ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಉದ್ಯೋಗಾವಕಾಶ

Posted By:

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 113 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತ ಅಭ್ಯರ್ಥಿಗಳು kstdc ವೆಬ್ಸೈಟ್ ಗಮನಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಉದ್ಯೋಗಾವಕಾಶ

ಅರ್ಹ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳಿಗೆ ತಮ್ಮ ಸ್ವವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ವಿದ್ಯಾರ್ಹತೆ, ಅನುಭವ ಹಾಗೂ ಪ್ರಮಾಣೀಕೃತ ದಾಖಲೆಗಳೊಂದಿಗೆ ಇ-ಮೇಲ್ ವಿಳಾಸಕ್ಕೆ ಕಳುಹಿಸತಕ್ಕದ್ದು.

ಇ-ಮೇಲ್ ವಿಳಾಸ: recruitment@kstdc.co
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-08-2017
ಅಭ್ಯರ್ಥಿಯು ಕೇವಲ ಒಂದಿ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಉದ್ಯೋಗಾವಕಾಶ

ಆಯ್ಕೆ ವಿಧಾನ

ವರ್ಗೀಕರಿಸಲಾದ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ, ಅನುಭವ ಮತ್ತು ಪರಿಣಿತಿಯನ್ನು ಆಧರಿಸಿ, ಅವರು ಪಡೆಯುವ ಮೌಲ್ಯಾಂಕಗಳ ಆಧಾರದ ಮೇಲೆ ಪ್ರತಿ ಒಂದು ಹುದ್ದೆಗೆ ಐದು ಅಭ್ಯರ್ಥಿಗಳ (1:5) ಅನುಪಾತದಲ್ಲಿ ನಿಗಮದ ಸಂದರ್ಶನ ಸಮಿತಿಯ ಮುಂದೆ ಮೂಲ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನಕ್ಕೆ ಪರಿಗಣಿಸಲಾಗುವುದು.

ಅಭ್ಯರ್ಥಿಗಳು ಮೇಲೆ ತಿಳಿಸಿದಂತೆ, ಗಳಿಸಿದ ಮೌಲ್ಯಾಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಒಗ್ಗೂಡಿಸಿ, ಅವರು ಗಳಿಸುವ ಒಟ್ಟಾರೆ ಅಂಕಗಳ ಆಧಾರದ ಮೇಲೆ ಆಯ್ಕೆಗೆ ಪರಿಗಣಿಸಲಾಗುವುದು.

ಜಾಹೀರಾತಿನ ಸಂಪೂರ್ಣ ವಿವರ, ಹುದ್ದೆಗಳ ವಿವರ, ಅರ್ಹತಾ ಮಾನದಂಡ, ಅಗತ್ಯ ಕೌಶಲ್ಯ, ಮೌಲ್ಯಾಧರಿತ ಮಾನದಂಡಗಳು ಹಾಗೂ ಸ್ವವಿವರದ ನಮೂನೆಗಳು ನಿಗಮದ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.

English summary
Karnataka State Tourism Development Corporation Limited invites application from the eligible candidates for 113 various posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia