ಕೆಪಿಎಸ್‌ಸಿ : ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿ

Posted By:

ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗವು ನೂತನ ಅಧಿಸೂಚನೆ ಹೊರಡಿಸಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಎ (ತಾಂತ್ರಿಕ) 63 ಹುದ್ದೆ , ಗ್ರೂಪ್ ಬಿ (ತಾಂತ್ರಿಕ-ತಾಂತ್ರಿಕೇತರ) 842 ಹುದ್ದೆ ಹಾಗು ಗ್ರೂಪ್ ಸಿ -298 ಹುದ್ದೆಗಳು ಸೇರಿ ಒಟ್ಟು 1,203 ಸ್ಥಾನಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ 2016 ರ ಡಿಸೆಂಬರ್ 17 ರಂದು ಅರ್ಜಿಗಳನ್ನು ಆಹ್ವಾನಿಸಿತ್ತು. ಜನವರಿ 21 ರಂದು 265 ಹುದ್ದೆಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದೀಗ ಪುನಃ 237 ಹುದ್ದೆಗಳನ್ನು ಸೇರ್ಪಡೆಗೊಳಿಸಿ ಅರ್ಜಿಗಳನ್ನು ಆಹ್ವಾನಿಸಿದೆ.

ಕೆಪಿಎಸ್‌ಸಿ ಹೆಚ್ಚುವರಿ ನೇಮಕಾತಿ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-03-2017 (ರಾತ್ರಿ 11-45 ಘಂಟೆಯೊಳಗೆ)
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 15-03-2017 (ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ)
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಾತ್ಪೂರ್ವಿಕವಾಗಿ ದಿನಾಂಕ 25-05-2017 ರಿಂದ 28-05-2017 ರವರೆಗೆ ನಡೆಸಲಾಗುವುದು.

ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಅರ್ಜಿಗಳಲ್ಲಿ ಮಾಹಿತಿಯನ್ನು ಪರಿಷ್ಕರಣೆ ಮಾಡಬೇಕಿದ್ದಲ್ಲಿ ಕಲ್ಪಿಸಲಾಗಿರುವ Edit option ಅನ್ನು ಬಳಸಿಕೊಂಡು ಹುದ್ದೆಗಳ ಆಯ್ಕೆಯ ಮಾಹಿತಿಯನ್ನು ಪರಿಷ್ಕರಣೆ ಮಾಡಬಹುದು. ಇವರುಗಳು ಮತ್ತೊಮ್ಮೆ ಶುಲ್ಕ ಪಾವತಿಸುವಂತಿಲ್ಲ.

ಹುದ್ದೆಗಳ ವಿವಿರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಧೀಕ್ಷಕರು ದರ್ಜೆ-1-78 ಹುದ್ದೆಗಳು

ವಿದ್ಯಾರ್ಹತೆ
ಸೋಷಿಯಲ್ ವರ್ಕ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಹೋಂ ಸೈನ್ಸ್ / ಮಾಸ್ಟರ್ ಆಫ್ ಆರ್ಟ್ಸ್ ವಿಮೆನ್ ಸ್ಟಡೀಸ್/ ಸೋಷಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವೇತನ
ರೂ.22,800 - 43,200/-

ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸರ ಅಭಿಯಂತರರು-35 ಹುದ್ದೆಗಳು

ವಿದ್ಯಾರ್ಹತೆ
ಎನ್ವಿರಾನ್ಮೆಂಟಲ್ ಅಥವಾ ಕೆಮಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾನ್ಯತೆ ಪಡೆದ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ವೇತನ
ರೂ.22,800 -43,200 /-

ಪೌರಾಡಳಿತ ನಿರ್ದೇಶನಾಲಯ ಮಹಾನಗರ ಪಾಲಿಕೆಯಲ್ಲಿ ಕಾಮಗಾರಿ ನಿರೀಕ್ಷಿಕರು-93 ಹುದ್ದೆಗಳು

ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ, +2 ವರ್ಷದ ಜೆಒಸಿ ಕೋರ್ಸನ್ನು ಸಿವಿಲ್ ಕನ್ಸ್ಟ್ರಕ್ಷನ್ ವಿಷಯದಲ್ಲಿ ಪಡೆದುಕೊಂಡಿರಬೇಕು.
ವೇತನ
ರೂ.14,500 -26,700 /-

ಪೌರಾಡಳಿತ ನಿರ್ದೇಶನಾಲಯದಲ್ಲಿ ಸಭೆ/ ಪುರ ಸಭೆಗಳಲ್ಲಿ ಎಲೆಕ್ಟ್ರಿಷಿಯನ್ ಗ್ರೇಡ್-1-12 ಹುದ್ದೆಗಳು

ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ + ಐಟಿಐ ಇನ್ ಎಲೆಕ್ಟ್ರಿಕಲ್ +1 ವರ್ಷದ ಶಿಸ್ಯವೃತ್ತಿಯನ್ನು ಪೂರ್ಣಗೊಳಿಸಿರಬೇಕು.
ವೇತನ
ರೂ.12 ,500 -24 ,000 /-

ಪೌರಾಡಳಿತ ನಿರ್ದೇಶನಾಲಯದಲ್ಲಿನ ನಗರ ಸಭೆ/ ಪುರಸಭೆಗಳಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು-81 ಹುದ್ದೆಗಳು

ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ + ಸ್ಯಾನಿಟರಿ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೋಮ ಕೋರ್ಸ್ ಪೂರ್ಣಗೊಳಿಸಿರಬೇಕು ಅಥವಾ ಪಿಯುಸಿ + 2 ವರ್ಷದ ಸ್ಯಾನಿಟರಿ ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಡಿಪ್ಲೋಮ ಮುಗಿಸಿರಬೇಕು.
ವೇತನ
ರೂ.21,500-24,000/-

ಪೌರಾಡಳಿತ ನಿರ್ದೇಶನಾಲಯದಲ್ಲಿ ಸಭೆ/ ಪುರ ಸಭೆಗಳಲ್ಲಿ ಎಲೆಕ್ಟ್ರಿಷಿಯನ್ ಗ್ರೇಡ್-1 -16 ಹುದ್ದೆಗಳು

ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ + ಐಟಿಐ ಇನ್ ಎಲೆಕ್ಟ್ರಿಕಲ್ ಪೂರ್ಣಗೊಳಿಸಿರಬೇಕು.
ವೇತನ
ರೂ.11,600 -21,000 /-

ವಯೋಮಿತಿ

ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
ಅ)ಸಾಮಾನ್ಯ ವರ್ಗಕ್ಕೆ : 35 ವರ್ಷ
ಆ)ಹಿಂದುಳಿದ/ ಬಿಸಿಎಂ ವರ್ಗಕ್ಕೆ 38 ವರ್ಷ
ಇ)ಪ.ಜಾ/ಪ.ಪಂ/ಪ್ರ-1 ಕ್ಕೆ 40 ವರ್ಷ

ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿಗದಿ ಪಡಿಸಲಾದ ತಾತ್ಕಾಲಿಕ ದಿನಾಂಕ 25 -02 -2017 ರಿಂದ 28 -05 -2017

ಸೂಚನೆ

ಮಹಿಳೆಯರಿಗೆ / ಮಾಜಿ ಸೈನಿಕರಿಗೆ / ಗ್ರಾಮೀಣ / ಕಮಾಅ / ಯೋ.ನಿ.ಅ. ಅಭ್ಯರ್ಥಿಗಳಿಗೆ ಮೀಸಲಿರಿಸಿದ ರಿಕ್ತ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಆಯಾ ವರ್ಗಕ್ಕೆ ಸೇರಿದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು

ಹೆಚ್ಚಿನ ಮಾಹಿತಿಗಾಗಿ : http://kpsc.kar.nic.in/indexk.html

ಇದನ್ನು ಗಮನಿಸಿ:ಕೆಪಿಎಸ್‌ಸಿ: ಅಬಕಾರಿ ಇಲಾಖೆಯಲ್ಲಿ ಉದ್ಯೋಗಾವಕಾಶ

English summary
KPSC recruitment for group A technical, Group B technical/ non technical and Group C technical posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia