗದ ವೆಬ್ಸೂಟ್ ನ ಹೋಂ ಪೇಜ್ ನಲ್ಲಿ APPLY ONLINE ಲಿಂಕ್ ನಲ್ಲಿ APPLICATION FOR GROUP B & C POSTS IN KREIS ಅನ್ನು ಗಮನಿಸುವುದು.

ಅರ್ಜಿಯನ್ನು ಭರ್ತಿ ಮಾಡುವ ಮೊದಲು ಹಾಗೂ ಶುಲ್ಕ ಪಾವತಿಸುವ ಬಗ್ಗೆ NOTIFICATION ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಓದಿಕೊಳ್ಳತಕ್ಕದ್ದು.

ಶುಲ್ಕ

 • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 300/-
 • ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಅಭ್ಯರ್ಥಿಗಳಿಗೆ ರೂ.150/-
 • ಪ.ಜಾ/ಪ.ಪಂ/ಪ್ರ-1/ಅಂಗವಿಕಲ/ಮಾ.ಸೈಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಆಯ್ಕೆ ವಿಧಾನ

ಸದರಿ ಹುದ್ದೆಗಳ ನೇಮಕಾತಿಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್-ಒಎಂಆರ್ ಮಾದರಿ (Offline-OMR type) ಅಥವಾ ಗಣಕ ಯಂತ್ರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ (Computer based recruitment test-CBRT) ಮುಖಾಂತರ ನಡೆಸಲಾಗುವುದು.

  ಹೆಚ್ಚಿನ ವಿವರಗಳಿಗಾಗಿ ಆಯೋಗದ www.kpsc.kar.nic.in ವೆಬ್ಸೈಟ್ ನಲ್ಲಿರುವ ಅಧಿಸೂಚನೆ ಗಮನಿಸಬಹುದಾಗಿದೆ.

  English summary
  KPSC INVITES ONLINE APPLICATIONS TO FILL VARIOUS GROUP B AND C POSTS IN KARNATAKA RESIDENTIAL EDUCATION INSTUTIONS SOCIETY.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia