ಕರ್ನಾಟಕ ಲೋಕ ಸೇವಾ ಆಯೋಗ 306 ಗ್ರೂಪ್ ಸಿ ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ನಲ್ಲಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 22,2019 ರೊಳಗೆ ಸಲ್ಲಿಸಬಹುದು.

| CRITERIA | DETAILS |
| Name Of The Posts | ಗ್ರೂಪ್ ಸಿ ಟೆಕ್ನಿಕಲ್ ಹುದ್ದೆಗಳು |
| Organisation | ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) |
| Educational Qualification | ಎಸ್‌ಎಸ್‌ಎಲ್‌ಸಿ,ಪಿಯುಸಿ, ಡಿಪ್ಲೋಮಾ, ಪದವಿ,ಬಿ.ಫಾರ್ಮ್ ಮತ್ತು ಸ್ನಾತಕೋತ್ತರ ಪದವಿ |
| Job Location | ಕರ್ನಾಟಕ |
| Salary Scale | ಹುದ್ದೆಗಳಿಗನುಸಾರ 16,000/- ರಿಂದ 70,850/-ರೂ |
| Application Start Date | March 20, 2019 |
| Application End Date | April 22, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ,ಪಿಯುಸಿ, ಡಿಪ್ಲೋಮಾ, ಪದವಿ,ಬಿ.ಫಾರ್ಮ್ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಜ್ಯೂನಿಯರ್ ಇಂಜಿನಿಯರ್ (ಸಿವಿಲ್) | 19 |
| ಲ್ಯಾಬ್ ಟೆಕ್ನೀಶಿಯನ್ | 18 |
| ಸ್ಟಾಫ್ ನರ್ಸ್ | 131 |
| ಲ್ಯಾಬೋರೇಟರಿ ಸೂಪರ್‌ವೈಸರ್ | 6 |
| ಲ್ಯಾಬೋರೇಟರಿ ಟೆಕ್ನೀಶಿಯನ್ಸ್ (ಮೆಡಿಸಿನ್) | 9 |
| ಲ್ಯಾಬೋರೇಟರಿ ಟೆಕ್ನೀಶಿಯನ್ಸ್ | 5 |
| ಅಸಿಸ್ಟೆಂಟ್ ಕ್ಯುರೇಟರ್ | 5 |
| ಫಾರ್ಮಾಸಿಸ್ಟ್ | 72 |
| ಲೈಬ್ರರಿಯನ್ | 13 |
| ಅಸಿಸ್ಟೆಂಟ್ ಲೈಬ್ರರಿಯನ್ | 13 |
| ಎಪಿಗ್ರಾಫಿಸ್ಟ್ | 1 |
| ಆರ್ಕಿಯಾಲಜಿಕಲ್ ಅಸಿಸ್ಟೆಂಟ್ಸ್ | 1 |
| ಸರ್ವೇಯರ್ | 1 |
| ಟೆಕ್ಸ್‌ಟೈಲ್ ಇನ್‌ಸ್ಟೆಕ್ಟರ್ | 12 |
| ಒಟ್ಟು | 306 |
ವಯೋಮಿತಿ:
ಈ ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
2A,2B,3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ 5ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ವೇತನದ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ 16,000/- ರಿಂದ 70,850/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 600/- ರೂ, 2A,2B,3A ಮತ್ತು 3B ಅಭ್ಯರ್ಥಿಗಳು 300/-ರೂ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 50/-ರೂ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ. ಅರ್ಜಿ ಶುಲ್ಕವನ್ನು ಏಪ್ರಿಲ್ 23,2019 ರೊಳಗೆ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ http://www.kpsc.kar.nic.in/ ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 22,2019 ರೊಳಗೆ ಸಲ್ಲಿಸಬಹುದು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











