ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘ ವಿವಿಧ ಹುದ್ದೆಗಳ ನೇಮಕಾತಿ

Posted By:

ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ.

ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ನೇಮಕಾತಿ

ಒಟ್ಟು 21 ಹುದ್ದೆಗಳು ಖಾಲಿ ಇದ್ದು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ ನಂದಿನಿ ಡೈರಿ ನೇಮಕಾತಿ

ಹುದ್ದೆಗಳ ವಿವರ

ತಾಂತ್ರಿಕ ಅಧಿಕಾರಿ-02 ಹುದ್ದೆಗಳು

ವೇತನ ಶ್ರೇಣಿ: ರೂ.22800-43200/-
ವಿದ್ಯಾರ್ಹತೆ: ಬಿಎಸ್ಸಿ (ಡಿ.ಟಿ) ಅಥವಾ ಬಿಟೆಕ್ (ಡಿ.ಟೆಕ್) ಪದವೀಧರರಾಗಿರಬೇಕು.

ಡೇರಿ ಸೂಪರ್ವೈಸರ್- 01 ಹುದ್ದೆ

ವೇತನ ಶ್ರೇಣಿ: ರೂ.17650-32000/-
ವಿದ್ಯಾರ್ಹತೆ: ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೋಮ ಗಳಿಸಿರಬೇಕು.

ಲೆಕ್ಕ ಸಹಾಯಕರು-05 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ವಾಣಿಜ್ಯ ಪದವಿ (ಬಿಕಾಂ) ತೇರ್ಗಡೆಯಾಗಿರಬೇಕು.

ಮಾರುಕಟ್ಟೆ ಸಹಾಯಕರು-04 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಬಿಬಿಎಂ/ಬಿಕಾಂ ಪದವಿ ಜೊತೆಗೆ ಕಂಪ್ಯೂಟರ್ ಬೇಸಿಕ್ ತಿಳಿದಿರಬೇಕು. ಡಿಪ್ಲೋಮ ಇನ್ ಕೋಆಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್ ಅಭ್ಯರ್ಥಿಗಳಿಗೆ ಆದ್ಯತೆ.

ಆಡಳಿತ ಸಹಾಯಕರು-05 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಗಣಕಯಂತ್ರ ನಿರ್ವಹಣೆ ಮೂಲಭೂತ ಅರಿವು ಹೊಂದಿರಬೇಕು.

ಕಿರಿಯ ಸಿಸ್ಟಮ್ ಆಪರೇಟರ್-02 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ಕಂಪ್ಯೂಟರ್ ಅಪ್ಪ್ಲಿಕೆಶನ್ಸ್ ಪದವಿ (ಬಿಸಿಎ) ತೇರ್ಗಡೆ ಹೊಂದಿರಬೇಕು.

ಕೆಮಿಸ್ಟ್-02 ಹುದ್ದೆಗಳು

ವೇತನ ಶ್ರೇಣಿ: ರೂ.14550-26700/-
ವಿದ್ಯಾರ್ಹತೆ: ರಸಾಯನಶಾಸ್ತ್ರ/ಗುಣನಿಯಂತ್ರಣ ವಿಷಯವನ್ನು ಐಚ್ಚಿಕ ವಿಷಯವಾಗಿ ಹೊಂದಿರುವ ವಿಜ್ಞಾನ ಪದವಿ (ಬಿಎಸ್ಸಿ) ತೇರ್ಗಡೆಯಾಗಿರಬೇಕು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿಗಳ ಸಂಪೂರ್ಣ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.450/-
ಪ.ಜಾ/ಪ.ಪಂ/ಪ್ರ-1/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.250/-

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಆಧಾರದ ಮೇಲೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-12-2017
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07-12-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Applications have been invited to fill up vacancies in vacancies in Dakshina Kannada Co-op. Milk Producers’ Union.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia