ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಬೇಕಾ ?...ಹಾಗಿದ್ರೆ ಇಲ್ಲಿದೆ ಅದ್ಭುತ ಅವಕಾಶ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 18 ಸಹಾಯಕ ವ್ಯವಸ್ಥಾಪಕರು, ಅಡುಗೆಯವರು, ಸ್ವಾಗತಗಾರರು, ಉಗ್ರಾಣಿಕರು ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಮಾರ್ಚ್ 20,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಬೇಕೆ ? ಹಾಗಿದ್ರೆ ಇಂದೇ ಅರ್ಜಿ ಹಾಕಿ

 

ಖಾಲಿ ಹುದ್ದೆಗಳು:

ಸಹಾಯಕ ವ್ಯವಸ್ಥಾಪಕರು

ಅಡುಗೆಯವರು

ಸ್ವಾಗತಗಾರರು

ಉಗ್ರಾಣಿಕರು

ದ್ವಿತೀಯ ದರ್ಜೆ ಲೆಕ್ಕ ಸಹಾಯಕರು /ಬಿಲ್ ಕ್ಲರ್ಕ್ / ಕ್ಯಾಷಿಯರ್

ಸಹಾಯಕ ಅಡುಗೆಯವರು

ಅಡುಗೆ ಸಹಾಯಕರು

ಮಾಣಿ

ರೂಂ ಬಾಯ್

ಗಾರ್ಡನರ್

ಸಾಮಾನ್ಯ ಉಪಯೋಗಿ

ಕೆಲಸಗಾರರು

ವಿದ್ಯಾರ್ಹತೆ:

ಸಹಾಯಕ ವ್ಯವಸ್ಥಾಪಕರು, ಸ್ವಾಗತಗಾರರು ಹುದ್ದೆಗಳಿಗೆ ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೋಮಾ ಪದವಿ,

ಅಡುಗೆಯವರು ಮತ್ತು ಸಹಾಯಕ ಅಡುಗೆಯವರು ಹುದ್ದೆಗಳಿಗೆ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಕ್ರಾಫ್ಟ್ಸ್‌ಮೆನ್‌ಶಿಪ್ ಸರ್ಟಿಫಿಕೇಟ್ ಕೋರ್ಸ್ ಇನ್ ಫುಡ್ ಪ್ರೊಡಕ್ಷನ್ ಮತ್ತು ಪಾಟಿಸ್ಸರಿಕ್ ಹೊಂದಿರಬೇಕು.

ಉಗ್ರಾಣಿಕರು ಹುದ್ದೆಗಳಿಗೆ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ದ್ವಿತೀಯ ದರ್ಜೆ ಲೆಕ್ಕ ಸಹಾಯಕರು /ಬಿಲ್ ಕ್ಲರ್ಕ್ / ಕ್ಯಾಷಿಯರ್ ಹುದ್ದೆಗಳಿಗೆ (ಎಐಸಿಟಿಇ)/ಯುಜಿಸಿ ಇಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಹೊಂದಿರಬೇಕು (ಬಿ.ಕಾಂ/ಬಿ.ಬಿ.ಎಂ)

ಅಡುಗೆ ಸಹಾಯಕರು, ಮಾಣಿ, ರೂಂ ಬಾಯ್, ಗಾರ್ಡನರ್

ಸಾಮಾನ್ಯ ಉಪಯೋಗ ಕೆಲಸಗಾರರು ಹುದ್ದೆಗಳಿಗೆ 7ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೇತನದ ವಿವರ:

ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 24,000/-ರೂ,

ಅಡುಗೆಯವರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/-ರೂ,

ಸ್ವಾಗತಗಾರರು, ಉಗ್ರಾಣಿಕರು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು /ಬಿಲ್ ಕ್ಲರ್ಕ್ / ಕ್ಯಾಷಿಯರ್ ಮತ್ತು

ಸಹಾಯಕ ಅಡುಗೆಯವರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 13,000/-ರೂ,

ಅಡುಗೆ ಸಹಾಯಕರು, ಮಾಣಿ, ರೂಂ ಬಾಯ್, ಗಾರ್ಡನರ್ ಮತ್ತು

ಸಾಮಾನ್ಯ ಉಪಯೋಗಿ ಕೆಲಸಗಾರರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

 

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ https://www.kstdc.co/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗಧಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಸ್ವವಿವರವನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮಾರ್ಚ್ 20,2020ರೊಳಗೆ ಕಚೇರಿಗೆ ಸ್ಟೀಡ್ ಪೋಸ್ಟ್ / ರಿಜಿಸ್ಟರ್ ಪೋಸ್ಟ್ / ಕೊರಿಯರ್ ಅಥವಾ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಯು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ / ಪೋಸ್ಟ್ ಕವರ್‌ನ ಮೇಲೆ ನಮೂದಿಸತಕ್ಕದ್ದು.

ಕಚೇರಿಯ ವಿಳಾಸ:

ವ್ಯವಸ್ಥಾಪಕರು (ಆಡಳಿತ),

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ.

ಕಾರ್ಯನಿರ್ವಾಹಕ ಕಛೇರಿ,

ನೆಲಮಹಡಿ, ಯಶವಂತಪುರ ಟಿಟಿಎಂಸಿ,

ಬಿ.ಎಂ.ಟಿ.ಸಿ ಬಸ್ ನಿಲ್ದಾಣ,

ಯಶವಂತಪುರ ವೃತ್ತ,

ಬೆಂಗಳೂರು-560022.

ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka state tourism develelopment corporation recruitment 2020 notification has been released on official website for the recruitment of 18 various posts. Interested candidates can apply before 20th March 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X