ಎಲ್ ಐ ಸಿ: ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯ ಅಂಗ ಸಂಸ್ಥೆಯಾದ 'ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌' ಖಾಲಿ ಇರುವ ಅಸಿಸ್ಟೆಂಟ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ನೇಮಕ ನಡೆಯಲಿದ್ದು, ಒಟ್ಟು 264 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಎಲ್ ಐ ಸಿ ನೇಮಕಾತಿ

ಹುದ್ದೆಗಳ ವಿವರ

ಒಟ್ಟು ಹುದ್ದೆಗಳು 264

ಅಸಿಸ್ಟೆಂಟ್ ಹುದ್ದೆಗಳು: 164 ( ಕರ್ನಾಟಕದಲ್ಲಿ 10)

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು: 100 (ದೇಶಾದ್ಯಂತ)

ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇವಲ ಒಂದು ರಾಜ್ಯವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗೆ ಆಯ್ಕೆಯಾದವರನ್ನು ದೇಶದ ಯಾವುದೇ ಶಾಖೆಗೆ ನಿಯೋಜಿಸಬಹುದಾಗಿದೆ.

ವೇತನ ಶ್ರೇಣಿ

  • ಅಸಿಸ್ಟೆಂಟ್ ಹುದ್ದೆಗೆ: ರೂ.13980-32110/-
  • ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ: ರೂ.32815-49805/-

ವಿದ್ಯಾರ್ಹತೆ

  • ಅಸಿಸ್ಟೆಂಟ್‌ ಹುದ್ದೆಗೆ ಯಾವುದೇ ವಿಷಯದಲ್ಲಿ ಶೇಕಡ 60 ಅಂಕಗಳೊಂದಿಗೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
  • ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗೆ ಶೇಕಡ 60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಎಂಬಿಎ ಪದವಿ ಪಡೆದಿರಬೇಕು.

ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಇರಬೇಕಾಗಿರುವುದು ಅವಶ್ಯ.

ಹುದ್ದೆಗಳ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡೂ ಹುದ್ದೆಗಳಿಗೂ ಪ್ರತ್ಯೇಕವಾಗಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶವಿರುತ್ತದೆ.

ಪರೀಕ್ಷಾ ವಿಧಾನ

ಅನ್‌ಲೈನ್‌ ಪರೀಕ್ಷೆಯಲ್ಲಿ ಇಂಗ್ಲಿಷ್‌ ಭಾಷೆ, ಲಾಜಿಕಲ್‌ ರೀಸನಿಂಗ್‌, ಜನರಲ್‌ ಅವರ್ನೆಸ್‌ ಮತ್ತು ನ್ಯೂಮರಿಕಲ್‌ ಎಬಿಲಿಟಿಯ ನಾಲ್ಕು ಪೇಪರ್‌ಗಳು ಇರುತ್ತವೆ. ಈ ನಾಲ್ಕು ಪ್ರಶ್ನೆಪತ್ರಿಕೆಗಳಿಗೂ ತಲಾ 50 ಅಂಕ ನಿಗದಿಪಡಿಸಲಾಗಿದೆ. ತಪ್ಪು ಉತ್ತರಕ್ಕೆ ಪೆನಾಲ್ಟಿ ಇರುತ್ತದೆ. ನಿರ್ದಿಷ್ಟ ಅಂಕ ಪಡೆದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ : ರೂ.500/-

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-09-2017
ಆನ್-ಲೈನ್ ಪರೀಕ್ಷೆ ಕರೆ ಪತ್ರ ಪಡೆಯಲು: 26-09-2017
ಆನ್-ಲೈನ್ ಪರೀಕ್ಷೆ (ಅಸಿಸ್ಟೆಂಟ್ ಮ್ಯಾನೇಜರ್): 10-10-2017 (ತಾತ್ಕಾಲಿಕ)
ಆನ್-ಲೈನ್ ಪರೀಕ್ಷೆ (ಅಸಿಸ್ಟೆಂಟ್): 12-10-2017 (ತಾತ್ಕಾಲಿಕ)

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು: ಬೆಂಗಳೂರು ಮತ್ತು ಮೈಸೂರು

ಹೆಚ್ಚಿನ ವಿವರಗಳಿಗಾಗಿ ಗಮನಿಸಿ  www.lichousing.com

English summary
Online Applications are invited from eligible candidates who must be an Indian Citizen for selection and appointment as Assistant/Assistant Manager in LIC.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia