ಮುಂಬೈ ಹಡಗು ನಿರ್ಮಾಣ ಕೇಂದ್ರ ಮಝಗಾಂವ್ ನಲ್ಲಿ ವಿವಿದ ಹುದ್ದೆಗಳ ನೇಮಕಾತಿ

Posted By:

ಮುಂಬೈನ ಹಡಗು ನಿರ್ಮಾಣ ಕೇಂದ್ರ ಮಝಗಾಂವ್ ಡಾಕ್ ಷಿಫ್-ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಮ್ಯಾನೇಜರ್, ಎಕ್ಸಿಕ್ಯುಟಿವ್ ಟ್ರೈನಿ ಮತ್ತು ಟ್ರೇಡ್ ಅಪ್ರೆಂಟಿಸ್ ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್ ಸಿ, ಐಟಿಐ, ಪದವಿ ಮತ್ತು ಸ್ನಾತಕೋಥ್ತರ ಪದವೀಧರಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಒಟ್ಟು 309 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಹುದ್ದೆಗಳ ವಿವರ

ಮ್ಯಾನೇಜರ್ ಹುದ್ದೆ-30, ಟ್ರೇಡ್ ಅಪ್ರೆಂಟಿಸ್ ಷಿಪ್-ಒಟ್ಟು 279 ಹುದ್ದೆ

ಮುಂಬೈ ಹಡಗು ನಿರ್ಮಾಣ ಕೇಂದ್ರದಲ್ಲಿ ನೇಮಕಾತಿ

ಅಪ್ರೆಂಟಿಸ್ ಷಿಪ್ ಹುದ್ದೆ

ವಿದ್ಯಾರ್ಹತೆ

  • ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರುವ ಮತ್ತು ಸಂಬಂಧಪಟ್ಟ ಟ್ರೇಡ್ ಗಳಲ್ಲಿ ಐಟಿಐ ಕೋರ್ಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಟ್ರೇಡ್ ಅಪ್ರೆಂಟಿಸ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ತೇರ್ಗಡೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
  • ಎಲೆಕ್ಟ್ರಿಷಿಯನ್, ಫಿಟ್ಟರ್, ಡ್ರಾಟ್ಸ್ ಮನ್, ಸ್ಟ್ರಕ್ಚರಲ್ ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಕಾರ್ಪೆಂಟರ್, ರಿಗ್ಗರ್ ಮತ್ತು ವೆಲ್ಡರ್ ಹುದ್ದೆಗಳಿಗೆ ತರಬೇತಿ ಪಡೆಯಬಹುದು.
  • ಈ ಟ್ರೇಡ್ ಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದು, ಅವುಗಳಿಗನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನ.

ಮ್ಯಾನೇಜರ್ ಹುದ್ದೆ

ಚೀಫ್ ಮ್ಯಾನೇಜರ್ ಮತ್ತು ಮ್ಯಾನೇಜರ್ ತಲಾ ಒಂದೊಂದು ಹುದ್ದೆ, ಸೀನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಟ್ರೈನಿ ತಲಾ 13 ಹುದ್ದೆಗಳು ಹಾಗೂ ಎರಡು ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ನೇಮಕ ನಡೆಯಲಿದೆ.

ವಿದ್ಯಾರ್ಹತೆ

ಸಿಎ ಅಥವಾ ಸಿಎಂಎ ವಿದ್ಯಾರ್ಹತೆ ಹೊಂದಿರುವವರು ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಉಳಿದೆಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನಿಗದಿತ ಅವಧಿಯ ಸೇವಾನುಭವ ಹೊಂದಿರುವುದು ಕಡ್ಡಾಯ.

ಮ್ಯಾನೇಜರ್ ಹುದ್ದೆಗಳಿಗೆ ಜು.27ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ಪಡೆಯಲು: mazdock.com ಗಮಿನಿಸಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.300/- ಶುಲ್ಕ ನಿಗದಿಪಡಿಸಲಾಗಿದೆ.
  • ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಮುದ್ರಿತ ಪ್ರತಿಯನ್ನು ಆಗಸ್ಟ್ 11ರೊಳಗೆ ಕಚೇರಿಯ ವಿಳಾಸಕ್ಕೆ ತಲುಪಿಸುವಂತೆ ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ

CR (HR-CR), Executive
Recruitment Section,
2nd Floor,Mazdock House,
Mazagon Dock Shipbuilders Limited,
Dockyard Road, Mumbai 400010

English summary
Mazagon Dock Shipbuilders Limited (MDL). has announced a notification for the recruitment of 30 manager posts and 279 Trade Apprentice Post in various trades

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia