ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿ ತರಬೇತುದಾರರ ನೇಮಕಾತಿ

Posted By:

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆವಿಐಸಿ)ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್ ಮೂಲಕ ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಗೆ  ಕೌಶಲ್ಯ ತರಬೇತಿ ನೀಡಲು ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಹತ್ತು ದಿನಗಳೊಳಗೆ ಕಚೇರಿಗೆ ತಮ್ಮ ಸ್ವವಿವರನ್ನು ನೀಡಿ ನೋಂದಾಯಿಸಿಕೊಳ್ಳುವುದಾಗಿ ಸೂಚಿಸಲಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ತರಬೇತುದಾರರ ನೇಮಕಾತಿ

ತರಬೇತಿ ನೀಡುವ ಕೋರ್ಸುಗಳು ವಿವರ

ಬ್ಯೂಟಿಷಿಯನ್, ಟೈಲರಿಂಗ್ ಅಂಡ್ ಎಮ್ರಾಯ್ಡರಿ, ಫ್ಯಾನ್ಸಿ ಕ್ಯಾಂಡಲ್ ಮೇಕಿಂಗ್, ಡಿಟರ್ಜೆಂಟ್ ಪೌಡರ್ ಮೇಕಿಂಗ್, ಕಂಪ್ಯೂಟರ್ ಬೇಸಿಕ್ ಕೋರ್ಸ್, ಕಂಪ್ಯೂಟರ್ ಫೈನಾನ್ಸ್ ಅಂಡ್ ಟ್ಯಾಲಿ, ಮೊಬೈಲ್ ಫೋನ್ ಸರ್ವಿಸ್ ಕೋರ್ಸ್, ಡಿಟರ್ಜೆಂಟ್ ಪೌಡರ್ ಅಂಡ್ ಕೇಕ್ ಮೇಕಿಂಗ್, ಅಗರ್ ಬತ್ತಿ ಮೇಕಿಂಗ್, ಕಂಪ್ಯೂಟರ್ ಹಾರ್ಡ್ ವೇರ್ ಕೋರ್ಸ್, ಪೇಪರ್ ಆರ್ಟಿಕಲ್ಸ್, ಪೇಪರ್ ಕನ್ವರ್ಷನ್, ಬೀ ಕೀಪಿಂಗ್, ಸೋಲಾರ್ ಎನರ್ಜಿ, ಟೂ ವ್ಹೀಲರ್ ರಿಪೇರಿಂಗ್, ಸ್ಕ್ರೀನ್ ಪ್ರಿಂಟಿಂಗ್.

ಈ ಕೋರ್ಸ್ ಗಳನ್ನು ಹೊರತು ಪಡಿಸಿ ಬೇರೆ ಕೋರ್ಸ್ ಗಳನ್ನು ಕೆವಿಐಸಿ ಮಾನ್ಯತೆ ಪಡೆದು ಹೇಳಿಕೊಡಬಹುದಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗದ ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್ ನ ಮುಖ್ಯ ಉದ್ದೇಶ ಸ್ವಂತ ಉದ್ದಿಮೆದಾರರಿಗೆ ಪೂರ್ವ ತರಬೇತಿ ನೀಡಿ ಅವರನ್ನು ಸಶಕ್ತರನ್ನಾಗಿಸುವುದು, ಮಾರುಕಟ್ಟೆ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಮತ್ತು ಬಂಡವಾಳಕ್ಕಾಗಿ ಸಾಲ ಸೌಲಭ್ಯ ಪಡೆಯಲು ನೆರವಾಗುವುದು.

ಅರ್ಜಿ ಸಲ್ಲಿಕೆ

ಆಸಕ್ತ ತರಬೇತುದಾರರು ತಮ್ಮ ಸಂಪೂರ್ಣ ವಿವರ ಮತ್ತು ಈ ಹಿಂದೆ ತರಬೇತಿ ನೀಡಿದ್ದ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಿ ಬೆಂಗಳೂರಿನ  ಕಚೇರಿಗೆ ಹತ್ತು ದಿನಗಳೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  • ಅಭ್ಯರ್ಥಿಯ ಮೂಲ ದಾಖಲೆಗಳ ಪ್ರತಿಗಳು
  • ದೂರವಾಣಿ/ಮೊಬೈಲ್ ಸಂಖ್ಯೆ
  • ಇ-ಮೇಲ್ ವಿಳಾಸ

ಕಛೇರಿ ವಿಳಾಸ 

ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್, ಖಾದಿ ಮತ್ತು ಗ್ರಾಮೋದ್ಯೋಗ, ಎಫ್.ಸಿ.ಐ.ಗೋಡೌನ್ ಸಮೀಪ, ಜಿನಾಪುರ,ದೂರವಾಣಿ ನಗರ ,ಬೆಂಗಳೂರು-560016

English summary
Empanelment to engage local skill trainer and professional training associates for the following courses to be conducted at training centre and also at district centre of kvic.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia