ಸ್ಪೋರ್ಟ್ಸ್ ಕೋಟಾ 2015 -16 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆ ನೇಮಕಾತಿ

ಭಾರತ ಸರ್ಕಾರ, ರಕ್ಷಣಾ ಇಲಾಖೆ, ಗುಣಮಟ್ಟ ಭರವಸೆ ನಿಯಂತ್ರಣಾಲಯ (ರಡಾರ್) ಬೆಂಗಳೂರು-560006, ಸ್ಪೋರ್ಟ್ಸ್ ಕೋಟಾ 2015 -16 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆಗಾಗಿ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ಭಾರತ ಸರ್ಕಾರ, ರಕ್ಷಣಾ ಇಲಾಖೆ, ಗುಣಮಟ್ಟ ಭರವಸೆ ನಿಯಂತ್ರಣಾಲಯ (ರಡಾರ್) ಬೆಂಗಳೂರು-560006, ಸ್ಪೋರ್ಟ್ಸ್ ಕೋಟಾ 2015 -16 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆಗಾಗಿ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ಹುದ್ದೆ ವಿವರ

ಹುದ್ದೆಯ ಹೆಸರು: ಎಲ್ ಡಿ ಸಿ (ಪ್ರತಿಭಾವಂತ ಕ್ರೀಡಾಪಟು ಕೋಟಾ)
ಕ್ರೀಡೆ ಹೆಸರು : ವಾಲಿಬಾಲ್
ಒಟ್ಟು ಖಾಲಿ ಹುದ್ದೆ: 01
ಕಛೇರಿ ಹೆಸರು: ಸಿಕ್ಯೂಎಆರ್, ಬೆಂಗಳೂರು
ವೇತನ ಶ್ರೇಣಿ- ಹಂತ2ರ ಜೊತೆಗೆ ರೂ.19900/- ಪ್ರವೇಶ ವೇತನ

 ಎಲ್ ಡಿ ಸಿ (ಗ್ರೂಪ್ ಸಿ) ಹುದ್ದೆ ನೇಮಕಾತಿ

ವಿದ್ಯಾರ್ಹತೆ

  • ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ. ಅಪೇಕ್ಷಣೀಯ: ಪ್ರಾಥಮಿಕ ಕಂಪ್ಯೂಟರ್ ಜ್ಞಾನ
  • ಎಲ್ ಡಿ ಸಿ ಹುದ್ದೆಗೆ ಆಯ್ಕೆಗೊಳ್ಳುವ ವ್ಯಕ್ತಿಗಳು ಕಡ್ಡಾಯವಾಗಿ ಕಂಪ್ಯೂಟರ್ನಲ್ಲಿ ಟೈಪಿಂಗ್ ಸ್ಕಿಲ್ ಟೆಸ್ಟ್ ನ ಅರ್ಹತೆ ಪಡೆಯತಕ್ಕದ್ದು.

ವಯೋಮಿತಿ

ಅರ್ಜಿ ಸ್ವೀಕೃತಿಯ ಕೊನೆಯ ದಿನಾಂಕದಂದು 18 ರಂದ 27 ವರ್ಷದವರಾಗಿರಬೇಕು. ಒಬ್ಬ ಕ್ರೀಡಾಪಟುವಿಗೆ ಗರಿಷ್ಠ ಐದು ವರ್ಷಗಳವರೆಗಿನ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ. ಅಲ್ಲದೆ, ಕ್ರೀಡಾಪಟು ಎಸ್.ಸಿ/ಎಸ್.ಟಿ/ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಲ್ಲಿ ಸದರಿ ವರ್ಗಗಳಿಗೆ ಸಡಿಲಿಕೆ ಅನ್ವಯವಾಗುವ ಇತರೆ ಸಡಿಲಿಕೆಗಳು ಕೂಡ ಹೆಚ್ಚುವರಿಯಾಗಿ ಲಭ್ಯವಾಗುತ್ತವೆ.

ಅರ್ಹತೆ

  1. ಒಂದು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು.
  2. ಅಂತರ್ ವಿಶ್ವವಿದ್ಯಾಲಯ ಕ್ರೀಡಾ ಮಂಡಳಿ ಇವರು ನಡೆಸುವ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿನ ವಾಲಿಬಾಲ್ ಕ್ರೀಡೆಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು
  3. ಅಖಿಲ ಭಾರತ ಶಾಲಾ ಕ್ರೀಡೆಗಳ ಒಕ್ಕೂಟ ಇವರು ಶಾಲೆಗಳಿಗಾಗಿ ನಡೆಸುವ ರಾಷ್ಟ್ರೀಯ ಕ್ರೀಡೆ/ಆಟಗಳಲ್ಲಿ ರಾಜ್ಯ ಶಾಲಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟು.

ಅರ್ಜಿ ಪ್ರಕ್ರಿಯೆ

ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು (ಫಾರಂ ಎ) ಬಿಳಿ ಹಾಳೆಯಲ್ಲಿ ಟೈಪ್ ಮಾಡಿ ಅಥವಾ ಸ್ಪಷ್ಟವಾದ ಕೈಬರಹದಿಂದ ಭರ್ತಿ ಮಾಡಿ, ಅರ್ಜಿ ಜೊತೆಗೆ ಸಂಬಂಧಪಟ್ಟ ಧೃಡೀಕರಿಸಲಾದ ಅಂಕ ಪಟ್ಟಿಗಳು / ಕ್ರೀಡಾ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಈ ಜಾಹೀರಾತು ಪ್ರಕಟಗೊಂಡ 30 ದಿನಗಳ ಒಳಗೆ ಕಛೇರಿಯ ವಿಳಾಸಕ್ಕೆ ರವಾನಿಸತಕ್ಕದ್ದು.

ಕಛೇರಿ ವಿಳಾಸ

ದಿ ಕಂಟ್ರೋಲರ್
ಸಿಕ್ಯೂಎ(ಆರ್)
ಜೆ ಸಿ ನಗರ, ಬೆಂಗಳೂರು-560006

ಆಯ್ಕೆ ಪ್ರಕ್ರಿಯೆ

ಬಹು ಆಯ್ಕೆ ಮಾದರಿಯ ಪ್ರಶ್ನೋತ್ತರಗಳನ್ನೊಳಗೊಂಡ ಯೋಗ್ಯತಾ ಪರೀಕ್ಷೆ, ಸಾಮಾನ್ಯ ಅಂಕಗಣಿತ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆಗಳ ಜೊತೆಗೆ ಕ್ರೀಡೆಗೆ ಸಂಬಂಧಿಸಿದಂತೆ ಮೈದಾನದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Ministry of Defense has issued notification of inviting applications for Group – C recruitment under sports quota
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X