ಕೆ ಎಸ್ ಆರ್ ಟಿ ಸಿಯಲ್ಲಿ ಸಿಸ್ಟಮ್ಸ್ ಮ್ಯಾನೇಜರ್ ಹುದ್ದೆ ನೇಮಕಾತಿ

Posted By:

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ)ಯಲ್ಲಿ ಖಾಲಿ ಇರುವ ಮುಖ್ಯ ಸಿಸ್ಟಮ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 03,2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಈ ಹುದ್ದೆಯು ಗುತ್ತಿಗೆ ಆಧಾರಿತವಾಗಿದ್ದು ಅಯ್ಕೆಗೊಂಡ ಅಭ್ಯರ್ಥಿಗಳು ಮೂರು ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಕ್ಕದ್ದು.

ಹುದ್ದೆಯ ವಿವರ

ಹುದ್ದೆ: ಮುಖ್ಯ ಸಿಸ್ಟಮ್ಸ್ ಮ್ಯಾನೇಜರ್(Chief Systems Manager)
ವೇತನ ಶ್ರೇಣಿ: 12 ಲಕ್ಷ ರು. (ಅಭ್ಯರ್ಥಿಗಳ ಕಾರ್ಯದಕ್ಷತೆ ಮೇಲೆ ವಾರ್ಷಿಕ ಹೆಚ್ಚುವರಿ ಅನುಧಾನ ನೀಡಲಾಗುವುದು)
ವಯೋಮಿತಿ: 03/07/2017ಕ್ಕೆ ಅನ್ವಯವಾಗುವಂತೆ ಗರಿಷ್ಠ 45 ವರ್ಷ ನಿಗದಿ ಮಾಡಲಾಗಿದೆ.

ಕೆ ಎಸ್ ಆರ್ ಟಿ ಸಿ ನೇಮಕಾತಿ

ವಿದ್ಯಾರ್ಹತೆ

ಕೆಎಸ್ ಆರ್ ಟಿಸಿಯಲ್ಲಿ ಮುಖ್ಯ ಸಿಸ್ಟಮ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ , ಮಾಸ್ಟರ್ ಡಿಗ್ರಿ ಇನ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ/ ಎಲೆಕ್ಟ್ರಾನಿಕ್ ಪೂರ್ಣಗೊಳಿಸಿರಬೇಕು.

ಇತರೆ ಅರ್ಹತೆ

  • ಐಟಿ ಕ್ಷೇತ್ರದಲ್ಲಿ ಐದರಿಂದ ಹತ್ತು ವರ್ಷಗಳ ಸೇವಾನುಭವ ಇರಬೇಕು.
  • ಕನ್ನಡವನ್ನು ಚೆನ್ನಾಗಿ ಓದಲು ಮತ್ತು ಬರೆಯಲು ಬರಬೇಕು.
  • ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ನಾನ್ ಐಟಿ ಉದ್ಯೋಗಿಗಳ ಜೊತೆಯಲ್ಲಿ ಸರಳ ರೂಪದಲ್ಲಿ ಸಂವಹನ ಮಾಡುವಂತವರಾಗಿರಬೇಕು.
  • ಹಿರಿಯ ಅಧಿಕಾರಿಗಳೊಡನೆ ಉತ್ತಮ ಬಾಂಧವ್ಯ ಹೊಂದಬೇಕು.
  • ಉತ್ತಮ ನಾಯಕತ್ವದ ಗುಣ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-07-2017

ಅರ್ಜಿ ಸಲ್ಲಿಕೆ

  • ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಮತ್ತು ಸೇವಾನುಭವದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕಛೇರಿಯ ವಿಳಾಸಕ್ಕೆ ತಲುಪಿಸುವುದು.
  • ಅರ್ಜಿಗಳನ್ನು ಇ-ಮೇಲ್ ಮೂಲಕವು ಸಲ್ಲಿಸಬಹುದಾಗಿದೆ. ಇ-ಮೇಲ್ ವಿಳಾಸ cpmrct@ksrtc.org.

ಅರ್ಜಿ ಸಲ್ಲಿಸುವ ವಿಳಾಸ

ವ್ಯವಸ್ಥಾಪಕ ನಿರ್ದೇಶಕರು
ಕೇಂದ್ರ ಕಛೇರಿ
ಕೆ.ಹೆಚ್ ರಸ್ತೆ, ಶಾಂತಿನಗರ
ಬೆಂಗಳೂರು-560027

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಪಿಡಿಎಫ್ ಗಮನಿಸಿ

English summary
Karnataka State Road Transport Corporation released new notification on their official website for the recruitment of Chief Systems Manager. Job seekers should apply on or before 03rd July 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia