ಕರ್ನಾಟಕ ಲೋಕ ಸೇವಾ ಆಯೋಗ 16 ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ವೃಂದದ ಗ್ರೂಪ್ A & B ವೃಂದದ ಖಾಲಿ ಇರುವ 16 ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತರು ಆನ್‌ಲೈನ್ ನಲ್ಲಿ ಅಧಿಸೂಚನೆಯನ್ನು ಓದಿ ನಂತರ ಏಪ್ರಿಲ್ 22,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ 16  ಹುದ್ದೆಗಳು ಖಾಲಿ ಇವೆ

 

CRITERIA DETAILS
Name Of The Posts ಡೆವಲಪ್ಮೆಂಟ್ ಆಫೀಸರ್, ಸಿವಿಲ್ ಇಂಜಿನಿಯರ್,
Organisation ಕರ್ನಾಟಕ ಲೋಕ ಸೇವಾ ಆಯೋಗ
Educational Qualification ಗ್ರಾಜುಯೇಟ್, ಬಿ.ಇ / ಬಿ.ಟೆಕ್ ,ಎಂಬಿಬಿಎಸ್ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ
Job Location ಕರ್ನಾಟಕ
Salary Scale ಕರ್ನಾಟಕ ಮಹಷರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್-ಎ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಶಸ್ತ್ರ ಚಿಕಿತ್ಸಕರು,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)- 52,650/- ರಿಂದ 97,100/-ರೂ,ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ- 43,100/-ರಿಂದ 83,900/- ರೂ
Application Start Date March 20, 2019
Application End Date April 22, 2019

ಶೈಕ್ಷಣಿಕ ವಿದ್ಯಾರ್ಹತೆ:

ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂಚೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

ಹುದ್ದೆಗಳ ಹೆಸರು ಹುದ್ದೆಗಳಿಗನುಸಾರ ಕೇಳಲಾಗಿರುವ ವಿದ್ಯಾರ್ಹತೆ
ಕರ್ನಾಟಕ ಮಹಷರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್-ಎಅಂಗೀಕೃತ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಪದವಿ ಮತ್ತು ಎಂಬಿಎ ಯಲ್ಲಿ ಫಿನಾನ್ಸ್ ಅಥವಾ ಮಾರ್ಕೆಟಿಂಗ್ ಅಥವಾ ಹ್ಯೂಮನ್ ರಿಸೋರ್ಸ್ ಸ್ಟೆಷಲೈಸೇಷನ್ ಆಗಿ ತೆಗೆದುಕೊಂಡಿರಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಶಸ್ತ್ರ ಚಿಕಿತ್ಸಕರುಮೆಡಿಸಿನ್ ನಲ್ಲಿ ಪದವಿ (ಎಂಬಿಬಿಎಸ್ ಪದವಿಯನ್ನು ಎಂಸಿಐ ನಿಂದ ಮಾನ್ಯತೆ ಪಡೆದಲ್ಲಿ ಪಡೆದಿರಬೇಕು)
ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿಅಂಗೀಕೃತ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಪದವಿ ಮತ್ತು ಎಂಬಿಎ ಯಲ್ಲಿ ಫಿನಾನ್ಸ್ ಅಥವಾ ಮಾರ್ಕೆಟಿಂಗ್ ಅಥವಾ ಹ್ಯೂಮನ್ ರಿಸೋರ್ಸ್ ಸ್ಟೆಷಲೈಸೇಷನ್ ಆಗಿ ತೆಗೆದುಕೊಂಡಿರಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ

 

ಖಾಲಿ ಹುದ್ದೆಗಳು:

ಗ್ರೂಪ್ "ಎ" ಹುದ್ದೆಗಳು

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಕರ್ನಾಟಕ ಮಹಷರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್-ಎ2
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಶಸ್ತ್ರ ಚಿಕಿತ್ಸಕರು1

ಗ್ರೂಪ್ "ಬಿ" ಹುದ್ದೆಗಳು

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ8
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)5
ಒಟ್ಟು16

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 35 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರವರ್ಗ-2A , 2B ,3A ,3B ಅಭ್ಯರ್ಥಿಗಳು 38 ವರ್ಷಗಳು, ಪ.ಜಾ, ಪ.ಪಂ, ಪ್ರವರ್ಗ-1ರ ಅಭ್ಯರ್ಥಿಗಳು 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಹುದ್ದೆಗಳ ಹೆಸರುವೇತನದ ವಿವರ
ಕರ್ನಾಟಕ ಮಹಷರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್-ಎ52,650/- ರಿಂದ 97,100/-ರೂ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಶಸ್ತ್ರ ಚಿಕಿತ್ಸಕರು52,650/- ರಿಂದ 97,100/-ರೂ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ43,100/-ರಿಂದ 83,900/- ರೂ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)52,650/- ರಿಂದ 97,100/-ರೂ

ನೇಮಕಾತಿ ವಿಧಾನ:

ಅಭ್ಯರ್ಥಿಗಳನ್ನು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ600/-ರೂ
ಪ್ರವರ್ಗ- 2A, 2B, 3A, 3B ಸೇರಿದ ಅಭ್ಯರ್ಥಿಗಳಿಗೆ300/-ರೂ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ50/-ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆಶುಲ್ಕದಿಂದ ವಿನಾಯಿತಿ ನೀಡಲಾಗಿದೆ

ಸೂಚನೆ: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಒಂದೇ ಶುಲ್ಕವನ್ನು ಪಾವತಿಸತಕ್ಕದ್ದು. ಅರ್ಜಿ ಶುಲ್ಕವನ್ನು ಏಪ್ರಿಲ್ 23, 2019 ರೊಳಗೆ ಪಾವತಿಸಬೇಕು.

ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ / ವಯೋಮಿತಿ / ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ಯಾವುದೇ ನಾಗರೀಕ ಸೇವಾ ಕೇಂದ್ರಗಳಲ್ಲಿ ಅಥವಾ ನೆಟ್‌ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡತಕ್ಕದ್ದು, ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ / ಸಹಿಯನ್ನು ಅಪ್ಲೋಡ್ ಮಾಡದೇ ಇರುವ / ಅಸ್ಟಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ತಿರಸ್ಕರಿಸಲಾಗುವುದು. ಶುಲ್ಕವನ್ನು ನಾಗರೀಕ ಸೇವಾ ಕೇಂದ್ರಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿರುವುದರಿಂದ ಅರ್ಜಿಗಳನ್ನು ಇಲ್ಲಿಯೂ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ:

* ಹೊಸದಾಗಿ ಅಪ್ಲಿಕೇಶನ್ ಲಿಂಕ್ ರಲ್ಲಿ ಲಾಗಿನ್ ಆಗಲು User Name ಮತ್ತು Password ಅನ್ನು ಸೃಷ್ಟಿಸಬೇಕು.

* ಅಪ್ಲಿಕೇಶನ್ ಲಿಂಕ್ ರಲ್ಲಿ ಲಾಗಿನ್ ಆದ ನಂತರ ನಿಮ್ಮ ಪೂರ್ಣ ಪ್ರೊಫೈಲ್ ಅನ್ನು ಭರ್ತಿ ಮಾಡಿ.

* ಅಪ್ಲೋಡ್ ಮಾಡಬೇಕಾದ ಭಾವಚಿತ್ರ ಮತ್ತು ಸಹಿ ಸ್ಕ್ಯಾನ್ ಪ್ರತಿಗಳನ್ನು jpg ನಮೂನೆಯಲ್ಲಿ ಸಿದ್ದವಾಗರಿಬೇಕು ಹಾಗೂ 50kb ಗಿಂತ ಹೆಚ್ಚಾಗಿರಬಾರದು.

* ಅಧಿಸೂಚನೆ ಎದುರು ಇರುವ Click here to apply ಲಿಂಕ್ ಮೇಲೆ ಕ್ಲಿಕ್ ಮಾಡಿ

* ನಿಮ್ಮ Profile ರಲ್ಲಿ ಲಭ್ಯವಿರುವ ಮಾಹಿತಿಯು ನಿಮ್ಮ ಅರ್ಜಿ ನಮೂನೆಯಲ್ಲಿ ಪ್ರಕಟವಾಗುತ್ತದೆ. ಅರ್ಜಿಯಲ್ಲಿ ಬಾಕಿ ಉಳಿದಿರುವ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

*ಅರ್ಜಿ ಸಲ್ಲಿಸಿದ ನಂತರ My application link ರಲ್ಲಿ ನೀವು ಅರ್ಜಿ ಸಲ್ಲಿಸಿರುವ ಅಧಿಸೂಚನೆಯನ್ನು ಆಯ್ಕೆ ಮಾಡಿದಲ್ಲಿ ಕೆಳಗೆ ನಿಮ್ಮ ಅರ್ಜಿಯು ಪ್ರಕಟವಾಗುತ್ತದೆ.

*ಅರ್ಜಿ ಪಕ್ಕದಲ್ಲಿ pay now ಲಿಂಕ್ ಅನ್ನು ಒತ್ತಿದಲ್ಲಿ Online pyment ಆಯ್ಕೆಗಳು ಮೂಡುತ್ತವೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಒಂದು ಪ್ರತಿಯನ್ನು ನಿಮ್ಮ ಬಳಿ ಇರಿಸಿಕೊಳ್ಳತಕ್ಕದ್ದು.

ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KPSC Group A & B Technical Posts forHyderabad Karnataka Divisionaka Karnataka Public Service Commission Invites Online Applications for the Recruitment of 16 Development Officer, Civil Engineer posts at Karnataka location, Aspirants who want to apply for Karnataka Public Service Commission Vacancy 2019 Development Officer, Civil Engineer Jobs must qualify Graduate, B.E/ B.Tech, MBBS or equivalent to this qualification from any recognized university/Board. Other eligibility and how to apply details are mentioned below. Official Website is http://www.kpsc.kar.nic.in
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more