ಕುವೆಂಪು ವಿಶ್ವವಿದ್ಯಾಲಯದಲ್ಲಿ ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿ

Posted By:

ಕುವೆಂಪು ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.

ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದ ಮೇಲೆ ಒಟ್ಟು 34 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮಾರ್ಚ್ 30 ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯ ನೇಮಕಾತಿ

ಹುದ್ದೆಗಳ ವಿವರ

ಬೋಧಕ ಹುದ್ದೆಗಳು

 • ಪ್ರೊಫೆಸರ್-1 ಹುದ್ದೆ
 • ಅಸೋಸಿಯೇಟ್ ಪ್ರೊಫೆಸರ್-3 ಹುದ್ದೆಗಳು
 • ಅಸಿಸ್ಟೆಂಟ್ ಪ್ರೊಫೆಸರ್-8 ಹುದ್ದೆ

ಬೋಧಕೇತರ ಹುದ್ದೆಗಳು

 • ಲೈಬ್ರರಿಯನ್-1 ಹುದ್ದೆ
 • ಅಸಿಸ್ಟೆಂಟ್ ಲೈಬ್ರರಿಯನ್-1 ಹುದ್ದೆ 
 • ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಸಿಕಲ್ ಎಜುಕೇಶನ್-1 ಹುದ್ದೆ
 • ಅಸಿಸ್ಟೆಂಟ್ ಎಂಜಿನಿಯರ್-1 ಹುದ್ದೆ
 • ಟೆಕ್ನಿಕಲ್ ಅಸಿಸ್ಟೆಂಟ್-1 ಹುದ್ದೆ
 • ಎಲೆಕ್ಟ್ರಿಕಲ್ ಸೂಪರ್ವೈಸರ್-1 ಹುದ್ದೆ
 • ಲ್ಯಾಬ್ ಟೆಕ್ನಿಷಿಯನ್- 1 ಹುದ್ದೆ
 • ಲ್ಯಾಬ್ ಅಸಿಸ್ಟೆಂಟ್-2 ಹುದ್ದೆಗಳು
 • ಲೈಬ್ರರಿ ಅಸಿಸ್ಟೆಂಟ್- 1 ಹುದ್ದೆ
 • ಜೂನಿಯರ್ ಅಸಿಸ್ಟೆಂಟ್- 10 ಹುದ್ದೆಗಳು
 • ಡ್ರಾಫ್ಟ್ಸ್ಮನ್ ಅಂಡ್ ಟ್ರೇಸರ್-1 ಹುದ್ದೆ
 • ಹಾರ್ಟಿಕಲ್ಚರ್ ಅಸಿಸ್ಟೆಂಟ್ - ಹುದ್ದೆ

ಶೈಕ್ಷಣಿಕ ಅರ್ಹತೆ

 • ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಬೋಧನೆ ಹಾಗೂ ಸಂಶೋಧನೆಯಲ್ಲಿ ನಿಗದಿತ ಅವಧಿಯ ಸೇವಾನುಭವ ಪಡೆದಿರಬೇಕು.
 •  ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕುವವರು ಪಿಹೆಚ್.ಡಿ ಪೂರ್ಣಗೊಳಿಸಿರಬೇಕು.
 • ಲೈಬ್ರರಿಯನ್ ಹಾಗೂ ಅಸಿಸ್ಟೆಂಟ್ ಲೈಬ್ರರಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲೈಬ್ರರಿ/ ಇನ್ಫರ್ಮೇಷನ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
 • ಅಸಿಸ್ಟೆಂಟ್ ಎಂಜಿನಿಯರ್ಗಳಾಗಲು ಬಿಇ(ಸಿವಿಲ್)
 • ಟೆಕ್ನಿಕಲ್ ಅಸಿಸ್ಟೆಂಟ್ಗಳಾಗಲು ಎಂಸಿಎ/ಎಂಎಸ್ಸಿ ಲ್ಯಾಬ್ ಟೆಕ್ನಿಷಿಯನ್
 • ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಬಿಎಸ್ಸಿ
 • ಲೈಬ್ರರಿ ಅಸಿಸ್ಟೆಂಟ್ ಹುದ್ದೆಗೆ ಲೈಬ್ರರಿ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು
 • ಪಿಯುಸಿ ವಿದ್ಯಾರ್ಹತೆ ಇರುವವರು ಜೂನಿಯರ್ ಅಸಿಸ್ಟೆಂಟ್ ಹುದ್ದೆಗೂ, ಡ್ರಾಟ್ಸ್ಮನ್ ಮತ್ತು ಟ್ರೇಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಓದಿರಬೇಕು. ಇನ್ನುಳಿದಂತೆ ಹಾರ್ಟಿಕಲ್ಚರ್ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ

ಪ್ರೊಫೆಸರ್/ಲೈಬ್ರರಿಯನ್- ಇತರೆ ರೂ.2000/-,

ಅಸೋಸಿಯಟ್ ಪ್ರೊಫೆಸರ್-ಇತರೆ ರೂ.1500/-

ಅಸಿಸ್ಟೆಂಟ್ ಪ್ರೊಫೆಸರ್ /ಅಸಿಸ್ಟೆಂಟ್ ಲೈಬ್ರರಿಯನ್/-  ಇತರೆ ರೂ.1000/-
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಸಿಕಲ್ ಎಜುಕೇಶನ್/
ಅಸಿಸ್ಟೆಂಟ್ ಎಂಜಿನಿಯರ್/ಟೆಕ್ನಿಕಲ್ ಅಸಿಸ್ಟೆಂಟ್/
ಎಲೆಕ್ಟ್ರಿಕಲ್ ಸೂಪರ್ವೈಸರ್

ಬೋಧಕೇತರ ಹುದ್ದೆಗಳು- ಇತರೆ ರೂ.750/-

ಎಸ್ಸಿ/ಎಸ್ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಶೇ.50 ರಷ್ಟು ವಿನಾಯಿತಿ

ಅಂಗವಿಕಲ ಅಭ್ಯರ್ಥಿಗಳಿಗೆ ಪೂರ್ಣ ವಿನಾಯಿತಿ.

ಸೂಚನೆ

 • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತು ಸೆಟ್ ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು
 • ಎಲ್ಲಾ ಅರ್ಜಿಗಳು ದೃಢೀಕರಿಸಬೇಕು
 • ಅರ್ಜಿಗಳನ್ನು ಆನ್-ಲೈನ್ ಮೂಲಕ ಕುವೆಂಪು ವಿವಿಯ ಅಧಿಕೃತ ವೆಬ್ಟೈಟ್ ವಿಳಾಸದಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.

ವೆಬ್-ಸೈಟ್ ವಿಳಾಸ www.kuvempu.ac.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-03-2017

ಅರ್ಜಿ ಸಲ್ಲಿಸಬೇಕಾದ ವಿಳಾಸ:

Office of the Registrar , Kuvempu University , Jnana Sahyadri , Shankaraghatta -577451 , Shimoga District, Karnataka

English summary
NOTIFICATION FOR INVITING APPLICATIONS FOR FILLING UP OF TEACHINGAND NON-TEACHING POSTS IN THE LOCAL CADRE IN SHIVAMOGGA UNIVERSITY

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia