ಫೆ.3 ರಂದು ಕೆ ಎಲ್ ಇ ಸೊಸೈಟಿ ಬೃಹತ್ ಉದ್ಯೋಗ ಮೇಳ

Posted By:

ಬೆಂಗಳೂರಿನ ನಾಗರಬಾವಿಯ ಕೆ ಎಲ್ ಇ ಸೊಸೈಟಿ ಪದವಿ ಕಾಲೇಜಿನಲ್ಲಿ ಫೆ.3 ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಬೃಹತ್ ಕೌಶಲ್ಯ ಮತ್ತು ಉದ್ಯೋಗ ಮೇಳ-18

2013/14/15/16/17 ನೇ ಸಾಲಿನಲ್ಲಿ ಐಟಿಐ/ಡಿಪ್ಲೋಮ/ಪದವಿ/ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಫೆ.3 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

ಬೃಹತ್ ಉದ್ಯೋಗ ಮೇಳ

ಉದ್ಯೋಗ ಮೇಳದ ವಿವರ

ಟೆಕ್ ಮಹಿಂದ್ರಾ, ಇನ್ಫೋಸಿಸ್, ಯುರೇಕಾ ಫೋರ್ಬ್ಸ್, ಜಸ್ಟ್ ಡಯಲ್, ರಿಲಯನ್ಸ್, ಅಪೊಲೊ, ಟ್ರೈಡೆಂಟ್, ಕಲ್ಯಾಣಿ ಮೋಟರ್ಸ್, ಎಚ್ ಜಿ ಎಸ್, ಎನ್ ಟಿ ಟಿ ಎಫ್ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ.

ನೋಂದಾವಣಿ

ಆಕಾಂಕ್ಷಿಗಳು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆನ್ಲೈನ್ ವಿಳಾಸ www.kledetreecollege.org

ಫ್ರೆಶರ್ಸ್ ಮತ್ತು ಅನುಭವಿ ಉದ್ಯೋಗಾಸಕ್ತರು ಭಾಗವಹಿಸಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ವಿದ್ಯಾರ್ಥಿ ಸಂಯೋಜಕರಾದ ರಕ್ಷಿತ್ (8105423181), ಅರ್ಜುನ್ (8152928984) ಹಾಗು ಯಶ್ವನ್ಥ್ (9663248791) ರವರನ್ನು ಭೇಟಿ ಸಂಪರ್ಕಿಸಬಹುದಾಗಿದೆ.

ಬೃಹತ್ ಉದ್ಯೋಗ ಮೇಳ

ಉದ್ಯೋಗ ಮೇಳ ನಡೆಯುವ ಸ್ಥಳ: KLE Society's Degree College, Opp. to BDA complex, 2nd stage, 3rd block Nagarabhavi, Bengaluru

ಉದ್ಯೋಗ ಮೇಳ ನಡೆಯುವ ದಿನಾಂಕ:03-02-2018

ಉದ್ಯೋಗ ಮೇಳ ನಡೆಯುವ ಸಮಯ: ಬೆಳಿಗ್ಗೆ 8 ರಿಂದ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ ಮೇಳಕ್ಕೆ ಹೋಗುವ ಮುನ್ನ

ಮೊದಲನೆಯದಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಅಲ್ಲಿಗೆ ಹೋಗುವ ಮುನ್ನ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ.

ಸರಳವಾದ ಉಡುಗೆ ಧರಿಸಿ. ಮೇಕಪ್ ಸಹ ಸರಳವಾಗಿ ಗೌರವಯುತವಾಗಿದ್ದು, ಸ್ಮಾರ್ಟ್ ಲುಕ್ ಕೊಡುವಂತೆ ಇರಬೇಕು.

ನಿಮ್ಮ ಸಾಮರ್ಥ್ಯ, ಕೆಲಸದ ಬಗೆಗಿರುವ ಆಸಕ್ತಿ, ಶ್ರಮ, ದುಡಿಮೆ, ಪ್ರಾಮಾಣಿಕತನದ ಬಗ್ಗೆ ಹೇಳಿ. ನೆನಪಿರಲಿ, ಆತ್ಮಪ್ರಶಂಸೆ ಅತಿಯಾಗದಂತೆ ಗಮನ ವಹಿಸಿ.

ನಿಮಗಿರುವ ಪರಿಣತಿ, ವಿಶೇಷ ಅರಿವು, ಎಂಥ ಒತ್ತಡಕ್ಕೂ ಒಳಗಾಗದೇ ದುಡಿಯುವ ಮನೋಭಾವ, ಎಲ್ಲದರಲ್ಲೂ ನಿಮಗಿರುವ ಜ್ಞಾನದ ಬಗ್ಗೆ ತಿಳಿಸಿ ಅವರ ಗಮನ ಸೆಳೆಯಿರಿ.

ಅಗತ್ಯ ದಾಖಲೆಗಳನ್ನು ಕೊಂಡೊಯ್ಯಿರಿ

ರೆಸ್ಯುಮ್ ಮತ್ತು ಬಯೋಡೆಟಾ.

ಕನಿಷ್ಠ ಮೂರು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.

ಭಾವ ಚಿತ್ರವಿರುವ ಗುರುತು ಚೀಟಿಗಳು ಹಾಗು ಅವುಗಳ ಝೆರಾಕ್ಸ್ ಪ್ರತಿಗಳು.

ಈ ಹಿಂದೆ ಎಲ್ಲಾದರು ಕೆಲಸ ಮಾಡಿದ್ದರೆ ಅದರ ಸೇವಾನುಭವದ ಪ್ರಮಾಣ ಪತ್ರ

English summary
Mega job fair is being held on February 3 at KLE Society graduate college in Nagarbavi, Bangalore.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia