ಕುವೆಂಪು ವಿಶ್ವವಿದ್ಯಾಲಯ: ವಿವಿಧ ಹುದ್ದೆಗಳ ನೇಮಕಾತಿ

Posted By:

ಕುವೆಂಪು ವಿಶ್ವವಿದ್ಯಾಲಯವು ಬೋಧಕ-ಬೋಧಕೇತರ ಹುದ್ದೆಗಳಿಗೆ ಸ್ಥಳೀಯ ವೃಂದದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೈದರಾಬಾದ್‌-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು. ಆಸಕ್ತರು ಅಕ್ಟೋಬರ್‌ 28ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯ ನೇಮಕಾತಿ

ಬೋಧಕ ಹುದ್ದೆಗಳ ವಿವರ

ಕುವೆಂಪು ವಿವಿಯ ಸ್ನಾತಕೋತ್ತರ ವಿಭಾಗದಲ್ಲಿ

 • ಪ್ರೊಫೆಸರ್‌ ಹುದ್ದೆ-01 ಹುದ್ದೆ
 • ಅಸೋಸಿಯೇಟ್‌ ಪ್ರೊಫೆಸರ್‌- 03 ಹುದ್ದೆಗಳು

ಶಿವಮೊಗ್ಗದ ಸಹ್ಯಾದ್ರಿ ಸೈನ್ಸ್‌ ಕಾಲೇಜಿನಲ್ಲಿ

 • ಅಸಿಸ್ಟೆಂಟ್‌ ಪ್ರೊಫೆಸರ್‌-05 ಹುದ್ದೆಗಳು

ಸಹ್ಯಾದ್ರಿ ಆರ್ಟ್ಸ್ ಮತ್ತು ಕಾಮರ್ಸ್‌ ಕಾಲೇಜಿನಲ್ಲಿ

 • ಅಸಿಸ್ಟೆಂಟ್‌ ಪ್ರೊಫೆಸರ್‌-02 ಹುದ್ದೆಗಳು

ಬೋಧಕೇತರ ಹುದ್ದೆ

 • ಅಸಿಸ್ಟೆಂಟ್‌ ಲೈಬ್ರೆರಿಯನ್‌-01 ಹುದ್ದೆ
 • ಅಸಿಸ್ಟೆಂಟ್‌ ಡೈರೆಕ್ಟರ್‌-01 ಹುದ್ದೆ
 • ಅಸಿಸ್ಟೆಂಟ್‌ ಎಂಜಿನಿಯರ್‌-01 ಹುದ್ದೆ
 • ಟೆಕ್ನಿಕಲ್‌ ಅಸಿಸ್ಟೆಂಟ್‌-01 ಹುದ್ದೆ
 • ಎಲೆಕ್ಟ್ರಿಕಲ್‌ ಸೂಪರ್‌ವೈಸರ್‌-01 ಹುದ್ದೆ
 • ಲ್ಯಾಬ್‌ ಟೆಕ್ನಿಷಿಯನ್‌-01 ಹುದ್ದೆ
 • ಲ್ಯಾಬ್‌ ಅಸಿಸ್ಟೆಂಟ್‌-02 ಹುದ್ದೆಗಳು
 • ಲೈಬ್ರರಿಯನ್‌ ಅಸಿಸ್ಟೆಂಟ್‌-01 ಹುದ್ದೆ,
 • ಜೂನಿಯರ್‌ ಅಸಿಸ್ಟೆಂಟ್‌-10 ಹುದ್ದೆಗಳು
 • ಡ್ರಾಟ್ಸ್‌ಮನ್‌ ಆ್ಯಂಡ್‌ ಟ್ರೇಸರ್‌-01 ಹುದ್ದೆ
 • ಹಾರ್ಟಿಕಲ್ಚರ್‌ ಅಸಿಸ್ಟೆಂಟ್‌-01 ಹುದ್ದೆ

ಬೋಧಕ ಹುದ್ದೆಗಳ ವಿದ್ಯಾರ್ಹತೆ

 • ಯುಜಿಸಿ ನಿಯಮಾನುಸಾರ ಬೋಧಕ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
 • ಪ್ರೊಫೆಸರ್‌ ಮತ್ತು ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗೆ ಪಿಎಚ್‌ಡಿ ವಿದ್ಯಾರ್ಹತೆ ಕಡ್ಡಾಯ.
 • ಪ್ರೊಫೆಸರ್‌ಗಳಾಗಲು ಕನಿಷ್ಠ 10 ವರ್ಷ ಹಾಗೂ ಅಸೋಸಿಯೇಟ್‌ ಪ್ರೊಫೆಸರ್‌ ಆಗಲು ಕನಿಷ್ಠ ಎಂಟು ವರ್ಷಗಳ ಸೇವಾನುಭವ ಹೊಂದಿರಬೇಕು.
 • ಅಸಿಸ್ಟೆಂಟ್‌ ಪ್ರೊಫೆಸರ್‌ಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು.

ಬೋಧಕೇತರ ಹುದ್ದೆಗಳ ವಿದ್ಯಾರ್ಹತೆ

 • ಲೈಬ್ರರಿ ಸೈನ್ಸ್‌/ಇನ್‌ಫಾರ್ಮೇಶನ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅಸಿಸ್ಟೆಂಟ್‌ ಲೈಬ್ರರಿಯನ್‌ ಹುದ್ದೆಗೂ, ಇದೇ ವಿಷಯಗಳಲ್ಲಿ ಪದವಿ ಪಡೆದವರು ಲೈಬ್ರರಿ ಅಸಿಸ್ಟೆಂಟ್‌ ಹುದ್ದೆಗೂ ಅರ್ಜಿ ಸಲ್ಲಿಸಬಹುದು.
 • ಫಿಸಿಕಲ್‌ ಎಜುಕೇಶನ್‌ನಲ್ಲಿ ಸ್ನಾತಕೋತ್ತರ ಪಡೆದವರು ಡೈರೆಕ್ಟರ್‌ ಹುದ್ದೆಗೂ, ಬಿಇ ಓದಿದವರು ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗೂ ಅರ್ಜಿ ಸಲ್ಲಿಸಬಹುದಾಗಿದೆ.
 • ಬಿಎಸ್ಸಿ ಪದವೀಧರರು ಲ್ಯಾಬ್‌ ಟೆಕ್ನಿಷಿಯನ್‌ಗಳಾಗಬಹುದು. ಪಿಯುಸಿ ವಿದ್ಯಾರ್ಹತೆ ಇದ್ದರೆ ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗೂ, ಡಿಪ್ಲೊಮಾ ಪೂರ್ಣಗೊಳಿಸಿದವರು ಡ್ರಾಟ್ಸ್‌ಮನ್‌ ಹುದ್ದೆಗೂ ಮತ್ತು ಎಸ್‌ಎಸ್‌ಎಲ್‌ಸಿ ಓದಿದವರು ಎಲೆಕ್ಟ್ರಿಕಲ್‌ ಸೂಪರ್‌ವೈಸರ್‌ ಹಾಗೂ ಹಾರ್ಟಿಕಲ್ಚರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ

 • ಪ್ರೊಫೆಸರ್- ಇತರೆ ರೂ.2000/-
 • ಅಸೋಸಿಯಟ್ ಪ್ರೊಫೆಸರ್-ಇತರೆ ರೂ.1500/-
 • ಅಸಿಸ್ಟೆಂಟ್ ಪ್ರೊಫೆಸರ್ /ಅಸಿಸ್ಟೆಂಟ್ ಲೈಬ್ರರಿಯನ್/ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಸಿಕಲ್ ಎಜುಕೇಶನ್/ಅಸಿಸ್ಟೆಂಟ್ ಎಂಜಿನಿಯರ್/ಟೆಕ್ನಿಕಲ್ ಅಸಿಸ್ಟೆಂಟ್/ಎಲೆಕ್ಟ್ರಿಕಲ್ ಸೂಪರ್ವೈಸರ್- ಇತರೆ ರೂ.1000/-
 • ಬೋಧಕೇತರ ಹುದ್ದೆಗಳು- ಇತರೆ ರೂ.750/-
 • ಎಸ್ಸಿ/ಎಸ್ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಶೇ.50 ರಷ್ಟು ವಿನಾಯಿತಿ
 • ಅಂಗವಿಕಲ ಅಭ್ಯರ್ಥಿಗಳಿಗೆ ಪೂರ್ಣ ವಿನಾಯಿತಿ

ಅಕ್ಟೋಬರ್‌ 28 ಅರ್ಜಿ ಸಲ್ಲಿಕೆಗೆ ಕೊನೆ ದಿನ

ಹೆಚ್ಚಿನ ವಿವರಗಳಿಗಾಗಿ ಗಮನಿಸಿ www.kuvempu.ac.in

ಅರ್ಜಿ ಕಳುಹಿಸಲು ವಿಳಾಸ

office of the
Registrar, Kuvempu University,
Jnana Sahyadri, Shankaraghatta-
577451, Shivamogga District, Karnataka

English summary
NOTIFICATION FOR INVITING APPLICATIONS FOR FILLING UP OF TEACHINGAND NON-TEACHING POSTS IN THE LOCAL CADRE IN SHIVAMOGGA UNIVERSITY

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia