ಮೈಸೂರಿನಲ್ಲಿ ಆಗಸ್ಟ್ 05 ಮತ್ತು 06 ರಂದು ಭಾರೀ ಉದ್ಯೋಗ ಮೇಳ

Posted By:

ಮೈಸೂರಿನ ಮಹಾರಾಜ ಟ್ರಸ್ಟ್ ಆಯೋಗದಲ್ಲಿ 2017 ರ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 200 ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುತ್ತಿದ್ದು, ಆಗಸ್ಟ್ 05 ಮತ್ತು 06 ರಂದು ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೇಳ ನಡೆಯಲಿದೆ.

ಐಟಿ ಮತ್ತು ನಾನ್ ಐಟಿ ವಲಯದ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುತ್ತಿದ್ದು, ಪದವಿ, ಸ್ನಾತಕೋತ್ತರ ಪದವಿ ಮತ್ತು ಈಗಾಗಲೇ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

5000 ಕ್ಕೂ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರವುದಿಲ್ಲ. ಅಲ್ಲದೇ ಅಂಕಗಳ ಮಿತಿಯು ಇಲ್ಲದಿರುವುದರಿಂದ ಕಡಿಮೆ ಅಂಕಗಳನ್ನು ಪಡೆದವರು ಕೂಡ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಮೈಸೂರಿನಲ್ಲಿ ಭಾರೀ ಉದ್ಯೋಗ ಮೇಳ

ವಿದ್ಯಾರ್ಹತೆ

ಯಾವುದೇ ವಿಷಯಗಳಲ್ಲಿ ಪದವಿ ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಸಮಯ: ಬೆಳಗ್ಗೆ 8:30 ರಿಂದ ಸಂಜೆ 4:00 ಗಂಟೆಯವರೆಗೂ ನಡೆಯಲಿದೆ
ಸ್ಥಳ: ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳವಾಡಿ, ಕೊಲಂಬಿಯಾ ಏಶಿಯಾ ಆಸ್ಪತ್ರೆ ಹತ್ತಿರ, ಮೈಸೂರು.

ಕಳೆದ ಬಾರಿ ನಡೆದಿದ್ದ ಉದ್ಯೋಗ ಮೇಳದಲ್ಲಿ 180 ಕಂಪನಿಗಳು ಭಾಗವಹಿಸಿದ್ದವು, 20000 ಅಭ್ಯರ್ಥಿಗಳಲ್ಲಿ ಸುಮಾರು 6000 ಮಂದಿ ಆಯ್ಕೆಯಾಗಿದ್ದರು.

ಉದ್ಯೋಗ ಮೇಳಕ್ಕೆ ಬೇಕಾದ ದಾಖಲೆಗಳು

ರೆಸ್ಯುಮ್ ಮತ್ತು ಬಯೋಡೆಟಾ. ಕನಿಷ್ಠ ಮೂರು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು. ಭಾವ ಚಿತ್ರವಿರುವ ಗುರುತು ಚೀಟಿಗಳು ಹಾಗು ಅವುಗಳ ಝೆರಾಕ್ಸ್ ಪ್ರತಿಗಳು. ಈ ಹಿಂದೆ ಎಲ್ಲಾದರು ಕೆಲಸ ಮಾಡಿದ್ದರೆ ಅದರ ಸೇವಾನುಭವದ ಪ್ರಮಾಣ ಪತ್ರ

ನಿಮ್ಮ ಹೆಸರನ್ನು ನೋಂದಾಯಿಸಲು ಈ ನಂಬರ್ ಗೆ ಮಿಸ್ ಕಾಲ್ ನೀಡಿ 7835844440
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480849448 ,9880475019, 9740674354

ಹೆಚ್ಚಿನ ಮಾಹಿತಿಗಾಗಿ www.mitmysore.in ವೆಬ್ಸೈಟ್ ಗಮನಿಸಿ

ಉದ್ಯೋಗ ಮೇಳಕ್ಕೆ ತಯಾರಾಗಿ ಹೋಗಿ

ಮೊದಲನೆಯದಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಅಲ್ಲಿಗೆ ಹೋಗುವ ಮುನ್ನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ. ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು, ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.

ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ. ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ.

English summary
Maharaja Education Trust (R) is conducting a mega Job fair 2017 to help fresh graduates, post graduates and experienced professionals from different streams to find their prospective employer, Multi National companies from It and Non It sector to arrive.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia