KSSFCL Recruitment 2021 : ನ್ಯಾಯವಾದಿ, ಲೆಕ್ಕಪರಿಶೋಧಕರು ಮತ್ತು ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ 6 ನ್ಯಾಯವಾದಿಗಳು, ಸನ್ನದು ಲೆಕ್ಕಪರಿಶೋಧಕರು, ಆರ್ಥಿಕ ಸಲಹೆಗಾರರು ಮತ್ತು ತಾಂತ್ರಿಕ ಸಲಹೆಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್‌ಲೈನ್ ಮೂಲಕ ಸೆಪ್ಟೆಂಬರ್ 25,2021ರ ಸಂಜೆ 5:30ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದೆ ಓದಿ.

 
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಉದ್ಯೋಗಾವಕಾಶ

ಹುದ್ದೆಗಳ ವಿವರ:

ನ್ಯಾಯವಾದಿಗಳು - 2 ಹುದ್ದೆಗಳು
ಸನ್ನದು ಲೆಕ್ಕಪರಿಶೋಧಕರು - 2 ಹುದ್ದೆಗಳು
ಆರ್ಥಿಕ ಸಲಹೆಗಾರರು - 1 ಹುದ್ದೆ
ತಾಂತ್ರಿಕ ಸಲಹೆಗಾರರು - 1 ಹುದ್ದೆ
ಒಟ್ಟು 6 ಹುದ್ದೆಗಳು

ವಿದ್ಯಾರ್ಹತೆ:

ನ್ಯಾಯವಾದಿಗಳು - ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಮತ್ತು ನ್ಯಾಯವಾದಿಗಳ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಐದು ವರ್ಷಗಳಲ ಅನುಭವ
ಸನ್ನದು ಲೆಕ್ಕಪರಿಶೋಧಕರು - ಮಾನ್ಯತೆ ಪಡೆದ ಪ್ರಾಧಿಕಾರದಿಂದ ಸಿಎ/ಸಿಎಸ್/ಐಸಿಡಬ್ಲ್ಯೂಎ ಕನಿಷ್ಟ ವಿದ್ಯಾರ್ಹತೆ ಮತ್ತು ಸಹಕಾರ ಮತ್ತು ಬ್ಯಾಂಕಿಂಗ್ ಲೆಕ್ಕಪರಿಶೋಧನೆಯಲ್ಲಿ ಮೂರು ವರ್ಷಗಳ ಅನುಭವ
ಆರ್ಥಿಕ ಸಲಹೆಗಾರ- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಹೂಡಿಕೆ/ಹಣಕಾಸು ನಿರ್ವಹಣೆಯಲ್ಲಿ ಕನಿಷ್ಟ ಐದು ವರ್ಷಗಳ ಅನುಭವ/ಪರಿಣಿತಿ
ತಾಂತ್ರಿಕ ಸಲಹೆಗಾರ - ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ ಇನ್ ಇಮತ್ತು ಎಸ್‌/ಕಂಪ್ಯೂಟರ್ ಸೈನ್ಸ್/ಎಂಸಿಎ/ಎಂಟೆಕ್ ವಿದ್ಯಾರ್ಹತೆ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ವಯೋಮಿತಿ:

ನ್ಯಾಯವಾದಿಗಳು, ಸನ್ನದು ಲೆಕ್ಕಪರಿಶೋಧಕರು, ಆರ್ಥಿಕ ಸಲಹೆಗಾರ ಮತ್ತು ತಾಂತ್ರಿಕ ಸಲಹೆಗಾರ ಹುದ್ದೆಗಳಿಗೆ ಕನಿಷ್ಟ 35 ರಿಂದ ಗರಿಷ್ಟ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು.

ವೇತನ:

ನ್ಯಾಯವಾದಿಗಳು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/- ರಿಂದ 35,000/-ರೂ,
ಸನ್ನದು ಲೆಕ್ಕಪರಿಶೋಧಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/-ರೂ,
ಆರ್ಥಿಕ ಸಲಹೆಗಾರ ಮತ್ತು ತಾಂತ್ರಿಕ ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

 

ಅರ್ಜಿ ಶುಲ್ಕ:

ಅರ್ಜಿದಾರರು 1000/-ರೂ ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಈ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿ.ಡಿ ತೆಗೆದು ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಸಂಸ್ಥೆ/ವ್ಯಕ್ತಿಗಳು ನಿಗದಿತ ಅರ್ಜಿ ನಮೂನೆಗಳನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವೆಬ್‌ಸೈಟ್ http://souharda.coop/ ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸೆಪ್ಟೆಂಬರ್ 25,2021ರ ಸಂಜೆ 5:30ರೊಳಗೆ ಅರ್ಜಿಯನ್ನು ತಲುಪಿಸಬಹುದು.

ಕಚೇರಿ ವಿಳಾಸ:
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,
ನಿರ್ಮಾಣ ಭವನ,
ಡಾ.ರಾಜಕುಮಾರ ರಸ್ತೆ,
1ನೇ ಬ್ಲಾಕ್,
ರಾಜಾಜಿನಗರ,
ಬೆಂಗಳೂರು-560010.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
KSSFCL Recruitment 2021 For 6 Lawyers, Auditor And Consultant Posts. Interested candidates can apply before September 25.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X