ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ

Posted By:

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಳೀಯ ವೃಂದದಲ್ಲಿ(ಹೈದ್ರಾಬಾದ್-ಕರ್ನಾಟಕ) ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ 10 (ಹತ್ತು) ಪ್ರತಿಗಳಲ್ಲಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574 199, ದ.ಕ., ಕರ್ನಾಟಕ ಇವರಿಗೆ ದಿನಾಂಕ 10.07.2017ರಂದು ಸಂಜೆ 5.00 ಗಂಟೆಯ ಒಳಗಾಗಿ ನೋಂದಾಯಿತ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರುವೇತನ ಶ್ರೇಣಿಒಟ್ಟು ಹುದ್ದೆ
ರೇಡಿಯೇಷನ್ ಫಿಜಿಸಿಸ್ಟ್15,600-39,100/- + ಎಜಿಪಿ 6,000/-01
 ಸಹಾಯಕ ಗ್ರಂಥಪಾಲಕ
15,600-39,100/- + ಎಜಿಪಿ 6,000/-02
 ಸಹಾಯಕ ಅಭಿಯಂತರ
22800-43200/-
02
 ಕ್ಯುರೇಟರ್22800-43200/-
01
 ಕೋಚ್21600-40050/-01
 ಸ್ಟಾಫ್ ನರ್ಸ್
17650-32000/-
01
 ಕಂಪ್ಯೂಟರ್ ಆಪರೇಟರ್
17650-32000/-
01
 ಪ್ರಥಮ ದರ್ಜೆ ಸಹಾಯಕ
16000-29600/-
02
 ಸ್ಟೋರ್ ಕೀಪರ್
16000-29600/-
01
ಪ್ರಯೋಗಾಲಯ ತಂತ್ರಜ್ಞ14550-26700/-01
ಪ್ರಯೋಗಾಲಯ ಸಹಾಯಕ14550-26700/-01
ಸ್ಯಾನಿಟರಿ ಇನ್ಸ್ಪೆಕ್ಟರ್16000-29600/-01
ದ್ವಿತೀಯ ದರ್ಜೆ ಸಹಾಯಕ11600-21000/-05
ಬೆರಳಚ್ಚುಗಾರ-ಕಂ-ಗುಮಾಸ್ತ11600-21000/-03
ಪಂಪ್ ಆಪರೇಟರ್11600-21000/-01
ಅಸಿಸ್ಟೆಂಟ್ ಕುಕ್10400-16400/-01
ಬೈಂಡರ್10400-16400/-01
ಕಿಚನ್ ಅಸಿಸ್ಟೆಂಟ್9600-14550/-01

ವಯೋಮಿತಿ

  • ಕನಿಷ್ಟ - 18 ವರ್ಷ ಗರಿಷ್ಠ -40 ವರ್ಷಗಳು (ಪ.ಜಾ./ಪ.ಪಂ./ಪ್ರವರ್ಗ -I)
  • ಗರಿಷ್ಠ -38 ವರ್ಷಗಳು (ಒಬಿಸಿ)
  • ಗರಿಷ್ಠ - 35 ವರ್ಷಗಳು (ಸಾಮಾನ್ಯ ವರ್ಗ)
  • ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಸಶಸ್ತ್ರ ಕೇಂದ್ರದಳದಲ್ಲಿ ಸಲ್ಲಿಸಿದ ಸೇವೆಯ ಜೊತೆಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಗೆ(ಗರಿಷ್ಠ 45 ವರ್ಷ ವಯೋಮಿತಿ) ಅರ್ಹರು.

ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ

ಅರ್ಜಿ ಶುಲ್ಕ

  • ರೂ. 500/- (ಪ.ಜಾ./ಪ.ಪಂ. ರೂ. 250/-)
  • ಅಂಗವಿಕಲ ಮತ್ತು ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

ವಿವರವಾದ ಅಧಿಸೂಚನೆಯೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.mangaloreuniversity.ac.in ನಿಂದ ಡೌನ್‍ಲೋಡ್ ಮಾಡಬಹುದು.

ನಿಗದಿತ ಅರ್ಜಿ ಶುಲ್ಕವನ್ನು ಚಲನ್ ಮೂಲಕ ಅಥವಾ ಡಿ.ಡಿ. ಮೂಲಕ ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಇವರ ಹೆಸರಿಗೆ ಪಾವತಿಸಿ, ಚಲನ್/ಡಿ.ಡಿ.ಯನ್ನು ಅರ್ಜಿಯ ಜೊತೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಮುಂಚಿತವಾಗಿ ಕಳುಹಿಸಿ ಕೊಡುವುದು.

English summary
Mangalore University has announced notification for the recruitment of Assistant Librarian, Assistant Engineer, First Division Assistant, Second Division Assistant, Typist cum Clerk & Other vacancies. Eligible candidates may apply on or before 10-07-2017 by 05:00 PM.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia